ಸನಾ, ಯೆಮೆನ್: ಸೌದಿ ನೇತೃತ್ವದಲ್ಲಿ ಯೆಮೆನ್ ಕೇಂದ್ರ ಪ್ರಾಂತ್ಯದಲ್ಲಿ ಏರ್ಸ್ಟ್ರೈಕ್ ನಡೆಸಲಾಗಿದ್ದು, ಸುಮಾರು 30ಕ್ಕೂ ಹೆಚ್ಚು ಮಂದಿ ಹೌಥಿ ಬಂಡುಕೋರರು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಯೆಮೆನ್ ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.
ಯೆಮೆನ್ನ ಪಶ್ಚಿಮ ಸಿರ್ವಾ ಜಿಲ್ಲೆಯ ಕೆಲ ಸ್ಥಳಗಳು ಮತ್ತು ಅದರ ಸುತ್ತಮುತ್ತಲಿನ ಬಂಡುಕೋರ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಬಂಡುಕೋರರು ಮಾತ್ರವಲ್ಲದೇ, ಸುಮಾರು 13 ಪಿಕ್ ಅಪ್ ವಾಹನಗಳನ್ನು ನಾಶಮಾಡಲಾಗಿದೆ ಎಂದು ಮೂಲವು ಕ್ಸಿನುವಾ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದೆ.
ಸಿರ್ವಾ ಜಿಲ್ಲೆಯಲ್ಲಿ ಸುಮಾರು 23 ವೈಮಾನಿಕ ದಾಳಿಗಳನ್ನು ಸೌದಿ ನೇತೃತ್ವದಲ್ಲಿ ಮಾಡಲಾಗಿದೆ ಎಂದು ಹೌಥಿ ನಿಯಂತ್ರಣದಲ್ಲಿರುವ ಅಲ್-ಮಸೀರಾ ಟಿವಿ ವರದಿ ಮಾಡಿದೆ. ಆದರೆ ದಾಳಿಯ ಬಗ್ಗೆ ಆ ಟಿವಿ ಹೆಚ್ಚು ಮಾಹಿತಿ ನೀಡಿಲ್ಲ.
ಹೌಥಿ ಸೇನೆ ಇರಾನ್ ಬೆಂಬಲಿತ ಬಂಡುಕೋರ ಗುಂಪಾಗಿದ್ದು, ಈ ಮೊದಲು ಫೆಬ್ರವರಿಯಲ್ಲಿ ಸೌದಿ ಅರೇಬಿಯಾದಲ್ಲಿರುವ ತೈಲ ಸಂಪತ್ತಿನ ಘಟಕಗಳನ್ನು ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನ ಮಾಡಿತ್ತು. ಈಗ ಯೆಮೆನ್ ಬೆಂಬಲಕ್ಕ ಸೌದಿ ಇದ್ದು, ಹೌಥಿಗಳನ್ನು ಮಟ್ಟ ಹಾಕಲು ಮುಂತಾಗಿದೆ.
ಇದನ್ನೂ ಓದಿ: ಸೆಪ್ಟೆಂಬರ್ 24ರಂದು ಮೋದಿ-ಬೈಡನ್ ಮಹತ್ವದ ಭೇಟಿ: ಕ್ವಾಡ್ ಶೃಂಗದಲ್ಲಿ ಭಾಗಿ