ರಿಯಾದ್: ಟರ್ಕಿ ಪ್ರದೇಶವನ್ನು ಅಸ್ಥಿರಗೊಳಿಸಲು ಗಲ್ಫ್ ರಾಷ್ಟ್ರಗಳು ಕಾರ್ಯತಂತ್ರಗಳನ್ನು ಮಾಡುತ್ತಿವೆ ಎಂದು ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಆರೋಪಿಸಿದ್ದು, ಆ ದೇಶದ ಪ್ರತಿಯೊಂದು ವಸ್ತುಳನ್ನು ಬಹಿಷ್ಕಾರ ಮಾಡಬೇಕು ಎಂದು ಸೌದಿ ಅರೇಬಿಯಾ ಹೇಳಿದೆ.
ದೇಶದ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, "ಇಂತಹ ಪ್ರಶ್ನಾರ್ಹ ರಾಷ್ಟ್ರಗಳು ನಿನ್ನೆಯೂ ಅಸ್ತಿತ್ವದಲ್ಲಿರಲಿಲ್ಲ. ಬಹುಶಃ ನಾಳೆಯೂ ಅಸ್ತಿತ್ವದಲ್ಲಿರುವುದಿಲ್ಲ ಎಂಬುದನ್ನು ಮರೆಯಬಾರದು. ಆದರೆ ಅಲ್ಲಾಹನ ಆಶೀರ್ವಾದದಿಂದ ಈ ಪ್ರದೇಶದಲ್ಲಿ ನಮ್ಮ ಧ್ವಜ ಶಾಶ್ವತವಾಗಿ ಹಾರಿಸುವುದನ್ನು ನಾವು ಮುಂದುವರಿಸುತ್ತೇವೆ " ಎಂದಿದ್ದರು.
2018ರಲ್ಲಿ ವಾಷಿಂಗ್ಟನ್ ಪೋಸ್ಟ್ ಅಂಕಣಕಾರ ಜಮಾಲ್ ಖಶೋಗ್ಗಿ ಅವರ ಭೀಕರ ಹತ್ಯೆ ಸೌದಿ ಅರೇಬಿಯಾ ಮತ್ತು ಟರ್ಕಿ ನಡುವಿನ ಸಂಬಂಧವನ್ನು ಅದಾಗಲೇ ಹದಗಡಿಸಿದೆ.