ಅಬು ಧಾಬಿ: ಏರ್ ಆಂಬ್ಯುಲೆನ್ಸ್ ಅಪಘಾತಕ್ಕೀಡಾಗಿ ಅದರಲ್ಲಿದ್ದ ಇಬ್ಬರು ಪೈಲಟ್ಗಳು ಮತ್ತು ಓರ್ವ ವೈದ್ಯ ಹಾಗೂ ಓರ್ವ ನರ್ಸ್ ಸಾವನ್ನಪ್ಪಿರುವ ಘಟನೆ ಯುಎಇ ರಾಜಧಾನಿ ಅಬುಧಾಬಿಯಲ್ಲಿ ನಡೆದಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
ಪೈಲಟ್ ಟ್ರೈನರ್ ಖಮಿಸ್ ಸಯೀದ್ ಅಲ್-ಹೋಲಿ, ಲೆಫ್ಟಿನೆಂಟ್ ಪೈಲಟ್ ನಾಸರ್ ಮಹಮ್ಮದ್ ಅಲ್-ರಷೀದಿ ಹಾಗೂ ಡಾ. ಶಾಹಿದ್ ಫಾರೂಕ್ ಘೋಲಂ ಮತ್ತು ನರ್ಸ್ ಜೋಯೆಲ್ ಕ್ವಿ ಸಕರ ಮಿಂಟೋ ಮೃತರು.
ಕರ್ತವ್ಯದಲ್ಲಿದ್ದಾಗ ಮೃತಪಟ್ಟ ನಾಲ್ವರ ಸಾವಿಗೆ ಅಬು ಧಾಬಿ ಪೊಲೀಸ್ ಮುಖ್ಯ ಕಚೇರಿ ಸಿಬ್ಬಂದಿ ಮತ್ತು ಸೇನೆ ಸಂತಾಪ ಸೂಚಿಸಿದೆ.
ಗಲ್ಫ್ ನ್ಯೂಸ್ ಈ ಕುರಿತು ವರದಿ ಮಾಡಿದ್ದು, ಪೈಲಟ್ಗಳು ಯುಎಇಗೆ ಸೇರಿದವರು ಎಂದು ತಿಳಿದು ಬಂದಿದೆ. ಆದರೆ ವೈದ್ಯ ಮತ್ತು ನರ್ಸ್ ಯಾವ ರಾಷ್ಟ್ರಕ್ಕೆ ಸೇರಿದವರು ಎಂಬ ವಿಚಾರ ತಿಳಿದಿಲ್ಲ.
ಇದನ್ನೂ ಓದಿ: ಅಫ್ಘಾನಿಸ್ತಾನ ತಾಲಿಬಾನ್ ವಶವಾಗುತ್ತಿದ್ದಂತೆ, ಜಮ್ಮು ಕಾಶ್ಮೀರದಲ್ಲಿ ಉಗ್ರರ ಸಂಖ್ಯೆ ಹೆಚ್ಚಳ: ವರದಿ