ಟೆಹ್ರಾನ್ (ಇರಾನ್): ಅಮೆರಿಕದ ಡ್ರೋನ್ ದಾಳಿಯಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ನ ಜನರಲ್ ಖಾಸೀಂ ಸೊಲೈಮಾನಿ ಹತ್ಯೆಯಾಗಿದ್ದರು.
ಇದೀಗ ಸೊಲೈಮಾನಿ ಬಗ್ಗೆ ಅಮೆರಿಕ ಮತ್ತು ಇಸ್ರೇಲ್‌ಗೆ ಮಾಹಿತಿ ನೀಡಿದ್ದಕ್ಕಾಗಿ ಶಿಕ್ಷೆಗೊಳಗಾದ ವ್ಯಕ್ತಿಯನ್ನು ಗಲ್ಲಿಗೇರಿಸುವುದಾಗಿ ಇರಾನ್ ಪ್ರಕಟಿಸಿದೆ.
ನ್ಯಾಯಾಂಗ ವಕ್ತಾರ ಘೋಲಮ್‌ಹುಸೇನ್ ಇಸ್ಮಾಯಿಲಿ ಅವರು, ಶಿಕ್ಷೆಗೊಳಗಾದ ವ್ಯಕ್ತಿ ಮಹಮೂದ್ ಮೌಸಾವಿ ಮಜ್ದ್ ಆಗಿದ್ದು, ಅವರು ಭದ್ರತಾ ಮಾಹಿತಿಯನ್ನು ಹಂಚಿದ ಅಪರಾಧಿಯಾಗಿದ್ದಾರೆ ಎಂದಿದ್ದಾರೆ.
ಮಜ್ದ್‌ನನ್ನು ಯಾವಾಗ ಗಲ್ಲಿಗೇರಿಸಲಾಗುವುದು ಎಂದು ನ್ಯಾಯಾಂಗ ವಕ್ತಾರ ಇಸ್ಮಾಯಿಲಿ ಹೇಳಲಿಲ್ಲ. ಆದರೂ ಶೀಘ್ರದಲ್ಲೇ ಗಲ್ಲಿಗೇರಿಸಲಾಗುವುದು ಎಂದು ತಿಳಿಸಿದ್ದಾರೆ.