ಕ್ಯಾನ್ಬೆರಾ (ಆಸ್ಟ್ರೇಲಿಯಾ) : ಸಮುದ್ರದ ಬಲೆಗಳಲ್ಲಿ ಸಿಕ್ಕಿಬಿದ್ದ ತಿಮಿಂಗಿಲವನ್ನು ರಕ್ಷಿಸಿದ್ದಕ್ಕಾಗಿ ಆಸ್ಟ್ರೇಲಿಯಾದಲ್ಲಿ ವ್ಯಕ್ತಿಯೊಬ್ಬರಿಗೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ದಂಡವನ್ನ ವಿಧಿಸಿದ್ದು ಏತಕ್ಕಾಗಿ ಎಂಬುದು ನಿಖರವಾಗಿ ಸ್ಪಷ್ಟವಾಗಿಲ್ಲ. ಆದರೆ ಕ್ವೀನ್ಸ್‌ಲ್ಯಾಂಡ್ ರಾಜ್ಯವು ಕೌನ್ಸಿಲ್ ಆಸ್ತಿಯನ್ನು ಹಾಳು ಮಾಡಿದರೆ ಮತ್ತು ತಿಮಿಂಗಿಲಗಳ ಹತ್ತಿರ ಹೋದರೆ ದಂಡವನ್ನು ವಿಧಿಸುವ ನಿಯಮ ಹೊಂದಿದೆ.
ಆಸ್ಟ್ರೇಲಿಯಾದ ಕಡಲತೀರಗಳ ಸುತ್ತಲೂ ಶಾರ್ಕ್ ಬಲೆಗಳ ಬಳಕೆ ಇತರ ವನ್ಯಜೀವಿಗಳ ಮೇಲೆ ಪರಿಣಾಮ ಬೀರುವುದರಿಂದ ವಿವಾದಾಸ್ಪದವಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.