ಬೈರುತ್ (ಲೆಬನಾನ್) : ಗಾಜಾ ಹೋರಾಟ ಕಡಿಮೆಯಾಗುತ್ತಿದ್ದಂತೆ ಮತ್ತು ಕದನ ವಿರಾಮ ಘೋಷಣೆಯಾಗುತ್ತಿದ್ದಂತೇ, ಹಮಾಸ್ ಹಿರಿಯ ಅಧಿಕಾರಿಯೊಬ್ಬರು ಸಂದರ್ಶನವೊಂದರಲ್ಲಿ ಪ್ಯಾಲೆಸ್ತೇನಿಯನ್ ಉಗ್ರಗಾಮಿ ಗುಂಪಿಗೆ ಕ್ಷಿಪಣಿಗಳ ಕೊರತೆಯಿಲ್ಲ ಮತ್ತು ಇಸ್ರೇಲ್ ಯುದ್ಧವನ್ನು ಆಯ್ಕೆಮಾಡಿದರೆ ತಿಂಗಳುಗಟ್ಟಲೆ ಬಾಂಬ್ ದಾಳಿ ಮುಂದುವರಿಸಬಹುದು ಎಂದು ಹೇಳಿದ್ದಾರೆ.
ಹಮಾಸ್ ಉಗ್ರರ ವಿರುದ್ಧ 11 ದಿನಗಳ ಯುದ್ಧದಲ್ಲಿ ಇಸ್ರೇಲ್ ಕದನ ವಿರಾಮವನ್ನು ಘೋಷಿಸುವ ಕೆಲವೇ ಗಂಟೆಗಳ ಮೊದಲು ಒಸಾಮಾ ಹಮ್ದಾನ್ ಅಸೋಸಿಯೇಟೆಡ್ ಪ್ರೆಸ್ ಜೊತೆ ಮಾತನಾಡಿದರು.
ದಶಕಗಳಿಂದ ಇಸ್ರೇಲ್ ಹುಡುಕಾಟ ನಡೆಸುತ್ತಿರುವ ಹಮಾಸ್ ಕಮಾಂಡರ್ ಮೊಹಮ್ಮದ್ ಡೀಫ್ ಜೀವಂತವಾಗಿದ್ದಾನೆ ಮತ್ತು ಗಾಜಾ ಮಿಲಿಟರಿ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದ್ದಾನೆ ಎಂದು ಕೂಡ ಹಮ್ದಾನ್ ಹೇಳಿದ್ದಾರೆ.
ಅಬು ಖಲೀದ್ ಎಂದೂ ಕರೆಯಲ್ಪಡುವ ಡೀಫ್, ಇಸ್ರೇಲ್ನ ಮೋಸ್ಟ್ ವಾಂಟೆಡ್ ಗುರಿಯಾಗಿದ್ದಾನೆ. ಇಸ್ರೇಲ್ನ ಅನೇಕ ಪ್ರಯತ್ನಗಳ ಹೊರತಾಗಿಯೂ ಆತ ತಪ್ಪಿಸಿಕೊಂಡಿದ್ದಾನೆ ಮತ್ತು ಸಾರ್ವಜನಿಕವಾಗಿ ವಿರಳವಾಗಿ ಕಂಡು ಬರುತ್ತಾನೆ.