ETV Bharat / international

'ನೀವೂ ಲಾರ್ಡ್​​ ಹನುಮಾನ್​​'... ಬ್ರೆಜಿಲ್​​​​ ಅಧ್ಯಕ್ಷರಿಂದ ನಮೋ ಗುಣಗಾನ! - ಕೊರೊನಾ ವೈರಸ್​

ಮಹಾಮಾರಿ ಕೊರೊನಾ ಸೋಂಕಿಗೆ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಭಾರತದಲ್ಲೂ ಡೆಡ್ಲಿ ವೈರಸ್​​ ಲಗ್ಗೆ ಹಾಕಿದ್ದು, ಇತರ ದೇಶಗಳಿಗೆ ಹೋಲಿಕೆ ಮಾಡಿದಾಗ ಹೇಳಿಕೊಳ್ಳುವಂತಹ ಸಾವು-ನೋವು ಸಂಭವಿಸಿಲ್ಲ.

Brazilian President Jair Messias Bolsonaro

author img

By

Published : Apr 8, 2020, 4:00 PM IST

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿರುವ ಸೋಂಕಿತರಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್​ ಔಷಧ ನೀಡುತ್ತಿರುವ ವಿಷಯ ಬೇರೆ ದೇಶಗಳಿಗೆ ಗೊತ್ತಾಗುತ್ತಿದ್ದಂತೆ ಅದರ ಮೇಲೆ ನಿಷೇಧ ಹೇರಲಾಗಿತ್ತು. ಆದ್ರೆ ಅಮೆರಿಕ, ಬ್ರೆಜಿಲ್​ ಸೇರಿದಂತೆ ವಿವಿಧ ದೇಶಗಳು ಔಷಧ ರಫ್ತು ಮಾಡುವಂತೆ ನಮೋ ಬಳಿ ಮನವಿ ಮಾಡಿಕೊಂಡಿದ್ದವು.

ಅದರ ಮೇಲಿನ ನಿಷೇಧ ತೆರವುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅಮೆರಿಕ, ಬ್ರೆಜಿಲ್​ ಸೇರಿದಂತೆ ವಿವಿಧ ನೆರೆಹೊರೆಯ ದೇಶಗಳಿಗೆ ಈ ಔಷಧ ರಫ್ತು ಮಾಡಲು ಮುಂದಾಗಿದ್ದು, ಇವರ ನಿರ್ಧಾರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ನಿರ್ಧಾರಕ್ಕೆ ಫಿದಾ ಆಗಿದ್ದ ಟ್ರಂಪ್​, ಅವರೊಬ್ಬ ಗ್ರೇಟ್​ ವ್ಯಕ್ತಿ ಎಂದಿದ್ದರು. ಇದೀಗ ಬ್ರೇಜಿಲ್​ ಅಧ್ಯಕ್ಷ ಜೈರ್ ಬೊಲ್ಸೋನರೊ ಕೂಡ ಪ್ರಧಾನಿ ಮೋದಿ ಕುರಿತು ಮೆಚ್ಚುಗೆ ಮಾತುಗಳನ್ನಾಡಿದ್ದು, ನೀವೂ ಲಾರ್ಡ್​ ಹನುಮಾನ್​ಗೆ ಸಮ ಎಂದಿದ್ದಾರೆ.

ಹೈಡ್ರಾಕ್ಸಿಕ್ಲೋರೋಕ್ವಿನ್​​ ಔಷಧಿ ರಫ್ತಿಗೆ ನಮೋ ನಿರ್ಧಾರ... ಹಾಡಿ ಹೊಗಳಿದ ಟ್ರಂಪ್​!

ರಾಮ ಹಾಗೂ ಲಕ್ಷ್ಮಣ್​​ನ ಪ್ರಾಣ ಉಳಿಸಲು ಲಾರ್ಡ್​ ಹನುಮಾನ್​ ಹಿಮಾಲಯದಿಂದ ಸಂಜೀವಿನಿ ತೆಗೆದುಕೊಂಡ ಬಂದ ಹಾಗೇ ನೀವೂ ಪ್ರಪಂಚದಲ್ಲಿನ ಜನರ ಪ್ರಾಣ ಉಳಿಸಲು ಇದೀಗ ನೀವೂ ಈ ಔಷಧ ನಮಗೆ ರವಾನೆ ಮಾಡಿದ್ದೀರಿ ಎಂದು ಪತ್ರ ಬರೆದಿದ್ದಾರೆ.

ವಿಶ್ವದಲೇ ಭಾರತ ಅತಿ ಹೆಚ್ಚು ಹೈಡ್ರಾಕ್ಸಿಕ್ಲೋರೋಕ್ವಿನ್​ ಔಷಧ ತಯಾರು ಮಾಡುವ ದೇಶವಾಗಿದ್ದು, ಕೊರೊನಾ ಸೋಂಕಿಗೆ ಇದು ರಾಮಬಾಣ ಎನ್ನುವ ವಿಷಯ ಗೊತ್ತಾಗುತ್ತಿದ್ದಂತೆ ಅದರ ಮೇಲೆ ನಿಷೇಧ ಹೇರಲಾಗಿತ್ತು. ಆದರೆ, ಬೇರೆ ದೇಶಗಳ ಮನವಿಗೆ ಸ್ಪಂದಿಸಿರುವ ಭಾರತ ಪ್ಯಾರಸಿಟಮಲ್​​​​ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್​ ಸೇರಿ 24 ಔಷಧಗಳ ರಫ್ತಿನ ಮೇಲೆ ಹೇರಿದ್ದ ನಿಷೇಧ ತೆರವುಗೊಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.