ಇಸ್ತಾಂಬುಲ್: ಟರ್ಕಿಯ ಕರಾವಳಿಯ ಏಜಿಯನ್ ಸಮುದ್ರದಲ್ಲಿ ಹಡಗು ಮುಳುಗಡೆಯಾಗಿ 8 ಮಕ್ಕಳು ಸೇರಿ 11 ವಲಸಿಗರು ಮೃತಪಟ್ಟಿದ್ದಾರೆ ಎಂದು ಇಲ್ಲಿನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಗ್ರೀಕ್ ದ್ವೀಪವಾದ ಚಿಯೋಸ್ ಬಳಿಯ ಜನಪ್ರಿಯ ಪ್ರವಾಸಿ ಸ್ಥಳವಾದ ಸೆಸ್ಮೆ ಕರಾವಳಿಯಲ್ಲಿ ದೋಣಿ ಮುಳುಗಡೆಯಾಗಿದ್ದು, ದುರ್ಘಟನೆಯಲ್ಲಿ ಇತರೆ 8 ವಲಸಿಗರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.
-
Turkish agency says 11 migrants, including 8 children die in Aegean boat sinking: AFP news agency
— ANI (@ANI) January 11, 2020 " class="align-text-top noRightClick twitterSection" data="
">Turkish agency says 11 migrants, including 8 children die in Aegean boat sinking: AFP news agency
— ANI (@ANI) January 11, 2020Turkish agency says 11 migrants, including 8 children die in Aegean boat sinking: AFP news agency
— ANI (@ANI) January 11, 2020
19 ವಲಸಿಗರನ್ನು ಹೊತ್ತೊಯುತ್ತಿದ್ದ ದೋಣಿ ಇಜಿಮೀರ್‌ನ ಏಜಿಯನ್ ಪ್ರಾಂತ್ಯದ ಸೆಸ್ಮೆ ಕರಾವಳಿಯಲ್ಲಿ ಈ ಅವಘಡ ಸಂಭವಿಸಿದೆ. ಈ ಪ್ರಾಂತ್ಯದ ರಾಷ್ಟ್ರಗಳಲ್ಲಿ ಯುದ್ಧ ಮತ್ತು ಕಿರುಕುಳದಂತಹ ಕೃತ್ಯಗಳಿಂದ ಇಲ್ಲಿನ ಹಲವು ಜನರು ಬೇಸತ್ತು ಬೇರೆಕಡೆ ವಲಸೆ ಹೋಗುತ್ತಿದ್ದಾರೆ. ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜನರು ಪ್ರಯಾಣಿಸಿದ್ದರಿಂದ ದುರ್ಘಟನೆಗೆ ಕಾರಣ ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಬರಬೇಕಿದೆ.