ETV Bharat / international

ಪಶ್ಚಿಮ ಯುರೋಪ್​ ನಿರಾಳ; ರಷ್ಯಾ, ಪಾಕ್​ನಲ್ಲಿ ನಿಲ್ಲದ ವೈರಸ್​ ಅಟ್ಟಹಾಸ!

ಯುರೋಪ್ ಹಾಗೂ ಅಮೆರಿಕದ ಹಲವಾರು ಭಾಗಗಳಲ್ಲಿ ಕೊರೊನಾ ವೈರಸ್​ ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದ್ದು, ಈ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟುಗಳು ಮತ್ತೆ ಗರಿಗೆದರುತ್ತಿವೆ. 28 ಸಾವಿರಕ್ಕೂ ಅಧಿಕ ಕೊರೊನಾ ಸಾವು ಕಂಡ ಇಟಲಿಗೆ ಇನ್ನೂ ಬಿಡುಗಡೆಯ ಭಾಗ್ಯ ಬಂದಂತಿಲ್ಲ.

W Europe relaxing virus measures, but Russian numbers spike

author img

By

Published : May 2, 2020, 8:27 PM IST

ಬಾರ್ಸಿಲೋನಾ: ಪಶ್ಚಿಮ ಯುರೋಪ್​ ರಾಷ್ಟ್ರಗಳಲ್ಲಿ ಕೊರೊನಾ ಲಾಕ್​ಡೌನ್​ ನಿಧಾನವಾಗಿ ತೆರವಾಗುತ್ತಿದೆ. ಆದರೆ ರಷ್ಯಾ ಹಾಗೂ ಪಾಕಿಸ್ತಾನಗಳಲ್ಲಿ ದಾಖಲೆ ಸಂಖ್ಯೆಯ ಹೊಸ ಕೊರೊನಾ ವೈರಸ್​ ಪ್ರಕರಣಗಳು ಪತ್ತೆಯಾಗಿವೆ.

ಯುರೋಪ್ ರಾಷ್ಟ್ರ ಸ್ಪೇನ್​ನಲ್ಲಿ ಜನ ಬೀದಿಗಿಳಿದು ವಸಂತ ಋತುವಿನ ಆಹ್ಲಾದ ಅನುಭವಿಸಿದ್ದು ಕಂಡು ಬಂದಿತು. ಸುಮಾರು ಏಳು ವಾರಗಳ ಕಟ್ಟುನಿಟ್ಟಿನ ಲಾಕ್​ಡೌನ್​ ನಂತರ ಸ್ಪೇನ್​ ಜನ ಪ್ರಥಮ ಬಾರಿಗೆ ಮನೆಯಿಂದ ಹೊರಬಂದು ಆನಂದಿಸುತ್ತಿದ್ದಾರೆ. ಜರ್ಮನಿಯಲ್ಲೂ ಮಕ್ಕಳು ಮೈದಾನದಲ್ಲಿ ಓಡಾಡಿ ಖುಷಿಪಟ್ಟ ದೃಶ್ಯಗಳು ಕಂಡುಬಂದವು.

ಸ್ಪೇನ್​ನಲ್ಲಿ ಸುಮಾರು 2,13,000 ಸಾವಿರ ಜನರಿಗೆ ಸೋಂಕು ತಗುಲಿ, 25 ಸಾವಿರ ಜನ ಮೃತಪಟ್ಟಿದ್ದರು. ಸದ್ಯ ವೈರಸ್​ ನಿಯಂತ್ರಣಕ್ಕೆ ಬರುತ್ತಿರುವುದರಿಂದ ನಿರ್ಬಂಧಗಳನ್ನು ಹಂತ ಹಂತವಾಗಿ ತೆರವುಗೊಳಿಸಲಾಗುತ್ತಿದೆ.

ಯುರೋಪ್ ಹಾಗೂ ಅಮೆರಿಕದ ಹಲವಾರು ಭಾಗಗಳಲ್ಲಿ ಕೊರೊನಾ ವೈರಸ್​ ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದ್ದು, ಈ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟುಗಳು ಮತ್ತೆ ಗರಿಗೆದರುತ್ತಿವೆ. 28 ಸಾವಿರಕ್ಕೂ ಅಧಿಕ ಕೊರೊನಾ ಸಾವು ಕಂಡ ಇಟಲಿಗೆ ಇನ್ನೂ ಬಿಡುಗಡೆಯ ಭಾಗ್ಯ ಬಂದಂತಿಲ್ಲ. 6700 ಕ್ಕೂ ಅಧಿಕ ಕೊರೊನಾ ಸಾವುಗಳನ್ನು ಕಂಡ ಜರ್ಮನಿಯಲ್ಲಿ ಸಂಪೂರ್ಣ ಲಾಕ್​ಡೌನ್​ ವಿಧಿಸಲಾಗಿರಲಿಲ್ಲ.

ಪಾಕಿಸ್ತಾನ ಹಾಗೂ ರಷ್ಯಾಗಳಲ್ಲಿ ಒಂದೇ ದಿನದಲ್ಲಿ ದಾಖಲೆಯ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು ವಿಶ್ವದಲ್ಲಿ ಆತಂಕ ಮುಂದುವರಿಯುವಂತೆ ಮಾಡಿದೆ. ರಷ್ಯಾದಲ್ಲಿ ಒಂದೇ ದಿನ 9,633 ಕೊರೊನಾ ಪಾಸಿಟಿವ್​ ಪ್ರಕರಣಗಳು ಬೆಳಕಿಗೆ ಬಂದಿದ್ದು, ವೈದ್ಯಕೀಯ ಸೌಲಭ್ಯಗಳ ಕೊರತೆ ಕಾಡುವ ಭೀತಿ ಎದುರಾಗಿದೆ. ಪಾಕಿಸ್ತಾನದಲ್ಲಿ 1,297 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 18 ಸಾವಿರಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.