ದುಬೈ: ಕುವೈತ್‌ನಲ್ಲಿ ಭಾರತೀಯ ಮೂಲದ ದಂತ ವೈದ್ಯರು ಕೊರೊನಾ ಹೊಡೆತಕ್ಕೆ ಸಾವನ್ನಪ್ಪಿದ್ದಾರೆ. ಡಾ. ವಾಸುದೇವ ರಾವ್ ಅವರು ಕೋವಿಡ್ಗೆ ಬಲಿಯಾದ ದೇಶದ ಎರಡನೇ ವೈದ್ಯ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ರಾವ್ ಅವರು ಕುವೈತ್‌ನಲ್ಲಿರುವ ಭಾರತೀಯ ದಂತವೈದ್ಯರ ಒಕ್ಕೂಟದ ಸದಸ್ಯರಾಗಿದ್ದರು. ಅವರ ನಿಧನಕ್ಕೆ ಒಕ್ಕೂಟ ಸಂಸ್ಥೆ ಸಂತಾಪ ಸೂಚಿಸಿದೆ. ಇದು ಕುವೈತ್‌ನ ಮೊದಲ ವೈದ್ಯಕೀಯ ಸಿಬ್ಬಂದಿಯ ಸಾವು ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ಕುವೈತ್‌ನಲ್ಲಿ ಕೊರೊನಾದಿಂದ 58 ಸಾವು ಸಂಭವಿಸಿದ್ದು 8,688 ಕೊರೊನಾ ಪ್ರಕರಣಗಳು ವರದಿಯಾಗಿದೆ.