ತೆಹ್ರಾನ್: ಮಧ್ಯಪ್ರಾಚ್ಯ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ವಿಷಮ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದೆ. ಈ ಉದ್ವಿಗ್ನತೆಯನ್ನು ಮಾತುಕತೆ ಮೂಲಕ ಮಾತ್ರ ಪರಿಹರಿಸಿಕೊಳ್ಳಬಹುದು ಎಂದು ಕತಾರ್ನ ಎಮಿರ್ ಶೇಖ್ ತಮಿಮ್ ಬಿನ್ ಅಹ್ಮದ್ ಅಲ್ ಥಾನಿ ಭಾನುವಾರ ಇರಾನ್ ಅಧ್ಯಕ್ಷ ಹಸನ್ ರೋಹಾನಿ ಭೇಟಿ ಬಳಿಕ ತಿಳಿಸಿದ್ದಾರೆ.
ಈಗ ಉದ್ಭವಿಸಿರುವ ಬಿಕ್ಕಟ್ಟಿನ ಪರಿಹಾರಕ್ಕೆ ಏಕೈಕ ಮಾರ್ಗ ಇದಾಗಿದೆ. ಸಹೋದರರೊಂದಿಗೆ ಭೇಟಿಯಾದ ಸಭೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ. ಬಾಗ್ದಾದ್‌ನಲ್ಲಿ ಅಮೆರಿಕದ ಉನ್ನತ ಕಮಾಂಡರ್ ಸೊಲೈಮಾನಿ ಹತ್ಯೆ ಮತ್ತು ಇರಾಕ್‌ನಲ್ಲಿನ ಯುಎಸ್ ಗುರಿಗಳ ಮೇಲೆ ಇರಾನ್ ಪ್ರತೀಕಾರದ ಕ್ಷಿಪಣಿ ದಾಳಿಯ ನಂತರ ಗಲ್ಫ್‌ನಲ್ಲಿ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಶೇಖ್ ತಮೀಮ್ ಅವರು ಅಮೆರಿಕದ ಡ್ರೋನ್ ದಾಳಿ ನಂತರ ಇರಾನ್‌ಗೆ ಬಂದ ಮೊದಲ ರಾಷ್ಟ್ರೀಯ ನಾಯಕರಾಗಿದ್ದಾರೆ. ಸ್ನೇಹಪರ ರಾಷ್ಟ್ರಗಳೊಂದಿಗೆ ಸಮನ್ವಯ ಸಾಧಿಸಲು ಪ್ರಯತ್ನಿಸಲಾಗುತ್ತಿದೆ. ಸ್ನೇಹ ರಾಷ್ಟ್ರಗಳೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.