ETV Bharat / international

'ಇಸ್ರೇಲ್ ಜೊತೆಗಿನ ಸಂಘರ್ಷ ದುಬಾರಿಯಾದರೂ ಜೆರುಸಲೇಂಗಾಗಿ ಹೋರಾಡುವುದೊಂದೇ ಮಾರ್ಗ' - israel palestine conflict

ಈ ಸಂಘರ್ಷ ನಮಗೆ ದುಬಾರಿಯಾಗಿದ್ದರೂ ಜೆರುಸಲೇಂ ಅನ್ನು ರಕ್ಷಿಸಲು ಹಾಗೂ ಸ್ವಾತಂತ್ರ್ಯದ ಏಕೈಕ ಮಾರ್ಗ ಇದಾಗಿದೆ ಎಂದು ಪ್ಯಾಲೆಸ್ತೀನ್​ನ ಇಸ್ಲಾಮಿಕ್ ಜಿಹಾದ್ ಗುಂಪಿನ ನಾಯಕ ಜಿಯಾದ್​ ನಖ್ಲೇಹ್ ತಿಳಿಸಿದ್ದಾರೆ.

israel palestine conflict
ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ವೈಮಾನಿಕ ದಾಳಿ
author img

By

Published : May 20, 2021, 1:31 PM IST

ಬೈರುತ್​ (ಲೆಬನಾನ್​​): ಇಸ್ರೇಲ್​ ವಿರುದ್ಧ ಹೋರಾಡಿ ಗೆಲ್ಲಲಾಗುವುದಿಲ್ಲ, ಇದಕ್ಕೆ ನಾವು ತಲೆದಂಡ ತೆರಬೇಕಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿದಿದ್ದರೂ ಕೂಡ ಗಾಜಾ ದಾಳಿ ನಡೆಸುತ್ತಿರುವುದು ಜೆರುಸಲೇಂಗಾಗಿ ಎಂದು ಪ್ಯಾಲೆಸ್ತೀನ್​ನ ಇಸ್ಲಾಮಿಕ್ ಜಿಹಾದ್ ಗುಂಪಿನ ನಾಯಕ ಹೇಳಿದ್ದಾರೆ.

ಬೈರುತ್​ನ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಪ್ಯಾಲೆಸ್ತೀನ್​ನ ಇಸ್ಲಾಮಿಕ್ ಜಿಹಾದ್ ಗುಂಪಿನ ನಾಯಕ ಜಿಯಾದ್​ ನಖ್ಲೇಹ್, ಪ್ಯಾಲೆಸ್ತೀನ್ ಬಂಡುಕೋರ ಸಂಘಟನೆಗಳಾದ ಹಮಾಸ್​ ಮತ್ತು ಫತಾ ನಡುವೆಯೇ ಭಿನ್ನಭಿಪ್ರಾಯವಿದೆ. ಇವರಿಬ್ಬರೂ ಜೊತೆಯಾಗದೇ ಇಸ್ರೇಲ್​ ವಿರುದ್ಧ ಹೋರಾಡುವುದು ಅಷ್ಟು ಸುಲಭವಲ್ಲ. ಆದರೂ ಗಾಜಾ ಇಸ್ರೇಲ್ ಮೇಲೆ ಪವಾಡಸದೃಶ ದಾಳಿಗಳನ್ನು ನಡೆಸಿದೆ. ಈ ಯುದ್ಧ ನಮಗೆ ದುಬಾರಿಯಾಗಿದ್ದರೂ ಜೆರುಸಲೇಂ ಅನ್ನು ರಕ್ಷಿಸಲು ಹಾಗೂ ಸ್ವಾತಂತ್ರ್ಯದ ಏಕೈಕ ಮಾರ್ಗ ಇದಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ: 69 ಮಕ್ಕಳು ಸೇರಿ 256 ಮಂದಿ ಸಾವು

ದಾಳಿ ವಿಚಾರದಲ್ಲಿ ಮೌನವಾಗಿರುವ ಅರಬ್ ರಾಷ್ಟ್ರಗಳೊಂದಿಗಿನ ಶಾಂತಿ ಒಪ್ಪಂದಗಳು ಅಥವಾ ಪರಮಾಣು ಶಸ್ತ್ರಾಸ್ತ್ರಗಳು, ಯುದ್ಧ ವಿಮಾನಗಳು ಇಸ್ರೇಲಿಗರಿಗೆ ಭದ್ರತೆ ಮತ್ತು ಶಾಂತಿಯನ್ನು ನೀಡಬಹುದು. ನಮ್ಮ ಬಳಿ ಎರಡು ಆಯ್ಕೆಗಳಿವೆ - ಒಂದು ಎಲ್ಲವನ್ನೂ ನೀಡಿ ಇಸ್ರೇಲ್​ಗೆ ಶರಣಾಗಬೇಕು, ಇಲ್ಲವೇ ಎಲ್ಲದಕ್ಕಾಗಿ ಇಸ್ರೇಲ್​ ವಿರುದ್ಧ ಹೋರಾಡಬೇಕು ಎಂದು ನಖ್ಲೇಹ್ ಅಭಿಪ್ರಾಯಪಟ್ಟಿದ್ದಾರೆ.

ಇಸ್ರೇಲ್​ನ ಜೆರುಸಲೇಂನಲ್ಲಿರುವ ಅಲ್‌-ಅಕ್ಸಾ ಮಸೀದಿಯು ಮುಸ್ಲಿಮರು ಹಾಗೂ ಯಹೂದಿಗಳಿಗೆ ಪವಿತ್ರವಾದ ಸ್ಥಳವಾಗಿದ್ದು, ಮಸೀದಿ ಜಾಗದ ವಿಚಾರವಾಗಿ ಅನೇಕ ವರ್ಷಗಳಿಂದ ಉಭಯ ರಾಷ್ಟ್ರಗಳ ನಡುವೆ ಗಲಾಟೆ ನಡೆಯುತ್ತಲೇ ಬಂದಿದೆ. ಈದ್​ ಹಬ್ಬದ ಸಂದರ್ಭದಲ್ಲಿ ಇದೇ ವಿಚಾರ ಮತ್ತೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದು, ದಾಳಿ ಮುಂದುವರೆದಿದೆ. ದಾಳಿಯಲ್ಲಿ 69 ಮಕ್ಕಳು ಸೇರಿದಂತೆ ಒಟ್ಟು 256 ಮಂದಿ ಸಾವನ್ನಪ್ಪಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ. ಬಹುಪಾಲು ಸಾವು-ನೋವು ಪ್ಯಾಲೆಸ್ತೀನ್​ನಲ್ಲಿ ಸಂಭವಿಸಿದ್ದು, 67 ಮಕ್ಕಳು ಸೇರಿ 244 ಜನರು ಬಲಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.