ETV Bharat / international

'ಧ್ವಂಸಗೊಂಡ ಉಕ್ರೇನ್ ಮರಳಿ ಕಟ್ಟುತ್ತೇವೆ, ಇದಕ್ಕೆ ರಷ್ಯಾ ಬೆಲೆ ತೆರಲಿದೆ' - ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​

ಉಕ್ರೇನ್​ ವಿರುದ್ಧ ರಷ್ಯಾ ಯುದ್ಧ ಮುಂದುವರೆಸಿದ್ದು, ಇದರ ಮಧ್ಯೆ ಭರವಸೆಯ ಮಾತುಗಳನ್ನಾಡಿರುವ ಅಲ್ಲಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಯುದ್ಧ ಮುಗಿದ ಬಳಿಕ ಧ್ವಂಸಗೊಂಡಿರುವ ನಮ್ಮ ದೇಶವನ್ನು ಮರಳಿ ಕಟ್ಟುತ್ತೇವೆ ಎಂದಿದ್ದಾರೆ.

Ukraine president
Ukraine president
author img

By

Published : Mar 3, 2022, 6:13 PM IST

ಕೀವ್​​(ಉಕ್ರೇನ್​): ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಕಳೆದ 8 ದಿನಗಳಿಂದಲೂ ಮುಂದುವರೆದಿದೆ. ಈಗಾಗಲೇ ಕೀವ್​, ಖಾರ್ಕಿವ್​​ ಸೇರಿದಂತೆ ಬಹುತೇಕ ಎಲ್ಲ ನಗರಗಳು ಧ್ವಂಸಗೊಂಡಿವೆ. ಈ ವಿಚಾರವಾಗಿ ಮಾತನಾಡಿರುವ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಧ್ವಂಸಗೊಂಡಿರುವ ನಮ್ಮ ದೇಶವನ್ನು ಮರಳಿ ಕಟ್ಟುತ್ತೇವೆ ಎಂದಿದ್ದಾರೆ.

ಪ್ರತಿವೊಂದು ಮನೆ, ಬೀದಿ, ನಗರ ಪುನಃ ಸ್ಥಾಪಿಸುತ್ತೇವೆ ಎಂದಿರುವ ವೊಲೊಡಿಮಿರ್​, ಇದಕ್ಕೆ ರಷ್ಯಾ ಸಂಪೂರ್ಣ ಬೆಲೆ ತೆರಲಿದೆ ಎಂದಿದ್ದಾರೆ. ಉಕ್ರೇನಿಯರ ವಿರುದ್ಧ ಸಮರ ಸಾರಿರುವ ನೀವೂ ಪ್ರತಿವೊಂದಕ್ಕೂ ಮರುಪಾವತಿ ಮಾಡಬೇಕಾಗುತ್ತದೆ ಎಂದು ಹೇಳಿರುವ ವಿಡಿಯೋ ಬಿಡುಗಡೆಯಾಗಿದೆ. ಜೊತೆಗೆ ರಷ್ಯಾ ಸೈನಿಕರ ಮೃತ ದೇಹದಿಂದ ಉಕ್ರೇನ್ ಆವೃತವಾಗುವುದನ್ನು ಬಯಸುವುದಿಲ್ಲ. ಎಲ್ಲರೂ ನಿಮ್ಮ ದೇಶಕ್ಕೆ ಮರಳಿ ಎಂದು ಝೆಲೆನ್ಸ್ಕಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ರಷ್ಯಾ ಸೈನಿಕರ ತಾಯಂದಿರೇ ಕೀವ್‌ಗೆ ಬಂದು ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ: ಉಕ್ರೇನ್‌

ಉಕ್ರೇನ್​ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿದ್ದರಿಂದ ಅಲ್ಲಿನ ಜನರು ಇನ್ನಿಲ್ಲದ ತೊಂದರೆಗೊಳಗಾಗಿದ್ದಾರೆ. ಹೀಗಾಗಿ ಉಕ್ರೇನ್​ ದೇಶಕ್ಕೆ ವಿಶ್ವಸಂಸ್ಥೆ 1.5 ಬಿಲಿಯನ್​ ಡಾಲರ್ ನೆರವು ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಉಕ್ರೇನ್​ ಮೇಲಿನ ಯುದ್ಧ ಮುಂದುವರೆಯಲಿದ್ದು, ಯಾವುದೇ ಕಾರಣಕ್ಕೂ ಇದನ್ನ ನಿಲ್ಲಿಸುವುದಿಲ್ಲ ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್​​ ಘೋಷಣೆ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.