ಜೆರುಸಲೆಮ್: ಇಸ್ರೇಲಿ ಯುದ್ಧ ವಿಮಾನಗಳು ಗಾಜಾ ಪ್ರದೇಶದಲ್ಲಿನ ಇಸ್ಲಾಮಿಕ್ ಹಮಾಸ್ ಸಂಘಟನೆಗೆ ಸೇರಿದ ಭೂಗತ ಮಿಲಿಟರಿ ತಾಣಗಳ ಮೇಲೆ ದಾಳಿ ನಡೆಸಿವೆ.
ಹಮಾಸ್ನ ಸಶಸ್ತ್ರ ವಿಭಾಗವಾದ ಅಲ್-ಕಸ್ಸಮ್‌ಗೆ ಸೇರಿದ ಕ್ಷಿಪಣಿ ಮಿಲಿಟರಿ ತಾಣಗಳ ಮೆಲೆ ಇಸ್ರೇಲ್ ಸೈನ್ಯದ ಯುದ್ಧ ವಿಮಾನಗಳು ದಾಳಿ ನಡೆಸಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇಸ್ರೇಲಿ ಸೇನೆಯ ವಕ್ತಾರರ ಪ್ರಕಾರ, ಈ ದಾಳಿ ಶಸ್ತ್ರಾಸ್ತ್ರ ಉತ್ಪಾದನಾ ತಾಣಗಳು ಮತ್ತು ಭೂಗತ ಮಿಲಿಟರಿಯನ್ನು ಗುರಿಯಾಗಿಸಿಕೊಂಡು ನಡೆದಿದೆ. ಗುರುವಾರ ರಾತ್ರಿ ಗಾಜಾದಿಂದ ಹಾರಿಸಿದ ರಾಕೆಟ್‌ಗಳಿಗೆ ನೀಡಿದ ತಿರುಗೇಟು ಇದಾಗಿದೆ ಎಂದು ತಿಳಿಸಿದ್ದಾರೆ.