ETV Bharat / international

ತೈಲಬೆಲೆ ಏರಿಕೆ ಹಿನ್ನೆಲೆ: ಭರಪೂರ ಆದಾಯ ಹೆಚ್ಚಿಸಿಕೊಂಡ ಅರಾಮ್ಕೋ ಕಂಪನಿ.. ಮೌಲ್ಯ ಎಷ್ಟು ಗೊತ್ತಾ?

ಸೌದಿ ಅರೇಬಿಯಾದ ಅತಿದೊಡ್ಡ ತೈಲ ಕಂಪನಿ ಅರಾಮ್ಕೋ ಬರೋಬ್ಬರಿ $2 ಟ್ರಿಲಿಯನ್​ ಡಾಲರ್ ಮೌಲ್ಯಗಳಿಸಿದ್ದು, ಈ ಮೂಲಕ ಹೊಸ ದಾಖಲೆ ಬರೆದಿದೆ.

author img

By

Published : Oct 6, 2021, 9:47 PM IST

Saudi Aramco
Saudi Aramco

ದುಬೈ: ಸೌದಿ ಅರೇಬಿಯಾದ ತೈಲ ಕಂಪನಿ ಅರಾಮ್ಕೋ ಕಂಪನಿ ಮೌಲ್ಯ 2 ಟ್ರಿಲಿಯನ್ ಡಾಲರ್​​​ಗೆ ತಲುಪಿದೆ. ಈ ಮೂಲಕ ವ್ಯಾಪಾರದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದೆ.

ಸದ್ಯ ಅರಾಮ್ಕೋ ಮಾರುಕಟ್ಟೆ ಮೌಲ್ಯವು ಮೈಕ್ರೋಸಾಫ್ಟ್​ ಹಾಗೂ ಆ್ಯಪಲ್​​ ಸರಿಸಮವಾಗಿದೆ ಎನ್ನಲಾಗಿದೆ. ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್​ಗೆ 82 ಡಾಲರ್​ ತಲುಪುತ್ತಿದ್ದಂತೆ ಇಷ್ಟೊಂದು ಏರಿಕೆ ಕಂಡು ಬಂದಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿರಿ: 177,000 ವರ್ಷಗಳ ಹಿಂದೆ ಭಾರತದಲ್ಲಿ ಅಚ್ಯುಲಿಯನ್​ ಕಲ್ಲಿನ ಟೂಲ್​ಕಿಟ್​ ಬಳಕೆ: ಅಧ್ಯಯನ

ಕೊರೊನಾ ಮಹಾಮಾರಿ ಹಾಗೂ ಇತರ ಆರ್ಥಿಕ ಸಂಕಷ್ಟದ ಮಧ್ಯೆ ಕೂಡ ತೈಲ ಬೆಲೆ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಅರಾಮ್ಕೋ ಹೆಚ್ಚಿನ ತೈಲ ಮಾರಾಟ ಮಾಡ್ತಿದ್ದು, ಸುಮಾರು 37.6 ರಿಯಾಲ್​ಗಳಷ್ಟು ಷೇರು ಸಹ ಹೊಂದಿದೆ. ಕಚ್ಚಾ ತೈಲ ಬೆಲೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಷೇರುಗಳು ಕೂಡ ಹೆಚ್ಚಿನ ಬೆಲೆ ಪಡೆದುಕೊಂಡಿವೆ.

ವಾರ್ಷಿಕ ಗಳಿಕೆಯಲ್ಲಿ ಕೆಲವೊಂದು ಏರಿಳಿತದ ಹೊರತಾಗಿ ಕೂಡ ಕಂಪನಿ 2024ರವರೆಗೆ $ 75 ಬಿಲಿಯನ್​ ವಾರ್ಷಿಕ ಲಾಭಾಂಶ ಷೇರುದಾರರಿಗೆ ನೀಡುವ ಭರವಸೆ ನೀಡಿದೆ. ಅರಾಮ್ಕೋ ಅತಿ ದೊಡ್ಡ ತೈಲ ಹಾಗೂ ಅನಿಲ ಉತ್ಪನ್ನಗಳನ್ನ ಉತ್ಪಾದನೆ ಮಾಡ್ತಿದ್ದು, ಬೇರೆ ಬೇರೆ ದೇಶಗಳಿಗೆ ತೈಲ ಪೂರೈಕೆ ಮಾಡುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.