ಬೀಜಿಂಗ್( ಚೀನಾ): ಹಲವಾರು ದೇಶಗಳು ಚೀನಾದ ಬೀಜಿಂಗ್ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್ ಅನ್ನು ಬಹಿಷ್ಕರಿಸಿವೆ. ಇದಷ್ಟು ಮಾತ್ರವಲ್ಲದೇ ಸ್ವಿಟ್ಜರ್ಲೆಂಡ್ನಲ್ಲಿರುವ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಪ್ರಧಾನ ಕಚೇರಿ ಬಳಿ ನೂರಾರು ಟಿಬೇಟಿಯನ್ನರು ಸಾಮೂಹಿಕ ಪ್ರತಿಭಟನೆ ನಡೆಸಿದ್ದಾರೆ.
2022ರ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟವನ್ನು 'ನರಮೇಧದ ಕ್ರೀಡಾಕೂಟ' ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಿಟ್ಜರ್ಲೆಂಡ್ನ ಲೌಸಾನ್ನೆಯಲ್ಲಿರುವ ಐಒಸಿ ಪ್ರಧಾನ ಕಚೇರಿಯಿಂದ ಒಲಿಂಪಿಕ್ ಮ್ಯೂಸಿಯಂವರೆಗೆ ಪ್ರತಿಭಟನಾ ಮೆರವಣಿಗೆಯನ್ನು ನೂರಾರು ಟಿಬೇಟಿಯನ್ನರು ನಡೆಸಿದ್ದಾರೆ. ಟಿಬೆಟ್ ಜನರ ಜೊತೆಗೆ ಉಯ್ಘರ್ ಸಮುದಾಯದ ಪ್ರತಿನಿಧಿಗಳೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಚೀನಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗಿದ್ದು, ಐಒಸಿಗೆ ಮನವಿ ಪತ್ರವೊಂದು ನೀಡುವ ಮೂಲಕ ಚಳಿಗಾಲದ ಒಲಿಂಪಿಕ್ ಅನ್ನು ನಡೆಸಲು ಅನುಮತಿ ನೀಡಿರುವುದಕ್ಕೆ ಪ್ರತಿಭಟನಾಕಾರರು ನಿರಾಸೆ ವ್ಯಕ್ತಪಡಿಸಿದ್ದಾರೆ ಎಂದು ಟಿಬೆಟ್ ಬ್ಯೂರೋ ಜಿನೀವಾ ತಿಳಿಸಿದೆ.
ಚೀನಾ ಸರ್ಕಾರದ ದೌರ್ಜನ್ಯಗಳು ಮತ್ತು ನರಮೇಧದ ನಡುವೆ ಚಳಿಗಾಲದ ಒಲಿಂಪಿಕ್ಸ್ ನಡೆಯುತ್ತಿದೆ ಎಂದು ಒಪ್ಪಿಕೊಳ್ಳುವಂತೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಪ್ರತಿಭಟನಾಕಾರರು ಒತ್ತಾಯಿಸಿದ್ದು, ಈ ಕುರಿತು ಹೇಳಿಕೆ ನೀಡುವಂತೆ ಆಗ್ರಹಿಸಲಾಗಿದೆ.
ಇದನ್ನೂ ಓದಿ: ಭಾರತ ಜೊತೆ ಅಮೆರಿಕ ಸಂಬಂಧ ತನ್ನದೇ ಅರ್ಹತೆ ಮೇಲೆ ನಿಂತಿದೆ; ರಷ್ಯಾ ಜತೆಗಿನ ಉದ್ವಿಗ್ನತೆ ಪರಿಣಾಮ ಬೀರಲ್ಲ ಎಂದ ಯುಎಸ್
ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ನೀಡಲಾದ ಪತ್ರದಲ್ಲಿ ಟಿಬೆಟ್ನ ದೇಶಭ್ರಷ್ಟ ಸರ್ಕಾರದ ಸಂಸತ್ನ ಸದಸ್ಯರಾದ ಥಬ್ಟೆನ್ ವಾಂಗ್ಚೆನ್, ಥುಪ್ಟೆನ್ ಗ್ಯಾಟ್ಸೊ ಮತ್ತು ಆಸ್ಟ್ರಿಯಾ, ಬೆಲ್ಜಿಯಂ, ಫ್ರಾನ್ಸ್, ನೆದರ್ಲ್ಯಾಂಡ್ಸ್, ಇಟಲಿ, ಜರ್ಮನಿ, ಸ್ಪೇನ್, ಸ್ವಿಟ್ಜರ್ಲೆಂಡ್ ಹಾಗೂ ಲಿಚ್ಟೆನ್ಸ್ಟೈನ್ನಲ್ಲಿರುವ ಟಿಬೆಟಿಯನ್ ಸಮುದಾಯಗಳ ಅಧ್ಯಕ್ಷರು ಸಹಿ ಮಾಡಿದ್ದಾರೆ.