ನ್ಯೂ ಸೌತ್ ವೇಲ್ಸ್ : ಆಸ್ಟ್ರೇಲಿಯಾದ ಕೆಲ ಭಾಗಗಳಲ್ಲಿ ಉಲ್ಬಣಿಸುತ್ತಿರುವ ಉಷ್ಣತೆಯು ಕಾಡ್ಗಿಚ್ಚಿನ ಭಯವನ್ನು ಹುಟ್ಟು ಹಾಕಿದೆ. ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ನಲ್ಲಿ ಭಾನುವಾರ ಕಾಡ್ಗಿಚ್ಚುಗಳು ಹೊತ್ತಿಕೊಂಡಿದೆ.
ರಾಜ್ಯದ ಒಂಬತ್ತು ಪ್ರದೇಶಗಳಲ್ಲಿ ಓಪನ್ ಏರ್ ಫೈರ್ನ್ನು ನಿಷೇಧಿಸಲಾಗಿದೆ. ನ್ಯೂ ಸೌತ್ ವೇಲ್ಸ್‌ನ ಅಗ್ನಿಶಾಮಕ ಇಲಾಖೆ 45 ಬುಷ್‌ಫೈರ್‌ಗಳನ್ನು ವರದಿ ಮಾಡಿದೆ.
ರಾಜ್ಯದ ಕೆಲವು ಭಾಗಗಳಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ಗೂ ಅಧಿಕವಾಗಿದೆ ಎಂದು ಹೇಳಲಾಗಿದೆ. ಆಸ್ಟ್ರೇಲಿಯಾದ ಹವಾಮಾನ ಇಲಾಖೆ ಭಾನುವಾರ ಮಧ್ಯಾಹ್ನದ ನಂತರ ತಂಪಾದ ಗಾಳಿ ತಾಪಮಾನವನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಿತ್ತು.
ಆಸ್ಟ್ರೇಲಿಯಾ ಖಂಡದ ಕೆಲವು ಭಾಗಗಳು ಶನಿವಾರದಂದು ದಾಖಲೆಯ ಉಷ್ಣತೆ ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.