ಕುವೈತ್: ಕುವೈತ್ ರಾಜ ಶೇಖ್ ಸಬಾ ಅಲ್ ಅಹಮದ್ ಅಲ್ ಸಬಾ ಮಂಗಳವಾರ ಮೃತಪಟ್ಟಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದಾಗಿ ಜುಲೈನಲ್ಲಿ ಅಮೆರಿಕದ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಇವರು 1990ರ ಕೊಲ್ಲಿ ಯುದ್ಧದ ನಂತರ ಇರಾಕ್‌ನೊಂದಿಗೆ ನಿಕಟ ಸಂಬಂಧ ಮತ್ತು ಇತರ ಪ್ರಾದೇಶಿಕ ಬಿಕ್ಕಟ್ಟುಗಳನ್ನು ಪರಿಹರಿಸಲು ಶ್ರಮಿಸಿದ್ದರು. ವೈಸ್ ಮ್ಯಾನ್ ಆಫ್ ದಿ ರೀಜಿಯನ್ ಎಂದು ಪ್ರಸಿದ್ಧರಾಗಿದ್ದರು. ಕುವೈತ್ ಆಡಳಿತ ನಡೆಸಿದ ಕುಟುಂಬದ 15ನೇ ದೊರೆಯಾಗಿ ಇವರು ದೇಶದ ಆಡಳಿತ ನಿರ್ವಹಿಸಿದರು.
ಕುವೈತ್ ರಾಜರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕುವೈತ್ ಹಾಗೂ ಅರಬ್ ಜಗತ್ತು ಇಂದು ನಾಯಕನನ್ನು ಕಳೆದುಕೊಂಡಿದೆ. ಭಾರತದ ಒಳ್ಳೆಯ ಸ್ನೇಹಿತ ಹಾಗೂ ಉತ್ತಮ ಆಡಳಿತಗಾರರಾಗಿದ್ದರು,ಉಭಯ ದೇಶಗಳ ಬಾಂಧವ್ಯ ಗಟ್ಟಿಗೆ ಅವರು ಪ್ರಮುಖ ಕಾರಣ. ಹಾಗೆಯೇ ಕುವೈತ್ನಲ್ಲಿ ಭಾರತೀಯ ಸಮುದಾಯದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಅವರ ಕುಟುಂಬಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ಸಿಗಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.