ETV Bharat / international

ಫೈಜರ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ - ಫೈಜರ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ

ವಿಶ್ವ ಆರೋಗ್ಯ ಸಂಸ್ಥೆಯು ಫೈಜರ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಯುನೈಟೆಡ್ ಸ್ಟೇಟ್ಸ್, ಬ್ರಿಟನ್, ಯುರೋಪಿಯನ್ ಯೂನಿಯನ್ ಮತ್ತು ಇತರ ದೇಶಗಳಲ್ಲಿ ಈಗಾಗಲೇ ಫೈಜರ್-ಬಯೋಟೆಕ್ ಲಸಿಕೆ ಕ್ಲಿಯರೆನ್ಸ್ ಪಡೆದಿದೆ ಎಂದು ಡಬ್ಲ್ಯೂಎಚ್​ಓ ಹೇಳಿದೆ.

ಫೈಜರ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ

author img

By

Published : Jan 1, 2021, 12:04 PM IST

Updated : Jan 1, 2021, 12:21 PM IST

ಜಿನೀವಾ: ಫೈಜರ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ. ಈ ಮೂಲಕ ಲಸಿಕೆಯನ್ನು ಶೀಘ್ರವೇ ಆಮದು ಮಾಡಿಕೊಂಡು ವಿತರಿಸಲು ದೇಶಗಳಿಗೆ ಅನುವು ಮಾಡಿಕೊಟ್ಟಿದೆ.

ಪ್ರತಿಯೊಂದು ದೇಶವು ಯಾವುದೇ ಕೊರೊನಾ ಲಸಿಕೆ ಬಳಕೆಗೆ ತನ್ನದೇ ಆದ ಅನುಮೋದನೆಯನ್ನು ನೀಡಬೇಕಾಗುತ್ತದೆ. ಆದರೆ ದುರ್ಬಲ ವ್ಯವಸ್ಥೆಗಳನ್ನು ಹೊಂದಿರುವ ದೇಶಗಳು ಲಸಿಕೆಗಾಗಿ ಸಾಮಾನ್ಯವಾಗಿ WHO ಅನ್ನು ಅವಲಂಬಿಸಿರುತ್ತವೆ.

ಯುನೈಟೆಡ್ ಸ್ಟೇಟ್ಸ್, ಬ್ರಿಟನ್, ಯುರೋಪಿಯನ್ ಯೂನಿಯನ್ ಮತ್ತು ಇತರ ದೇಶಗಳಲ್ಲಿ ಈಗಾಗಲೇ ಫೈಜರ್-ಬಯೋಟೆಕ್ ಲಸಿಕೆ ಕ್ಲಿಯರೆನ್ಸ್ ಪಡೆದಿದೆ ಎಂದು ಡಬ್ಲ್ಯೂಎಚ್​ಓ ಹೇಳಿದೆ.

ಇದನ್ನೂ ಓದಿ: ಆರ್ಥಿಕ ವಿಭಜನೆ ಮೂಲಕ ಬ್ರೆಕ್ಸಿಟ್ ಪ್ರಯಾಣ ಕೊನೆಗೊಳಿಸಿದ ಇಂಗ್ಲೆಂಡ್

ಫೈಜರ್ ಲಸಿಕೆಯನ್ನು ಅಲ್ಟ್ರಾ-ಕೋಲ್ಡ್ ಚೈನ್ ಉಪಕರಣಗಳಲ್ಲಿ ಸಂಗ್ರಹಿಸಬೇಕಾಗಿದೆ. ಅಗತ್ಯವಿರುವ ಫ್ರೀಜರ್‌ಗಳು ಮತ್ತು ವಿದ್ಯುತ್ ಸರಬರಾಜು ಲಭ್ಯವಿಲ್ಲದಿರುವ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಇದು ಒಂದು ದೊಡ್ಡ ಅಡಚಣೆಯಾಗಿದೆ.

ಜಾಗತಿಕ ಮಟ್ಟದಲ್ಲಿ ಕೊರೊನಾ ಲಸಿಕೆ ಲಭ್ಯವಾಗಲು ಸಹಾಯಕವಾಗುವ ಮಹತ್ವದ ಬೆಳವಣಿಗೆಯಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಲಸಿಕೆ ಲಭ್ಯವಾಗುವಂತೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

Last Updated : Jan 1, 2021, 12:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.