ETV Bharat / international

ಇರಾಕ್​ನ ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟ : 30 ಮಂದಿ ಸಾವು, ಹಲವರಿಗೆ ಗಾಯ - ಇರಾಕ್

ಪೂರ್ವ ಬಾಗ್ದಾದ್​ನ ಮಾರುಕಟ್ಟೆಯಲ್ಲಿ ಬಾಂಬ್ ಸ್ಪೋಟ ಸಂಭವಿಸಿ ಸಾವು-ನೋವು ಉಂಟಾಗಿದೆ. ಬಕ್ರೀದ್ ಹಬ್ಬಕ್ಕೆ ಒಂದು ದಿನ ಬಾಕಿ ಇರುವಾಗ ಸ್ಫೋಟ ನಡೆದಿದೆ.

Roadside bomb kills 30 in Baghdad market
ಇರಾಕ್​ನ ಮಾರುಕಟ್ಟೆಯಲ್ಲಿ ಬಾಂಬ್ ಸ್ಪೋಟ
author img

By

Published : Jul 20, 2021, 8:55 AM IST

ಬಾಗ್ದಾದ್ : ಇರಾಕ್​ನ ಸದರ್​ ಸಿಟಿಯ ವಹಾಲಿಯತ್​ನ ಮಾರುಕಟ್ಟೆಯೊಂದರ ರಸ್ತೆ ಬದಿ ಬಾಂಬ್ ಸ್ಫೋಟ ಸಂಭವಿಸಿದ ಪರಿಣಾಮ 30 ಜನರು ಮೃತಪಟ್ಟು ಹಲವರು ಗಾಯಗೊಂಡ ಘಟನೆ ನಡೆದಿದೆ. ಈ ಬಗ್ಗೆ ಇರಾಕ್ ವೈದ್ಯಕೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈದುಲ್ ಅಝ್ಹಾ (ಬಕ್ರೀದ್ ಹಬ್ಬ)ಗೆ ಒಂದು ದಿನ ಬಾಕಿ ಇರುವಾಗ ಸ್ಫೋಟ ಸಂಭವಿಸಿದೆ. ಹಬ್ಬದ ಹಿನ್ನೆಲೆ ಮಾರುಕಟ್ಟೆಯಲ್ಲಿ ಹೆಚ್ಚಿನ ಜನ ಜಂಗುಳಿ ಇತ್ತು. ಘಟನೆಯಿಂದ ಮಾರುಕಟ್ಟೆಯ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಓದಿ : 950 ತಾಲಿಬಾನ್​ ಉಗ್ರರ ಸಾವು, 500 ಮಂದಿಗೆ ಗಾಯ: ಅಫ್ಘಾನ್ ಸೇನೆ​ ಭರ್ಜರಿ ಕಾರ್ಯಾಚರಣೆ

ಯಾವುದೇ ಭಯೋತ್ಪಾದಕ ಗುಂಪುಗಳು ಇದುವರೆಗೆ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ. ಆದರೆ, ಇಸ್ಲಾಮಿಕ್ ಸ್ಟೇಟ್ ಉಗ್ರರು ಈ ಹಿಂದೆ ಇದೇ ರೀತಿಯ ದಾಳಿಗಳನ್ನು ಮಾಡಿದ್ದಾರೆ.

ಸ್ಫೋಟದ ಬಳಿಕ ಫೆಡರಲ್ ಪೊಲೀಸ್ ರೆಜಿಮೆಂಟ್ ಕಮಾಂಡರ್ ಮೂಲಕ ಮಾರುಕಟ್ಟೆ ಮೇಲೆ ಕಣ್ಗಾವಲು ಇಡಲಾಗಿದೆ ಎಂದು ಇರಾಕ್ ಪ್ರಧಾನಿ ಮುಸ್ತಫಾ ಅಲ್ - ಖಾದಿಮಿ ಹೇಳಿದ್ದಾರೆ. ಪೂರ್ವ ಇರಾಕ್​ನಲ್ಲಿ ಈ ವರ್ಷದ ನಡೆದ ಮೂರನೇ ಬಾಂಬ್ ಸ್ಫೋಟ ಇದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.