ಜೆರುಸಲೇಂ( ಇಸ್ರೇಲ್): ಜಗತ್ತು ಕೊರೊನಾ ವೈರಸ್ನಿದಾಗಿ ಭೀತಿಗೊಳಗಾಗಿದೆ. ಈ ನಡುವೆ ವೈರಸ್ ಹರಡದಂತೆ ವಿವಿಧ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
-
Prime Minister of Israel Benjamin Netanyahu @netanyahu encourages Israelis to adopt the Indian way of greeting #Namaste at a press conference to mitigate the spread of #coronavirus pic.twitter.com/gtSKzBDjl4
— India in Israel (@indemtel) March 4, 2020 " class="align-text-top noRightClick twitterSection" data="
">Prime Minister of Israel Benjamin Netanyahu @netanyahu encourages Israelis to adopt the Indian way of greeting #Namaste at a press conference to mitigate the spread of #coronavirus pic.twitter.com/gtSKzBDjl4
— India in Israel (@indemtel) March 4, 2020Prime Minister of Israel Benjamin Netanyahu @netanyahu encourages Israelis to adopt the Indian way of greeting #Namaste at a press conference to mitigate the spread of #coronavirus pic.twitter.com/gtSKzBDjl4
— India in Israel (@indemtel) March 4, 2020
ಈ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು, ತಮ್ಮ ದೇಶದ ಜನರಿಗೆ ವಿಶೇಷ ಕಿವಿಮಾತೊಂದನ್ನು ಹೇಳಿದ್ದಾರೆ. ಶುಭಾಶಯ ವಿನಿಮಯಕ್ಕೆ ತಮ್ಮ ದೇಶದ ಶೇಕ್ ಹ್ಯಾಂಡ್ ಸಂಪ್ರದಾಯನ್ನು ಬಿಟ್ಟು ಭಾರತದ 'ನಮಸ್ತೆ' ಸಂಪ್ರದಾಯವನ್ನು ಅನುಸರಿಸಿ ಎಂದು ಹೇಳಿದ್ದಾರೆ. ಈ ಮೂಲಕ ಮಾರಕ ವೈರಸ್ ತಡೆಗಟ್ಟುವ ಕ್ರಮವನ್ನು ಅನುಸರಿಸಲು ಇಸ್ರೇಲ್ ಪ್ರಧಾನಿ ತಿಳಿಸಿದ್ದಾರೆ.
ಇಸ್ರೇಲ್ ಆರೋಗ್ಯ ಸಚಿವಾಲಯದ ಪ್ರಕಾರ, ದೇಶದಲ್ಲಿ ಪ್ರಸ್ತುತ ಕನಿಷ್ಠ 15 ಶಂಕಿತ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ದೇಶದಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಹಲವಾರು ಕ್ರಮಗಳನ್ನು ಘೋಷಿಸಲಾಗುವುದು ಎಂದು ನೆತಾನ್ಯಹು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.