ETV Bharat / international

'ಫೈಜರ್'​ಗೆ ಅಸ್ತು ಎಂದ ಸೌದಿ; ಉಚಿತ ಲಸಿಕೆ ನೀಡಲು ಬಹ್ರೇನ್ ರೆಡಿ

ದೇಶದ ನಾಗರಿಕರಿಗೆ ಉಚಿತವಾಗಿ ಸುರಕ್ಷಿತ ಕೋವಿಡ್ ಲಸಿಕೆಯನ್ನು ವಿತರಿಸಲಾಗುವುದು ಎಂದು ಬಹ್ರೇನ್ ಸರ್ಕಾರ ಹೇಳಿದೆ.

Pfizer
ಕೋವಿಡ್ ಲಸಿಕೆ
author img

By

Published : Dec 11, 2020, 4:35 PM IST

ದುಬೈ: ಫೈಜರ್ ಹಾಗೂ ಬಯೋಎನ್​ಟೆಕ್‌ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ 'ಫೈಜರ್' ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಸೌದಿ ಅರೇಬಿಯಾ ಅನುಮೋದನೆ ನೀಡುತ್ತಿದ್ದಂತೆಯೇ ಸಾರ್ವಜನಿಕರಿಗೆ ಉಚಿತವಾಗಿ ಲಸಿಕೆ ವಿತರಿಸಲು ಬಹ್ರೇನ್ ಸರ್ಕಾರ ಸಜ್ಜಾಗಿದೆ.

1.5 ಮಿಲಿಯನ್ ​(15 ಲಕ್ಷ) ಜನಸಂಖ್ಯೆ ಹೊಂದಿದ ಈ ದೇಶದಲ್ಲಿನ ಎಲ್ಲಾ ನಾಗರಿಕರು ಮತ್ತು ನಿವಾಸಿಗಳಿಗೆ ಸುರಕ್ಷಿತ ಲಸಿಕೆಯನ್ನು ಉಚಿತವಾಗಿ ವಿತರಿಸಲಾಗುವುದು. ದಿನಕ್ಕೆ 10,000 ಜನರಂತೆ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದವರಿಗೆ ಲಸಿಕೆ ನೀಡಲಾಗುವುದು ಎಂದು ಬಹ್ರೇನ್ ಹೇಳಿದೆ. ಆದರೆ ಲಸಿಕೆಯ ಹೆಸರನ್ನು ಉಲ್ಲೇಖಿಸಿಲ್ಲ.

ಇಂಗ್ಲೆಂಡ್​ ಬಳಿಕ ಫೈಜರ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದ ಪ್ರಪಂಚದ ಎರಡನೇ ದೇಶ ನಮ್ಮದಾಗಿದೆ ಎಂದು ವಾರದ ಹಿಂದೆ ಬಹ್ರೇನ್ ಸರ್ಕಾರ ಹೇಳಿಕೆ ನೀಡಿತ್ತು. ಅಲ್ಲದೇ ಚೀನಾ ಉತ್ಪಾದನೆ ಮಾಡಿರುವ 'ಸಿನೊಫಾರ್ಮ್' ಎಂಬ ಕೋವಿಡ್​ ಲಸಿಕೆಯ ತುರ್ತು ಬಳಕೆಗೆ ಬಹ್ರೇನ್ ಈಗಾಗಲೇ ಸಮ್ಮತಿ ನೀಡಿದ್ದು, 6,000 ಜನರ ಮೇಲೆ ಪ್ರಯೋಗಿಸಿದೆ. ಸಿನೊಫಾರ್ಮ್ ಲಸಿಕೆಯು ಶೇ. 86ರಷ್ಟು ಪರಿಣಾಮಕಾರಿಯಾಗಿದೆ ಎಂದು ಯುನೈಟೆಡ್ ಅರಬ್ ಎಮಿರೈಟ್ಸ್​ ಹೇಳಿದೆ.

ಓದಿ: ಫೈಜರ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದ ಅಮೆರಿಕದ ಎಫ್​ಡಿಎ

ಇಂದು ಫೈಜರ್ ಲಸಿಕೆಯ ತುರ್ತು ಬಳಕೆಗೆ ಅಮೆರಿಕದ ಎಫ್​ಡಿಎ (ಫುಡ್​ &​ ಡ್ರಗ್​ ಅಡ್ಮಿನಿಸ್ಟ್ರೇಷನ್​) ಅನುಮೋದನೆ ನೀಡಿದೆ. 16 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯೋಮಾನದವರಿಗೆ ಮಾತ್ರ ತುರ್ತು ಪರಿಸ್ಥಿತಿಯಿದ್ದಲ್ಲಿ ಲಸಿಕೆ ಬಳಸುವಂತೆ ಸಲಹೆ ನೀಡಿದೆ.

ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್ -ವಿ ಲಸಿಕೆಯನ್ನು ತೆಗೆದುಕೊಂಡವರು ಎರಡು ತಿಂಗಳವರೆಗೆ ಮದ್ಯ ಸೇವಿಸುವಂತಿಲ್ಲ ಎಂದು ರಷ್ಯಾದ ಆರೋಗ್ಯಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈ ವಿಚಾರ ಅಲ್ಲಿ ಚರ್ಚೆಗೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.