ETV Bharat / international

Omicron COVID-19 variant: ಒಮಿಕ್ರೋನ್ ಮುನ್ನೆಚ್ಚರಿಕೆ, ವಿದೇಶಿಯರಿಗೆ ಇಸ್ರೇಲ್ ಪ್ರವೇಶ ನಿಷೇಧ - ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಹೇಳಿಕೆ

ಹೊಸ ಕೋವಿಡ್ ರೂಪಾಂತರಿ ಒಮಿಕ್ರೋನ್ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಮುಂದಿನ 14 ದಿನಗಳವರೆಗೆ ವಿದೇಶಿಯರಿಗೆ ಇಸ್ರೇಲ್ ಪ್ರವೇಶ ನಿರ್ಬಂಧಿಸಲಾಗಿದೆ.

Omicron COVID-19 variant
ಸಾಂದರ್ಭಿಕ ಚಿತ್ರ
author img

By

Published : Nov 28, 2021, 7:48 AM IST

ಜೆರುಸಲೇಂ(ಇಸ್ರೇಲ್): ಕೋವಿಡ್-19 ಹೊಸ ರೂಪಾಂತರಿ ಒಮಿಕ್ರೋನ್ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ವಿದೇಶಿ ಪ್ರಜೆಗಳ ಪ್ರವೇಶವನ್ನು ನಿಷೇಧಿಸಲು ಇಸ್ರೇಲ್​​ ಸರ್ಕಾರ ನಿರ್ಧರಿಸಿದೆ. ಸಾಂಕ್ರಾಮಿಕ ರೋಗದ ವಿರುದ್ಧ ನಿರ್ಬಂಧಗಳನ್ನು ಮತ್ತೆ ಜಾರಿಗೆ ತರುವ ಬಗ್ಗೆ ತಡರಾತ್ರಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯ ನಂತರ ಈ ಪ್ರಕಟಣೆ ಹೊರಬಿದ್ದಿದೆ.

ಮುಂದಿನ 14 ದಿನಗಳವರೆಗೆ ವಿದೇಶಿಯರಿಗೆ ಇಸ್ರೇಲ್ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಪ್ರಧಾನಿ ನಫ್ತಾಲಿ ಬೆನೆಟ್ ಹೇಳಿಕೆಯಲ್ಲಿ ತಿಳಿಸಿದರು. ದೇಶದಲ್ಲಿ ಇಲ್ಲಿಯವರೆಗೆ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಒಮಿಕ್ರೋನ್​​ ರೂಪಾಂತರಿಯ ಒಂದು ಪ್ರಕರಣ ಪತ್ತೆಯಾಗಿದೆ. 50 ಆಫ್ರಿಕನ್ ರಾಷ್ಟ್ರಗಳನ್ನು ರೆಡ್​​ ಅಲರ್ಟ್​ ಝೋನ್​ ಎಂದು ಘೋಷಿಸಲಾಗಿದೆ. ಆ ದೇಶಗಳಿಗೆ ಇಸ್ರೇಲ್​​ ಪ್ರಜೆಗಳು ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ಇದರ ಜೊತೆಗೆ, ಆಫ್ರಿಕಾದಿಂದ ಬರುವ ಇಸ್ರೇಲ್​ ಪ್ರಜೆಗಳು ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ.

'ಕ್ವಾರಂಟೈನ್ ಕೇಂದ್ರಗಳನ್ನು ಮತ್ತೆ ತೆರೆಯಲಾಗುವುದು. ನಾವು ಪ್ರಸ್ತುತ ಅನಿಶ್ಚಿತತೆಯ ಅವಧಿಯಲ್ಲಿದ್ದೇವೆ' ಎಂದು ನಫ್ತಾಲಿ ಬೆನೆಟ್ ಕ್ಯಾಬಿನೆಟ್ ಸಭೆಯಲ್ಲಿ ಹೇಳಿದ್ದಾರೆ. ಪತ್ತೆಯಾದ ಓಮಿಕ್ರಾನ್ ಹೊಸ ತಳಿ ಹಿಂದಿನವುಗಳಿಗಿಂತ ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಹೇಳಲಾಗುತ್ತಿದೆ. ಒಮಿಕ್ರೋನ್​ ವಿರುದ್ಧ ಲಸಿಕೆಗಳು ಎಷ್ಟು ಪರಿಣಾಮಕಾರಿ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆಫ್ರಿಕಾದಲ್ಲಿ ಈ ರೂಪಾಂತರಿ ಮೊದಲು ಪತ್ತೆಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯೂ ಕಳವಳಿಕಾರಿ ಎಂದು ಆತಂಕ ವ್ಯಕ್ತಪಡಿಸಿದೆ.

ಆರೋಗ್ಯ ಸಚಿವಾಲಯದ ಪ್ರಕಾರ, ಮಾರ್ಚ್ 2020ರಿಂದ ಇಸ್ರೇಲ್​​​ನಲ್ಲಿ 8,100ಕ್ಕೂ ಮಂದಿ ಕೋವಿಡ್​​ ಸೋಂಕಿಗೆ ಬಲಿಯಾಗಿದ್ದಾರೆ. ಪ್ರಸ್ತುತ 7,000 ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಇಸ್ರೇಲ್‌ನ 9.4 ಮಿಲಿಯನ್ ಜನಸಂಖ್ಯೆಯ ಸುಮಾರು 57 ಪ್ರತಿ ಶತದಷ್ಟು ಜನರು ಸಂಪೂರ್ಣವಾಗಿ ಕೋವಿಡ್ ಲಸಿಕೆ ಪಡೆದಿದ್ದಾರೆ.

ಇದನ್ನೂ ಓದಿ: ಕೊರೊನಾ ರೂಪಾಂತರಿ 'ಒಮಿಕ್ರೋನ್' ಆತಂಕ: ದಕ್ಷಿಣ ಆಫ್ರಿಕಾ ಸೇರಿ ಈ ದೇಶಗಳಿಗೆ ಪ್ರವೇಶ ನಿಷೇಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.