ETV Bharat / international

WATCH: ಕಣ್ಣ ಮುಂದೆ ಬಾಂಬ್‌ ದಾಳಿ ನಡೆಯುತ್ತಿದ್ದಂತೆ ವರದಿ ಮಾಡಿದ ಪತ್ರಕರ್ತೆ - ಅಲ್ ಜಝೀರಾ

ಪ್ಯಾಲೆಸ್ತೀನ್​ನ ಗಾಜಾ ನಗರದಲ್ಲಿ ಅಲ್ ಜಝೀರಾ ಸುದ್ದಿ ವಾಹಿನಿಯ ಪ್ರತಿನಿಧಿ ಯೂಮ್ನಾ ಅಲ್ ಸಯೀದ್ ಅವರು ವೈಮಾನಿಕ ದಾಳಿ ನಡೆಯುವ ವೇಳೆಯೂ ಲೈವ್​ ರಿಪೋರ್ಟ್​ ಮಾಡುತ್ತಿರುವ ವಿಡಿಯೋ ಇಲ್ಲಿದೆ.

Stupendous! Gaza journalist reports live when building is hit
ಗಾಜಾ ಪತ್ರಕರ್ತೆಯ ಲೈವ್​ ರಿಪೋರ್ಟ್​
author img

By

Published : May 13, 2021, 7:15 AM IST

ಗಾಜಾ (ಪ್ಯಾಲೆಸ್ತೀನ್): ಇಸ್ರೇಲ್ - ಪ್ಯಾಲೆಸ್ತೀನ್ ಸಂಘರ್ಷ ಜಾಗತಿಕ ಆತಂಕ ಉಂಟು ಮಾಡಿದೆ. ಇಸ್ರೇಲ್‌ ಮೇಲೆ ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರವಾದಿ ಪಡೆಗಳು ದಾಳಿ ನಡೆಸುತ್ತಿದ್ದರೆ ಅದಕ್ಕೆ ಪ್ರತ್ಯುತ್ತರವಾಗಿ ಇಸ್ರೇಲ್‌ ದೇಶ ಗಾಜಾ ಹಾಗು ವೆಸ್ಟ್‌ಬ್ಯಾಂಕ್‌ ಮೇಲೆ ಪ್ರತಿ ದಾಳಿ ನಡೆಸುತ್ತಿದೆ. ಸದ್ಯ ಇಲ್ಲಿ ರಾಕೆಟ್​​ಗಳು, ಕ್ಷಿಪಣಿಗಳ ಆರ್ಭಟ ವಿಪರೀತವಾಗಿದೆ. ವಿಧ್ವಂಸಕಾರಿ ರಾಕೆಟ್‌ಗಳು ಬಾಂಬ್‌ಗಳನ್ನು ಕಟ್ಟಡಗಳೆಡೆಗೆ ಹಾಕುತ್ತಿದ್ದು, ಜನರು ಪ್ರಾಣ ಕೈಯಲ್ಲಿ ಹಿಡಿದು ಮನೆಯೊಳಗೆ ಕುಳಿತಿದ್ದಾರೆ. ಆದರೆ ಇಲ್ಲೊಬ್ಬ ಧೈರ್ಯವಂತ ಪತ್ರಕರ್ತೆ ಮಾತ್ರ ತಾನು ನಿಂತಿರುವ ಸ್ಥಳದ ಸುತ್ತಲೂ ದಾಳಿಯಾಗುತ್ತಿದ್ದರೂ ಅದನ್ನು ವರದಿ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿ..

ಗಾಜಾ ನಗರದಿಂದ ಪತ್ರಕರ್ತೆ ಯೂಮ್ನಾ ಅಲ್‌ ಸಯೀದ್‌ ಗ್ರೌಂಡ್‌​ ರಿಪೋರ್ಟ್​

ಪ್ಯಾಲೆಸ್ತೀನ್​ನ ಗಾಜಾ ನಗರದಲ್ಲಿ ಅಲ್ ಜಝೀರಾ ಸುದ್ದಿ ವಾಹಿನಿಯ ಪ್ರತಿನಿಧಿ ಯೂಮ್ನಾ ಅಲ್ ಸಯೀದ್ ಅವರು ದಾಳಿಯ ಸ್ಥಳಕ್ಕೆ ತೆರಳಿ ವಿವರಣೆ ನೀಡುತ್ತಿರುತ್ತಾರೆ. ಈ ವೇಳೆ ಅವರು, "ಬಹುತೇಕ ಎಲ್ಲಾ ಮಾಧ್ಯಮ ಕಚೇರಿಗಳು ಈ ಟವರ್​​ನಲ್ಲಿವೆ, ನೀವು ನೋಡ್ತಾ ಇದೀರಾ, ಈ ಟವರ್​ ಅನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗುತ್ತಿದೆ" ಎಂದು ಹೇಳುತ್ತಿದ್ದಂತೆಯೇ ದಾಳಿಯಾಗಿದೆ. "ಓ ಮೈ ಗಾಡ್​, ಕ್ಷಮಿಸಿ, ನಾನು ಕೆಳಗಿಳಿಯಬೇಕು, ನನ್ನಿಂದ ಸಾಧ್ಯವಿಲ್ಲ" ಎಂದು ಆಕೆ ಸ್ಫೋಟ ನಡೆದ ಕಟ್ಟಡದೆಡೆ ಕ್ಯಾಮೆರಾವನ್ನು ತಿರುಗಿಸಲು ಸೂಚಿಸುತ್ತಾರೆ.

ಇದನ್ನೂ ಓದಿ: ಪ್ಯಾಲೆಸ್ತೀನ್ ಕಡೆಯಿಂದ ಇಸ್ರೇಲ್ ಮೇಲೆ 200 ಕ್ಕೂ ಅಧಿಕ ರಾಕೆಟ್ ದಾಳಿ

ಮಂಗಳವಾರದಿಂದ ಇಸ್ರೇಲ್ - ಪ್ಯಾಲೆಸ್ತೀನ್ ನಡುವೆ ನಡೆಯುತ್ತಿರುವ ವೈಮಾನಿಕ ದಾಳಿಯಲ್ಲಿ ಈಗಾಗಲೇ 70ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ. ಅನೇಕ ಬಹುಮಹಡಿ ಕಟ್ಟಡಗಳು ನಾಶವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.