ETV Bharat / international

ಯುದ್ಧದಲ್ಲಿ ರಷ್ಯಾಗೆ ಬೆಲಾರಸ್​ ಬೆಂಬಲ ; ಅಮೆರಿಕ ಗುಪ್ತದಳ ಮಾಹಿತಿ

ಒಂದು ವೇಳೆ ಉಕ್ರೇನ್​ ಶಾಂತಿ ಒಪ್ಪಂದ ಮಾಡಿಕೊಳ್ಳದಿದ್ದರೆ, ರಷ್ಯಾದ ಜೊತೆಗೂಡಿ ಬೆಲಾರಸ್​ ಸೈನಿಕರು ಉಕ್ರೇನ್​ ಮೇಲೆ ಯುದ್ಧ ಮಾಡಲಿದ್ದಾರೆ ಎಂದು ಅಮೆರಿಕ ಗುಪ್ತಚರ ಇಲಾಖೆ ತಿಳಿಸಿದೆ..

Ukraine invasion
ಗುಪ್ತದಳ ಮಾಹಿತಿ
author img

By

Published : Feb 28, 2022, 11:57 AM IST

ವಾಷಿಂಗ್ಟನ್ : ಉಕ್ರೇನ್​ ಮೇಲೆ ದಾಳಿ ಮಾಡಿರುವ ರಷ್ಯಾದ ಸೇನೆಗೆ ಮಿತ್ರ ರಾಷ್ಟ್ರವಾದ ಬೆಲಾರಸ್​ ಬೆಂಬಲ ನೀಡಿ ಯುದ್ಧ ಕಣಕ್ಕೆ ಇಳಿಯಲಿದೆ ಎಂದು ಅಮೆರಿಕ ಹೇಳಿದೆ. ಒಂದು ವೇಳೆ ಇದು ನಿಜವಾದಲ್ಲಿ ಮೂರನೇ ಮಹಾಯುದ್ಧ ನಡೆಯುವ ಎಲ್ಲಾ ಸಾಧ್ಯತೆಗಳಿವೆ.

ಯುದ್ಧದಲ್ಲಿ ಬೆಲಾರಸ್​ ರಷ್ಯಾಗೆ ಬೆಂಬಲವಾಗಿದೆ. ಅದು ಈವರೆಗೂ ನೇರವಾಗಿ ಸಂಘರ್ಷಕ್ಕೆ ಇಳಿದಿಲ್ಲ. ಗುಪ್ತಚರ ಮಾಹಿತಿಯ ಪ್ರಕಾರ ಬೆಲಾರಸ್​ ನೇರ ಯುದ್ಧಕ್ಕೆ ಜಿಗಿಯಬೇಕೇ? ಬೇಡವೇ? ಎಂಬುದು, ರಷ್ಯಾ ಮತ್ತು ಉಕ್ರೇನ್​ ಮಧ್ಯೆ ನಡೆಯಲಿರುವ ಒಪ್ಪಂದದ ಬಳಿಕ ನಿರ್ಧರಿಸಲಿದೆ.

ಒಂದು ವೇಳೆ ಉಕ್ರೇನ್​ ಶಾಂತಿ ಒಪ್ಪಂದ ಮಾಡಿಕೊಳ್ಳದಿದ್ದರೆ, ರಷ್ಯಾದ ಜೊತೆಗೂಡಿ ಬೆಲಾರಸ್​ ಸೈನಿಕರು ಉಕ್ರೇನ್​ ಮೇಲೆ ಯುದ್ಧ ಮಾಡಲಿದ್ದಾರೆ ಎಂದು ಅಮೆರಿಕ ಗುಪ್ತಚರ ಇಲಾಖೆ ತಿಳಿಸಿದೆ.

ಉಕ್ರೇನ್​ ಯೋಧರ ಭಾರಿ ಪ್ರತಿರೋಧದಿಂದ ರಷ್ಯಾ ಪಡೆಗಳು ಪ್ರಮುಖ​ ನಗರಗಳಿಗೆ ಮುನ್ನುಗ್ಗಲು ಹರಸಾಹಸ ಪಡುತ್ತಿವೆ. ಕೀವ್​, ಕ್ರೆಮ್ಲಿನ್​ ನಗರಗಳ ಪ್ರವೇಶ ವಿಳಂಬವಾಗುತ್ತಿರುವುದಕ್ಕೆ ಉಕ್ರೇನ್​ ಯೋಧರ ಪ್ರತಿರೋಧವೇ ಕಾರಣ ಎಂದು ಅಮೆರಿಕ ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.

ಓದಿ: ಒಳ ಹೋರಾಟ.. ಜರ್ಮನಿ, ಅಮೆರಿಕ ಬಳಿಕ ಬೆಲ್ಜಿಯಂನಿಂದ ಉಕ್ರೇನ್​ಗೆ ಶಸ್ತ್ರಾಸ್ತ್ರ ನೆರವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.