ಜಕಾರ್ತ್(ಇಂಡೋನೇಷ್ಯಾ): ಇಲ್ಲಿನ ಈಸ್ಟ್ ಜಾವಾ ಪ್ರದೇಶದಲ್ಲಿ ನಡೆದ ಭೂ ಕುಸಿತದಲ್ಲಿ 12 ಮಂದಿ ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದ್ದು, ಏಳು ಮಂದಿ ನಾಪತ್ತೆಯಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನೈಸರ್ಗಿಕ ವಿಪತ್ತು ಇಲಾಖೆ ಮಾಹಿತಿ ನೀಡಿದ್ದು, ಘಟನೆಯಲ್ಲಿ 20ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಭೂ ಕುಸಿತದಿಂದಾಗಿ ಮೃತದೇಹಗಳು ಬೇರೆ ಕಡೆ ಹರಿದು ಮುಚ್ಚಿ ಹೋಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಓದಿ: ಭಾರೀ ಮಳೆಯಿಂದ ಇಂಡೋನೇಷ್ಯಾದಲ್ಲಿ ಭೂಕುಸಿತ : ಇಬ್ಬರು ಸಾವು, 16 ಮಂದಿ ನಾಪತ್ತೆ
ಅಧಿಕ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಈ ಘಟನೆ ನಡೆದಿದ್ದು, ಈ ಘಟನೆಯಿಂದ 180 ಗ್ರಾಮದ ಜನರಿಗೆ ತೊಂದರೆಯಾಗಿದೆ ಎಂದು ತಿಳಿದು ಬಂದಿದ್ದು, 100 ಜನರನ್ನ ತಮ್ಮ ನಿವಾಸಗಳಿಂದ ಬೇರೆ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.