ಜೆರುಸೆಲೆಂ( ಇಸ್ರೇಲ್): ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವೆ ಕದನ ಜೋರಾಗಿದೆ. ಈ ನಡುವೆ ಗಾಜಾದಿಂದ ಉಡಾಯಿಸಲಾದ ರಾಕೆಟ್ಗಳನ್ನ ಇಸ್ರೇಲ್ ಆಕಾಶದಲ್ಲೇ ತಡೆ ಹಿಡಿದಿದೆ ಎಂಬ ಮಾಹಿತಿ ಹೊರ ಬಿದ್ದಿದೆ.
ಪ್ಯಾಲಿಸ್ಟೈನ್ ಉಗ್ರರು ಭಾನುವಾರ ರಾತ್ರಿ ರಾಕೆಟ್ ದಾಳಿ ನಡೆಸಿದ್ದಾರೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಅಷ್ಟೇ ಅಲ್ಲ ಉಗ್ರರು ಹಾರಿಸಿದ ರಾಕೆಟ್ಗಳನ್ನ ತಡೆ ಹಿಡಿದಿದ್ದೇವೆ ಎಂದು ಇಸ್ರೇಲ್ ಹೇಳಿದೆ. ಕಳೆದ ವಾರ ಇಸ್ರೇಲ್ ಜೈಲಿನಿಂದ ಬಂಧಿತ ಆರು ಪ್ಯಾಲೆಸ್ಟೀನಿಯನ್ ಉಗ್ರರು ತಪ್ಪಿಸಿಕೊಂಡ ಹೋಗಿದ್ದರು. ಇದರಿಂದ ತೀವ್ರ ಮುಖಭಂಗಕ್ಕೆ ಒಳಗಾದ ಇಸ್ರೇಲ್ ತಪ್ಪಿಸಿಕೊಂಡಿರುವ ಬಂಧಿತ ಪ್ಯಾಲೆಸ್ಟೀನಿಯನ್ನರ ಸೆರೆ ಹಿಡಿಯಲು ತೀವ್ರ ಶೋಧ ಕೈಗೊಂಡಿದೆ. ಹೀಗಾಗಿ ಎರಡೂ ದೇಶಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ.
ಈ ನಡುವೆ ಇಸ್ರೇಲ್ ಸೇನೆ ಜೈಲಿನಿಂದ ತಪ್ಪಿಸಿಕೊಂಡು ಹೋಗಿದ್ದ ಆರು ಮಂದಿಯಲ್ಲಿ ನಾಲ್ವರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ತಲೆ ತಪ್ಪಿಸಿಕೊಂಡಿರುವ ಇನ್ನಿಬ್ಬರಿಗಾಗಿ ತೀವ್ರ ಶೋಧ ಕೈಗೊಂಡಿದೆ. ಕೈದಿಗಳ ನೆರವಿಗೆ ಧಾವಿಸಿರುವ ಪ್ಯಾಲೆಸ್ಟೈನ್ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದೆ ಎನ್ನಲಾಗಿದೆ.
ಇದನ್ನೂ ಓದಿ: ಉತ್ತರ ಕೊರಿಯಾದಿಂದ ಕ್ರೂಸ್ ಕ್ಷಿಪಣಿಗಳ ಪರೀಕ್ಷೆ ಯಶಸ್ವಿ.. ವಿಶ್ವದ ದೊಡ್ಡಣ್ಣನ ವಿರುದ್ಧ ರಣತಂತ್ರ?
ಇನ್ನು ಇಸ್ರೇಲ್ ಹಮಾಸ್ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರಿಸಿದೆ. ಇತ್ತೀಚೆಗಷ್ಟೇ ಗಾಜಾ ಮತ್ತು ಜೆರುಸೆಲೆಂ ನಡುವೆ ಕದನ ವಿರಾಮ ಘೋಷಣೆಯಾಗಿತ್ತು. ಆದರೆ, ಇಸ್ರೇಲ್ ಜೈಲಿನಿಂದ ಆರು ಕೈದಿಗಳು ತಪ್ಪಿಸಿಕೊಂಡ ಬಳಿಕ ಮತ್ತೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ.