ETV Bharat / international

ಶಿಕ್ಷಕನ ಶಿರಚ್ಛೇದನ ಪ್ರಕರಣಕ್ಕೆ ಅಧಿಕಾರಿಗಳು ನಿರ್ಣಾಯಕವಾಗಿ ಪ್ರತಿಕ್ರಿಯಿಸಲಿದ್ದಾರೆ: ಫ್ರಾನ್ಸ್ ಪ್ರಧಾನಿ - ಫ್ರಾನ್ಸ್​ನಲ್ಲಿ ಶಾಲಾ ಶಿಕ್ಷಕನ ಶಿರಚ್ಛೇದನ

"ಶಿಕ್ಷಕರು ಸಮಾಜದಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಅವರಿಂದಾಗಿ ಗಣರಾಜ್ಯ ಮತ್ತು ಅದರ ನಾಗರಿಕರು ಮುಕ್ತವಾಗಿ ಬದುಕುತ್ತಾರೆ. ನಾವು ಈ ಪ್ರಕರಣವನ್ಜು ಕೈಬಿಡುವುದಿಲ್ಲ" ಎಂದು ಕ್ಯಾಸ್ಟೆಕ್ಸ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

author img

By

Published : Oct 17, 2020, 9:18 PM IST

ಪ್ಯಾರಿಸ್ (ಫ್ರಾನ್ಸ್): ಪ್ಯಾರಿಸ್ ಬಳಿ ಶಿಕ್ಷಕನ ಹತ್ಯೆಗೆ ಅತ್ಯಂತ ನಿರ್ಣಾಯಕ ರೀತಿಯಲ್ಲಿ ಫ್ರೆಂಚ್ ಅಧಿಕಾರಿಗಳು ಪ್ರತಿಕ್ರಿಯಿಸಲಿದ್ದಾರೆ ಎಂದು ಪ್ರಧಾನಿ ಜೀನ್ ಕ್ಯಾಸ್ಟೆಕ್ಸ್ ಹೇಳಿದ್ದಾರೆ.

ಪ್ಯಾರಿಸ್‌ನ ಉತ್ತರದ ಕಾನ್ಫ್ಲಾನ್ಸ್-ಸೈಂಟ್-ಹೊನೊರಿನ್ ಕಮ್ಯೂನ್‌ನಲ್ಲಿ ಶುಕ್ರವಾರ ಮಧ್ಯಾಹ್ನ ಶಾಲಾ ಶಿಕ್ಷಕನ ಶಿರಚ್ಛೇದನ ಮಾಡಲಾಗಿತ್ತು. ನಂತರ ಶಂಕಿತನನ್ನು ಫ್ರೆಂಚ್ ಪೊಲೀಸರು ಕೊಂದಿದ್ದು, ಪ್ರಾಸಿಕ್ಯೂಟರ್ ಕಚೇರಿಯ ಭಯೋತ್ಪಾದನಾ ನಿಗ್ರಹ ವಿಭಾಗವು ಪ್ರಸ್ತುತ ಘಟನೆಯ ತನಿಖೆ ನಡೆಸುತ್ತಿದೆ.

"ಶಿಕ್ಷಕರು ಸಮಾಜದಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಅವರಿಂದಾಗಿ ಗಣರಾಜ್ಯ ಮತ್ತು ಅದರ ನಾಗರಿಕರು ಮುಕ್ತವಾಗಿ ಬದುಕುತ್ತಾರೆ. ನಾವು ಈ ಪ್ರಕರಣವನ್ಜು ಕೈಬಿಡುವುದಿಲ್ಲ" ಎಂದು ಕ್ಯಾಸ್ಟೆಕ್ಸ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಕೊಲೆಯ ತನಿಖೆಯ ಭಾಗವಾಗಿ ಒಂಬತ್ತು ಜನರನ್ನು ಪೊಲಿಸರು ವಶಕ್ಕೆ ಪಡೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಶಂಕಿತನನ್ನು ಮಾಸ್ಕೋದ ಚೆಚೆನ್ ಮೂಲದ 18 ವರ್ಷದ ಅಬ್ದುಲಖ್ ಎ ಎಂದು ಗುರುತಿಸಲಾಗಿದೆ.

ಶಿಕ್ಷಕನು ಪ್ರವಾದಿ ಮೊಹಮ್ಮದ್​ನನ್ನು ಚಿತ್ರಿಸುವ ವಿವಾದಾತ್ಮಕ ವ್ಯಂಗ್ಯಚಿತ್ರಗಳನ್ನು ತನ್ನ ವಿದ್ಯಾರ್ಥಿಗಳಿಗೆ ತೋರಿಸಿದ್ದಾನೆ ಎಂದು ಆತನನ್ನು ಕೊಲೆ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.