ETV Bharat / international

ಸಂಘರ್ಷದಲ್ಲೇ ದಿನದೂಡುತ್ತಿದೆ ಗಾಜಾ.. ತೀವ್ರಗೊಳ್ಳುತ್ತಿದೆ ಹಮಾಸ್​​ - ಇಸ್ರೇಲ್ ಬಡಿದಾಟ​​

ಇಸ್ರೇಲ್ ಹಾಗೂ ಪ್ಯಾಲೆಸ್ತೀನ್​ ನಡುವಿನ ಯುದ್ಧ ಮುಂದುವರೆದಿದ್ದು, ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ. ಗಾಜಾ ನಗರದಲ್ಲಿ ಇಂದಿಗೂ ಭೀತಿ ಇದ್ದು, ವರ್ಷದ ಹೆಚ್ಚಿನ ದಿನಗಳು ಘರ್ಷಣೆಯಲ್ಲಿಯೇ ಕಳೆಯುತ್ತಿದೆ.

ಸಂಘರ್ಷದಲ್ಲೇ ದಿನದೂಡುತ್ತಿದೆ ಗಾಜಾ
ಸಂಘರ್ಷದಲ್ಲೇ ದಿನದೂಡುತ್ತಿದೆ ಗಾಜಾ
author img

By

Published : May 15, 2021, 8:04 PM IST

Updated : May 15, 2021, 9:16 PM IST

ಗಾಜಾ (ಪ್ಯಾಲೆಸ್ತೀನ್): ಇಸ್ರೇಲ್‌ನ ಉತ್ತರ ಮತ್ತು ಪೂರ್ವ ಗಡಿಗಳ ಸಮೀಪವಿರುವ ಗಾಜಾ ನಗರ ಕಳೆದೊಂದು ವಾರದಿಂದ ಸಂಪೂರ್ಣ ದಾಳಿಗೆ ತುತ್ತಾಗಿದೆ. ಇಸ್ರೇಲ್​​ನಿಂದ ರಾಕೆಟ್​​​ಗಳು ಬಂದುರುಳುತ್ತಿದ್ದು, ಪ್ರತಿಯಾಗಿ ಗಾಜಾದಿಂದ ನೂರಾರು ರಾಕೆಟ್​​ಗಳು ಇಸ್ರೇಲ್ ಭೂಪ್ರದೇಶ ತಲುಪುತ್ತಿವೆ.

ಇದು 2008ರಿಂದ ಇಸ್ರೇಲ್ ಮತ್ತು ಹಮಾಸ್ ನಡುವಿನ 4ನೇ ಯುದ್ಧ ಅಂತಲೇ ಕರೆಯಲಾಗುತ್ತಿದೆ. ಈ ಘರ್ಷಣೆಯಿಂದಾಗಿ 2 ಮಿಲಿಯನ್‌ಗಿಂತಲೂ ಹೆಚ್ಚು ಪ್ಯಾಲೆಸ್ತೀನ್ ನಿವಾಸಿಗಳು ಸಾವು ಮತ್ತು ವಿನಾಶದ ಭೀತಿಯನ್ನು ಎದುರಿಸುತ್ತಿದ್ದಾರೆ.

ಇತ್ತೀಚಿನ ಸಂಭವಿಸುತ್ತಿರುವ ಸ್ಫೋಟವು ಮತ್ತೊಂದು ವಿನಾಶಕಾರಿ ಯುದ್ಧದ ಭೀತಿಯನ್ನು ಹುಟ್ಟುಹಾಕಿದೆ ಮತ್ತು ಮತ್ತೊಮ್ಮೆ ಅಂತಾರಾಷ್ಟ್ರೀಯ ಗಮನ ಸೆಳೆದಿದೆ.

ಇಸ್ರೇಲ್​ ಹಾಗೂ ಈಜಿಪ್ಟ್​ ನುಡುವೆ ಸ್ಯಾಂಡ್​​ವಿಚ್​​ನಂತೆ ಕೇವಲ 25 ಮೈಲಿ ಉದ್ದ ಹಾಗೂ 6 ಮೈಲಿ ಅಗಲದಲ್ಲಿ ಗಾಜಾ ವಿಸ್ತೀರ್ಣವಿದೆ. ಇದು 1948ರ ಯುದ್ಧದ ಮೊದಲು ಪ್ಯಾಲೆಸ್ತೀನ್​​ ಬ್ರಿಟಿಷ್ ಆಳ್ವಿಕೆಯ ಭಾಗವಾಗಿತ್ತು, ಅದು ಈಜಿಪ್ಟ್‌ನ ನಿಯಂತ್ರಣಕ್ಕೆ ಬಂದಾಗ ಇಸ್ರೇಲ್ ಹುಟ್ಟಿಗೆ ಕಾರಣವಾಗಿತ್ತು. ಆದರೆ, ಇಸ್ರೇಲ್​ನಲ್ಲಿ ತುಳಿತಕ್ಕೊಳಕ್ಕಾಗಿ ಹೊರಬಂದ ಪ್ಯಾಲೆಸ್ತೀನಿಯರು ಗಾಜಾದಲ್ಲಿ ಬಂದು ನೆಲೆಸಿದರು. ಇವರ ಸಂಖ್ಯೆಯೂ ಗಾಜಾದಲ್ಲಿ ಹೆಚ್ಚಾಯಿತು ಹಾಗೂ ಬಲಿಷ್ಠವಾಯಿತು. ಅಲ್ಲದೇ ಗಾಜಾದ ಅರ್ಧದಷ್ಟು ಜನಸಂಖ್ಯೆ ಇಸ್ರೇಲ್​​​ನಿಂದ ಬಂದ ನಿರಾಶ್ರಿತರೆ ಆಗಿದ್ದರು.

1967ರ ಮಧ್ಯಪೂರ್ವ ಯುದ್ಧದಲ್ಲಿ ಇಸ್ರೇಲ್ ಗಾಜಾವನ್ನ ವಶಕ್ಕೆ ಪಡೆದಿತ್ತು. ಇದರ ಜೊತೆ ಪೂರ್ವ ಜೆರುಸಲೆಮ್, ಪಶ್ಚಿಮ ಭಾಗವನ್ನ ತನ್ನದಾಗಿಸಿಕೊಂಡಿತ್ತು. ಇದರ ಬೆನ್ನ ಹಿಂದೆಯೇ ಗಾಜಾದಲ್ಲಿ ಆಕ್ರೋಶದ ಕಿಚ್ಚು ಹೊತ್ತಿಕೊಂಡಿತ್ತು. ಇದಾಗಿ 1987ರಲ್ಲಿ ಮೊದಲ ಬಾರಿಗೆ ಪ್ಯಾಲೆಸ್ತೀನ್ ದಂಗೆಗೆ ಕಾರಣವಾಯಿತು. ಇದೇ ವರ್ಷ ಹಮಾಸ್ ಎಂಬ ರಾಜಕೀಯ ಸಂಘಟನೆ ಅಥವಾ ಪಕ್ಷದ ಉದಯವೂ ಆಯಿತು. ಆದರೆ, ಓಸ್ಲೋ ಶಾಂತಿ ಪ್ರಕ್ರಿಯೆ 1990ರಲ್ಲಿ ಆರಂಭಗೊಂಡು ಪ್ಯಾಲೆಸ್ತೀನ್ ನಿರಾಶ್ರಿತರಿಗೆ ಪಶ್ಚಿಮ ಭಾಗದಲ್ಲಿ ನಿಯಮಿತ ಅಧಿಕಾರ ವಾಪಸ್​ ನೀಡುವಲ್ಲಿ ಯಶಸ್ವಿಯಾಗಿತ್ತು.

ಹಮಾಸ್ ಹಿಡಿತ ಆರಂಭ

ದಂಗೆ ಮತ್ತು ಹಿಂಸಾಚಾರದ ಬಳಿಕ 2005ರಲ್ಲಿ ಇಸ್ರೇಲ್ ಗಾಜಾದಿಂದ ತನ್ನ ಸೈನ್ಯ ಹಾಗೂ ಯಹೂದಿಗಳ ವಸಾಹತುಗಳ ಹಿಂತೆಗೆದುಕೊಂಡಿತು. ಇದು ಹಮಾಸ್​ ಸಂಘಟನೆ ತನ್ನ ಜನರೊಂದಿಗೆ ಹೋರಾಡಿ ಗೆದ್ದ ಆರಂಭಿಕ ಯಶಸ್ಸು ಎಂದು ಪರಿಗಣಿಸಿತು. ಇಲ್ಲಿಂದ ಹಮಾಸ್ ಸಂಘಟನೆ ರಾಜಕೀಯ ಅಸ್ತ್ರವಾಗಿಯೂ ಬಳಕೆಗೆ ಬಂದಿತು.

ಬಳಿಕ 2006ರಲ್ಲಿ ಪ್ಯಾಲೆಸ್ತೀನ್ ಚುನಾವಣೆಯಲ್ಲಿ ಹಮಾಸ್ ಸಂಘಟನೆ ಭರ್ಜರಿ ಜಯ ದಾಖಲಿಸಿತು. ಅದು ಪ್ಯಾಲೆಸ್ತೀನಿಯನ್​ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರ ಫತಾಹ್ ಪಕ್ಷದೊಂದಿಗೆ ಅಧಿಕಾರ ಹೋರಾಟಕ್ಕೆ ನಾಂದಿ ಹಾಡಿತು, ಇದು 2007ರಲ್ಲಿ ಒಂದು ವಾರಗಳ ಕಾಲದ ಘರ್ಷಣೆಯಲ್ಲಿ ಗಾಜಾವು ಹಮಾಸ್​ ನಿಯಂತ್ರಣಕ್ಕೆ ಒಳ ಪಡಬೇಕಾಯಿತು.

ಸಂಪ್ರದಾಯವಾಗಿಯಾಗಿದ್ದ ಗಾಜಾದ ಮೇಲೆ ಹಮಾಸ್ ಸಂಘಟನೆ ಇಸ್ಲಾಮಿಕ್ ಕಾನೂನಿನ ಮೂಲಕ ಹಿಡಿತ ಸಾಧಿಸಿತು. ಅಂದರ ಅದು ಸರ್ಕಾರದ ವಿರುದ್ಧದ ಕಾರ್ಯಗಳ ತಡೆಯುವುದಲ್ಲದೇ. ಪ್ರತಿಭಟನೆ ಅಥವಾ ಪ್ರತಿರೋಧಗಳನ್ನು ಹಿಂಸಾತ್ಮಕ ರೂಪದಲ್ಲಿಯಾದರೂ ನಿಗ್ರಹಿಸಲು ಮುಂದಾಗುತ್ತದೆ. ಸದ್ಯ ಈ ಗುಂಪು ಸತತವಾಗಿ 14 ವರ್ಷಗಳಿಂದಲೂ ಅಧಿಕಾರದಲ್ಲಿದ್ದು, 3 ಯುದ್ಧದ ಪರಿಸ್ಥಿತಿ ನಿಭಾಯಿಸಿದೆ

ಗಾಜಾದಲ್ಲಿ ಹಮಾಸ್ ಬಲ ಹೆಚ್ಚಾದಂತೆ ಇಸ್ರೇಲ್ ಹಾಗೂ ಈಜಿಪ್ಟ್ ಗಾಜಾ ಮೇಲೆ ಕೆಲ ಧಿಗ್ಬಂದನ ವಿಧಿಸಲು ಮುಂದಾದವು. ಉಗ್ರಗಾಮಿ ಸಂಘಟನೆಗೆ ಶಸ್ತ್ರಾಸ್ತ್ರ ರಫ್ತಾಗದಂತೆ ತಡೆಯಲು ನಾವು ಕೆಲ ನಿರ್ಬಂಧ ವಿಧಿಸಿದ್ದೇವೆ ಎಂದು ಇಸ್ರೇಲ್ ಹೇಳಿಕೊಂಡಿದೆ, ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ನಿರ್ಬಂಧಗಳಿಗೆ ವಿರೋಧವೂ ಇದೆ.

ಈ ನಿರ್ಬಂಧದಿಂದಾಗಿಯೇ ಗಾಜಾದಲ್ಲಿ ನಿರೂದ್ಯೋಗ ಪ್ರಮಾಣ ಹೆಚ್ಚಾಯಿತಲ್ಲದೇ, ಅಲ್ಲಿನ ಆರ್ಥಿಕತೆಯ ಮೇಲೆ ತೀವ್ರ ಹೊಡೆತ ಬೀಳುವಂತಾಯಿತು. ಪೂರ್ಣ ಜನಸಂಖ್ಯೆಯ ಶೇ.50ರಷ್ಟು ಮಂದಿ ನಿರೂದ್ಯೋಗಿಗಳಾದರೆ, ವಿದ್ಯುತ್ ಕಡಿತ ಸೇರಿ ಕುಡಿಯುವ ನೀರಿಗಾಗಿ ಹಾಹಾಕಾರವೇ ಉಂಟಾಗಿತ್ತು.

ಯುದ್ಧಗಳ ಸರಮಾಲೆ

ಹಮಾಸ್ ಮತ್ತು ಇಸ್ರೇಲ್ ನಡುವೆ ಯುದ್ಧಗಳ ಸರಮಾಲೆಯೇ ನಡೆದು ಹೋಗಿದೆ. ಇದರಲ್ಲಿ ಮೂರು ಅತ್ಯಂತ ಭೀಕರ ಯುದ್ಧವಾಗಿದ್ದರೆ ಹತ್ತಾರು ಸಣ್ಣ ಘರ್ಷಣೆಗಳು ನಡೆಯುತ್ತಲೇ ಇದೆ. ಈ ಮೂರು ಯುದ್ಧದಲ್ಲಿ 2014ರ ಯುದ್ಧ ಭೀಕರವಾಗಿತ್ತು. ಅದರಲ್ಲಿ ಪ್ಯಾಲೆಸ್ತೀನ್ ಭಾಗದ ಅಂದಾಜು 2,200 ಮಂದಿ ಸಾವನಪ್ಪಿದ್ದರು. ಇದರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ನಾಗರಿಕರಾಗಿದ್ದರು. ಆದರೆ, ಇದೇ ಯುದ್ಧದಲ್ಲಿ ಇಸ್ರೇಲ್​​ನ 73 ಮಂದಿ ಸಾವಿಗೀಡಾಗಿದ್ದರು.

ಯುದ್ಧದ ವೇಳೆ ಇಸ್ರೇಲ್ ನಡೆಸುವ ವೈಮಾನಿಕ ದಾಳಿಯು ಗಾಜಾವನ್ನ ಸಂಪೂರ್ಣ ನಾಶದ ಅಂಚಿಗೆ ತಂದು ನಿಲ್ಲಿಸುತ್ತದೆ. ನಾಗರಿಕರು ಶಾಲೆಗಳು ಸೇರಿ ಹಲವು ಕಟ್ಟಡಗಳಿಲ್ಲಿ ಆಶ್ರಯ ಪಡೆದುಕೊಳ್ಳುತ್ತಾರೆ, ಹೀಗಾದರೂ ಯುದ್ಧದ ವೇಳೆ ನಾಗರಿಕರ ಸಾವು ಹೆಚ್ಚಾಗುತ್ತಲೇ ಇರುತ್ತದೆ. ದಾಳಿಯ ವೇಳೆ ನಾಗರಿಕರ ಸಾವನ್ನ ಆದಷ್ಟು ಮಟ್ಟಿಗೆ ತಡೆಯಲು ನಾವು ಯತ್ನಿಸುತ್ತೇವೆ ಆದರೆ ಗಾಜಾವೂ ನಾಗರಿಕರನ್ನು ‘ಮಾನವ ಶೀಲ್ಡ್​​’ಗಳಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಇಸ್ರೇಲ್ ಹೇಳಿಕೊಂಡು ಬಂದಿದೆ.

ಪ್ಯಾಲಿಸ್ತೀನ್ ಬಂಡುಕೋರರು ಸಹ ಇಸ್ರೇಲ್​ ಮೇಲೆ ರಾಕೆಟ್​​ ದಾಳಿ ನಡೆಸಿದ್ದು. ಬಹುಪಾಲು ಜನವಸತಿ ಪ್ರದೇಶಗಳವರೆಗೆ ತಲುಪಿವೆ. ಆದರೆ ಇಸ್ರೇಲ್​​ ರಕ್ಷಣಾ ವ್ಯವಸ್ಥೆ ಎಂತಹ ದಾಳಿಯನ್ನಾದರೂ ತಡೆಯಬಹುದಾದ ತಂತ್ರಜ್ಞಾನದ ಜೊತೆ ಬಲಿಷ್ಟ ಮಿಲಿಟರಿ ಹೊಂದಿದೆ. ಇದರ ನಡುವೆಯೂ ಪ್ಯಾಲೆಸ್ತೀನ್ ರಾಕೆಟ್​ಗಳ ವ್ಯಾಪ್ತಿಯೂ ಇತ್ತೀಚೆಗೆ ಟೆಲ್​​​ ಅವೀವ್​ ಮತ್ತು ಜೆರುಸಲೆಮ್​ವರೆಗೂ ತಲುಪುತ್ತಿವೆ.

ಶತ್ರುರಾಷ್ಟ್ರಗಳ ಕ್ಷಿಪಣಿಗಳನ್ನ ಇಸ್ರೇಲ್​ನ ಐರನ್​ ಡೋಮ್​ಗಳು ಯಶಸ್ವಿಯಾಗಿ ಹೊಡೆದುರುಳಿಸುತ್ತಿದ್ದು, ಆಕಾಶದಲ್ಲೇ ಶತ್ರುಗಳನ್ನ ಇಸ್ರೇಲ್ ಬಗ್ಗು ಬಡೆಯುತ್ತಿದೆ.

Last Updated : May 15, 2021, 9:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.