ETV Bharat / international

ಅಮೆರಿಕಾ ಜೊತೆ ಸಂಪರ್ಕದಲ್ಲಿದೆಯಂತೆ ಏಲಿಯನ್​ ಫೆಡರೇಶನ್​..! - ಇಸ್ರೇಲ್​ ಇತ್ತೀಚಿನ ಸುದ್ದಿ

ಯುಎಸ್ ಮತ್ತು ಏಲಿಯನ್​ಗಳ ನಡುವೆ ಒಪ್ಪಂದ ನಡೆದಿದೆ ಎಂದು ಇಸ್ರೇಲಿನ ಮಾಜಿ ಬಾಹ್ಯಾಕಾಶ ಭದ್ರತಾ ಮುಖ್ಯಸ್ಥ ಹೈಮ್ ಎಶೆಡ್ ಹೇಳಿದ್ದಾರೆ..

author img

By

Published : Dec 9, 2020, 4:41 PM IST

Updated : Dec 9, 2020, 5:09 PM IST

ಟೆಲ್​ಅವೀವ್​ (ಇಸ್ರೇಲ್): ಜಗತ್ತಲ್ಲಿ ಏಲಿಯನ್​ಗಳ ಅಸ್ತಿತ್ವ ಇದೆಯೇ ಎಂಬ ಚರ್ಚೆಗಳ ನಡುವೆ ಯುಎಸ್ ಏಲಿಯನ್​ ಜೊತೆ ವ್ಯವಹರಿಸುತ್ತಿದ್ದಾರೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಇನ್ನು ಈ ಬಗ್ಗೆ ಹೇಳಿಕೆ ನೀಡಿದ್ದು, ಇಸ್ರೇಲಿನ ಮಾಜಿ ಬಾಹ್ಯಾಕಾಶ ಭದ್ರತಾ ಮುಖ್ಯಸ್ಥ.

87 ವರ್ಷದ ಮಾಜಿ ಬಾಹ್ಯಾಕಾಶ ಭದ್ರತಾ ಮುಖ್ಯಸ್ಥ ಹೈಮ್ ಎಶೆಡ್ ಅವರು "ಗ್ಯಾಲಕ್ಟಿಕ್​ ಫೆಡರೇಶನ್​" ಅಸ್ತಿತ್ವದಲ್ಲಿದೆ ಎಂದು ಹೇಳಿದ್ದಾರೆ. ಇನ್ನು ಯುಸ್​ ಮತ್ತು ಏಲಿಯನ್​ ನಡುವೆ ಒಪ್ಪಂದ ನಡೆದಿದೆ.

ಈ ಒಪ್ಪಂದದಲ್ಲಿ ಸಂಶೋಧನೆಗೆ ಬೇಕಾದ ಅಂಶಗಳ ರವಾನೆ ಹಾಗೂ ಏಲಿಯನ್​ ಜಗತ್ತಿನ ವಿಚಾರಗಳ ಬಗ್ಗೆ ಅಧ್ಯಯನ ಮಾಡಲಾಗುತ್ತದೆ ಎಂದು ಇಸ್ರೇಲ್​ನ ಮಾಧ್ಯಮ ವರದಿ ಮಾಡಿದೆ.

ಓದಿ: 2020ರಲ್ಲಿ ಜನರ ಬಗ್ಗೆ ಹೆಚ್ಚು ಟ್ವೀಟ್: ಟ್ರಂಪ್, ಬೈಡನ್​ಗೆ ಮೊದಲೆರಡು ಸ್ಥಾನ, ಮೋದಿ?

ಇಸ್ರೇಲಿ ದಿನಪತ್ರಿಕೆಯೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, "ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೂ ಈ ಬಗ್ಗೆ ತಿಳಿದಿದೆ. ಅವರು ಗ್ಯಾಲಕ್ಟಿಕ್​ ಫೆಡರೇಶನ್​ ಅಸ್ತಿತ್ವದ ಬಗ್ಗೆ ಜಗತ್ತಿಗೆ ತಿಳಿಸಲಿದ್ದಾರೆ. ಆದರೆ, ಆ ಕೆಲಸ ಮಾಡದಂತೆ ಏಲಿಯನ್​ ತಡೆಹಿಡಿದಿದೆ. ಯಾಕೆಂದರೆ, ಏಲಿಯನ್​ಗಳು ತಲುಪುವ ಹಂತ ಮುಟ್ಟಲು ಮಾನವೀಯತೆ ಅಗತ್ಯ ಎಂದು ಭಾವಿಸಿದ್ದಾರಂತೆ" ಎಂದು ಹೈಮ್ ಎಶೆಡ್ ಹೇಳಿದರು.

ಈ ಹಿಂದೆಯೇ ಮಾಹಿತಿ ಬಹಿರಂಗಪಡಿಸಲಿಲ್ಲ ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಐದು ವರ್ಷಗಳ ಹಿಂದೆ ಇಂದು ಹೇಳುತ್ತಿರುವುದನ್ನು ನಾನು ಹೇಳಿದ್ರೆ, ನಾನು ಆಸ್ಪತ್ರೆಗೆ ದಾಖಲಾಗುತ್ತಿದ್ದೆ. ನನಗೆ ಕಳೆದುಕೊಳ್ಳಲು ಏನೂ ಇಲ್ಲ. ನನ್ನ ಪದವಿ ಮತ್ತು ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇನೆ. ವಿದೇಶಗಳಲ್ಲಿನ ವಿಶ್ವವಿದ್ಯಾಲಯಗಳಲ್ಲಿ ನನ್ನನ್ನು ಗೌರವಿಸಲಾಗಿದೆ. ಅಲ್ಲಿ ಪ್ರವೃತ್ತಿ ಕೂಡ ಬದಲಾಗುತ್ತಿದೆ" ಎಂದು ಹೇಳಿದರು.

Last Updated : Dec 9, 2020, 5:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.