ETV Bharat / international

ರಾತ್ರೋರಾತ್ರಿ ಸಿರಿಯಾ ಮೇಲೆ ಇಸ್ರೇಲ್​ ವೈಮಾನಿಕ ದಾಳಿ: 11 ಸೇನಾ ಸಿಬ್ಬಂದಿ ಬಲಿ - Israel - Syria conflict

ರಾತ್ರೋರಾತ್ರಿ ಸಿರಿಯಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ ಎಂದು ವರದಿಯಾಗಿದ್ದು, ಸಿರಿಯಾದ 11 ಮಂದಿ ಮಿಲಿಟರಿ ಸಿಬ್ಬಂದಿ ಬಲಿಯಾಗಿದ್ದಾರೆ.

Israel airstrike on Syria kills many
ಸಿರಿಯಾ ಮೇಲೆ ಇಸ್ರೇಲ್​ ವೈಮಾನಿಕ ದಾಳಿ
author img

By

Published : Jun 10, 2021, 10:46 AM IST

ಡಮಾಸ್ಕಸ್​: ಪ್ಯಾಲೆಸ್ತೀನ್ ಜೊತೆ ಕದನ ವಿರಾಮ ಒಪ್ಪಂದ ಮಾಡಿಕೊಂಡಿರುವ ಇಸ್ರೇಲ್​ ಇದೀಗ ರಾತ್ರೋರಾತ್ರಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ಘಟನೆಯಲ್ಲಿ ಸಿರಿಯಾದ ಹನ್ನೊಂದು ಮಂದಿ ಮಿಲಿಟರಿ ಸಿಬ್ಬಂದಿ ಬಲಿಯಾಗಿದ್ದಾರೆಂದು ಅಲ್ಲಿನ ಮಾಧ್ಯಮಗಳು ಹಾಗೂ ವಾರ್​ ಮಾನಿಟರ್​ ವರದಿ ಮಾಡಿವೆ. ಆದರೆ ಸಾವು-ನೋವಿನ ಬಗ್ಗೆ ಸರಿಯಾದ ಮಾಹಿತಿ ತಿಳಿದು ಬಂದಿಲ್ಲ.

ಸಿರಿಯಾ ಹಾಗೂ ಇಸ್ರೇಲ್​ಗೆ ಗಡಿಯಾಗಿರುವ ಲೆಬನಾನ್​ನಿಂದ ಮಧ್ಯ ಮತ್ತು ದಕ್ಷಿಣ ಸಿರಿಯಾ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ ಎಂದು ಸಿರಿಯನ್ ರಾಜ್ಯ ಸುದ್ದಿ ಸಂಸ್ಥೆ 'ಸನಾ' ತಿಳಿಸಿದೆ. ಘಟನೆ ಸಂಬಂಧ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಇಸ್ರೇಲ್-ಪ್ಯಾಲೆಸ್ತೀನ್​ ಕದನ ವಿರಾಮ ಒಪ್ಪಂದ ಸ್ವಾಗತಿಸಿದ ಜಾಗತಿಕ ನಾಯಕರು

ಕಳೆದ ತಿಂಗಳಷ್ಟೇ ಜೆರುಸಲೇಂನ ಅಲ್‌-ಅಕ್ಸಾ ಮಸೀದಿ ವಿಚಾರದಲ್ಲಿ ಉಲ್ಬಣಗೊಂಡಿದ್ದ ಇಸ್ರೇಲ್ ಮತ್ತು ಪ್ಯಾಲೆಸ್ತೀನ್​ ನಡುವಿನ ಯುದ್ಧದಲ್ಲಿ 250ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸಾವಿರಾರು ಜನರು ಗಾಯಗೊಂಡಿದ್ದರು. 11 ದಿನಗಳ ಬಳಿಕ ಉಭಯ ರಾಷ್ಟ್ರಗಳು ಕದನ ವಿರಾಮದ ಒಪ್ಪಂದವನ್ನು ಮಾಡಿಕೊಂಡು ಸಂಘರ್ಷಕ್ಕೆ ತಾತ್ಕಾಲಿಕ ಅಂತ್ಯ ಹಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.