ತೆಹ್ರಾನ್(ಇರಾನ್): ಬಾಗ್ದಾದ್‌ನಲ್ಲಿ ವೈಮಾನಿಕ ದಾಳಿ ನಡೆಸಿ ಇರಾನ್ ಮಿಲಿಟರಿ ಉನ್ನತ ಅಧಿಕಾರಿಯನ್ನು ಕೊಂದ ಆರೋಪದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಹಲವು ಅಧಿಕಾರಿಗಳನ್ನು ಬಂಧಿಸಲು ಇರಾನ್ ಬಂಧನ ವಾರಂಟ್ ಹೊರಡಿಸಿದೆ ಎಂದು ಸ್ಥಳೀಯ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.
ಜನವರಿ 3 ರಂದು ಬಾಗ್ದಾದ್‌ನಲ್ಲಿ ವೈಮಾನಿಕ ದಾಳಿ ನಡೆಸಿ ಇರಾನ್ನ ಹಶೆದ್ ಅಲ್-ಶಾಬಿ ಮಿಲಿಟರಿ ಪಡೆಯ ಮೇಜರ್ ಜನರಲ್ ಕಾಸಿಮ್ ಸುಲೇಮಾನಿಯನ್ನು ಹತ್ಯೆ ಮಾಡಲಾಗಿತ್ತು. ಈ ಕೃತ್ಯದ ಹಿಂದೆ ಟ್ರಂಪ್ ಮತ್ತು 30 ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಇವರ ಮೇಲೆ ಕೊಲೆ ಮತ್ತು ಭಯೋತ್ಪಾದನೆ ಆರೋಪಗಳನ್ನು ಹೊರಿಸಲಾಗಿದೆ ಎಂದು ಇರಾನ್ನ ಪತ್ರಿಕೆ ವರದಿ ಮಾಡಿದೆ ಅಂತ ಪ್ರಾಸಿಕ್ಯೂಟರ್ ಅಲಿ ಅಲ್ಗಸಿಮೆಹ್ರ್(Ali Alqasimehr) ಹೇಳಿದ್ದಾರೆ.
ಬಾಗ್ದಾದ್‌ನಲ್ಲಿ ಅಮೆರಿಕ ವೈಮಾನಿಕ ದಾಳಿ: ಇರಾಕ್ ಸೇನಾ ಪಡೆಯ ಪ್ರಮುಖ ಕಮಾಂಡರ್ ಹತ್ಯೆ
ಟ್ರಂಪ್ ಹೊರತಾಗಿ ಬೇರೆಯವರ ಬಗ್ಗೆ ತಿಳಿದಿಲ್ಲ ಆದರೆ, ಟ್ರಂಪ್ ಅವರ ಅಧ್ಯಕ್ಷೀಯ ಅವಧಿ ಮುಗಿದ ನಂತರವೂ ಈ ವಿಷಯವನ್ನು ಇರಾನ್ ಮುಂದುವರೆಸುವುದು. ಅಲ್ಲದೆ ರೆಡ್ ಕಾರ್ನರ್ ನೋಟಿಸ್ ಹೊರಡಿಸುವಂತೆ ಇಂಟರ್ಪೋಲ್ಗೆ ಇರಾನ್ ಒತ್ತಾಯಿಸಿದೆ ಎಂದು ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.
ವಿನಂತಿಯನ್ನು ಸ್ವೀಕರಿಸಿದ ನಂತರ, ಇಂಟರ್ಪೋಲ್ ಸಮಿತಿಯನ್ನು ಭೇಟಿಯಾಗಿ ತನ್ನ ಸದಸ್ಯ ರಾಷ್ಟ್ರಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಬೇಕೆ ಅಥವಾ ಬೇಡವೇ ಎಂದು ಚರ್ಚಿಸುತ್ತದೆ. ಇಂಟರ್ಪೋಲ್ ಯಾವುದೇ ಸೂಚನೆಗಳನ್ನು ಸಾರ್ವಜನಿಕವಾಗಿ ನೀಡುವ ಅವಶ್ಯಕತೆಯಿಲ್ಲ. ಆದರೂ ಕೆಲವು ಸೂಚನೆಗಳು ಅದರ ವೆಬ್‌ಸೈಟ್‌ನಲ್ಲಿ ಪ್ರಕಟವಾಗುತ್ತವೆ.