ETV Bharat / international

ಇಸ್ರೇಲ್‌-ಪ್ಯಾಲೆಸ್ತೀನ್‌ ಸಂಘರ್ಷ: ರಾಕೆಟ್‌ ದಾಳಿಗೆ ಕೇರಳ ಮೂಲದ ಮಹಿಳೆ ಸಾವು - Hamas militants

ಜೆರುಸಲೆಮ್​ನ ಮಸ್ಜಿದ್ ಅಲ್ ಅಕ್ಸಾದಲ್ಲಿ ರಂಝಾನ್ ಪ್ರಾರ್ಥನೆ ವೇಳೆ ಪ್ರಾರಂಭವಾದ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಮುಂದುವರೆದಿದೆ. ಸೋಮವಾರದಿಂದ ಎರಡೂ ಕಡೆಯಿಂದ ಪರಸ್ಪರ ರಾಕೆಟ್ ದಾಳಿ ನಡೆಯುತ್ತಿದೆ. ಮಂಗಳವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಭಾರತೀಯ ಮೂಲದ ಮಹಿಳೆ ಸೇರಿ 35 ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

Indian woman l killed in Israel
ಇಸ್ರೇಲ್​ನಲ್ಲಿದ್ದ ಭಾರತೀಯ ಮಹಿಳೆ ಸಾವು
author img

By

Published : May 12, 2021, 6:45 AM IST

Updated : May 12, 2021, 12:36 PM IST

ಜೆರುಸಲೆಮ್: ಗಾಜಾದ ಪ್ಯಾಲೆಸ್ತೀನಿಯನ್ ಬಂಡುಕೋರರು ಇಸ್ರೇಲ್ ಮೇಲೆ ನಡೆಸಿದ ರಾಕೆಟ್ ದಾಳಿಯಲ್ಲಿ 30 ವರ್ಷದ ಭಾರತೀಯ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • I just spoke to the family of Soumya Santosh, victim of Hamas terrorist strike. I expressed my sorrow for their unfortunate loss & extended my condolences on behalf of Israel. The whole country is mourning her loss & we are here for them: Ambassador of Israel to India, Ron Malka pic.twitter.com/5SHmQixtNU

    — ANI (@ANI) May 12, 2021 " class="align-text-top noRightClick twitterSection" data=" ">

ಕೇರಳದ ಇಡುಕ್ಕಿ ಜಿಲ್ಲೆಯ ಸೌಮ್ಯಾ ಸಂತೋಷ್ ಮೃತ ಮಹಿಳೆ. ಈಕೆ ದಕ್ಷಿಣ ಇಸ್ರೇಲ್​ನ ಕರಾವಳಿ ನಗರವಾದ ಅಶ್ಕೆಲೋನ್‌ನ ಮನೆಯೊಂದರಲ್ಲಿ ವೃದ್ಧೆಯೊಬ್ಬರ ಆರೈಕೆ ಕೆಲಸ ಮಾಡುತ್ತಿದ್ದರು. ಗಾಜಾ ಪಟ್ಟಿಯ ಗಡಿ ಪ್ರದೇಶವಾದ ಅಶ್ಕೆಲೋನ್‌ ಮೇಲೆ ಪ್ಯಾಲೆಸ್ತೀನಿಯನ್ ಬಂಡುಕೋರರು ನಡೆಸಿದ ದಾಳಿಯಿಂದ ಭಾರೀ ಬೆಂಕಿ ಅವಘಡ ಸಂಭವಿಸಿದೆ.

  • On behalf of the state of #Israel, I convey heartfelt condolences to the family of Ms. Soumya Santosh, murdered by Hamas indiscriminate terror attack on innocent lives.
    Our hearts are crying with her 9 years old son that lost his mother in this cruel Terrorist attack.

    — Ron Malka 🇮🇱 (@DrRonMalka) May 11, 2021 " class="align-text-top noRightClick twitterSection" data=" ">

ಗಾಜಾ ಮೂಲದ ಬಂಡುಕೋರರು ಸೋಮವಾರ ಸಂಜೆಯಿಂದ ಇಸ್ರೇಲ್ ಮೇಲೆ ಸತತ ರಾಕೆಟ್‌ ದಾಳಿ ನಡೆಸಿದ್ದು, ಮಂಗಳವಾರ ರಾತ್ರಿ 9 ಗಂಟೆಯ ಹೊತ್ತಿಗೆ (ಸ್ಥಳೀಯ ಕಾಲಮಾನ) ನಡೆದ ಹಿಂಸಾಚಾರದಲ್ಲಿ 35 ಜನರು ಮೃತಪಟ್ಟಿದ್ದಾರೆ. ಕರಾವಳಿ ಪ್ರದೇಶದಲ್ಲಿ ಹಮಾಸ್ ಬಂಡುಕೋರರು ಮತ್ತು ಇಸ್ಲಾಮಿಕ್ ಜಿಹಾದಿಗಳನ್ನು ಗುರಿಯಾಗಿಸಿ ಇಸ್ರೇಲ್ ಹಲವು ಬಾರಿ ವಾಯುದಾಳಿ ನಡೆಸಿದೆ.

  • RAW FOOTAGE: This is the moment the Iron Dome intercepted a barrage of rockets over Tel Aviv and central Israel. pic.twitter.com/8jl8OTgWCl

    — Israel Defense Forces (@IDF) May 11, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಗಾಜಾ ಘರ್ಷಣೆ: ರಾಕೆಟ್​ ದಾಳಿಗೆ ಮೂವರು ಇಸ್ರೇಲಿಗರು ಸೇರಿ ಒಟ್ಟು 32 ಮಂದಿ ಸಾವು!

ಮೃತ ಭಾರತೀಯ ಮಹಿಳೆ ಕಳೆದ ಏಳು ವರ್ಷಗಳಿಂದ ಗಂಡನೊಂದಿಗೆ ಇಸ್ರೇಲ್‌ನಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ. ಈಕೆಗೆ ಒಂಬತ್ತು ವರ್ಷದ ಮಗನಿದ್ದಾನೆ. ಮನೆಯ ಮೇಲೆ ನಡೆದ ನೇರ ದಾಳಿಯಿಂದ ಸೌಮ್ಯ ಸಂತೋಷ್ ಮೃತಪಟ್ಟರೆ, ಆಕೆ ಆರೈಕೆ ಮಾಡುತ್ತಿದ್ದ 80 ವರ್ಷದ ವೃದ್ಧೆ ಪ್ರಾಣಾಪಾಯದಿಂದ ಪಾರಾಗಿದ್ದು, ತೀವ್ರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Last Updated : May 12, 2021, 12:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.