ETV Bharat / international

ಎಬೋಲಾ ವಿರುದ್ಧದ ಹೋರಾಟಕ್ಕೆ ಅಮೆರಿಕ​ ಸಹಕಾರ ಕೋರಿದ WHO

ಕಾಂಗೋದಲ್ಲಿ ಕಾಣಿಸಿಕೊಂಡಿರುವ ಎಬೋಲಾ ವೈರಸ್​ ವಿರುದ್ಧ ಹೋರಾಡಲು ಯುಎಸ್​ನಿಂದ ಸಹಕಾರ ಸಿಗುವ ಭರವಸೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ.

US cooperates with WHO on Ebola despite Trump pullout threat
ಯುಎಸ್​ ಜೊತೆ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಚರ್ಚೆ
author img

By

Published : Jun 11, 2020, 9:18 AM IST

ಜಿನೀವಾ : ಟ್ರಂಪ್​ ಆಡಳಿತವು ಅಮೆರಿಕವನ್ನ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಗಿಡಲು ಪ್ರಯತ್ನಿಸುತ್ತಿರುವ ನಡುವೆಯೇ, ಕಾಂಗೋದಲ್ಲಿ ಕಾಣಿಸಿಕೊಂಡಿರುವ ಹೊಸ ಎಬೋಲಾ ವೈರಸ್​ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವ ಕುರಿತು ಯುಎಸ್​ ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ ಅಲೆಕ್ಸ್ ಅಜರ್​​​​​ ಜೊತೆ ಚರ್ಚಿಸಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ.

ಅಜರ್​ ಅವರೊಂದಿಗೆ ಉತ್ತಮ ಚರ್ಚೆ ನಡೆಸಿದ್ದೇನೆ. ಕಾಂಗೋದ ಈಕ್ವೆಟೂರ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡಿರುವ ಹೊಸ ಎಬೋಲಾ ರೋಗದ​ ವಿರುದ್ಧ ಹೋರಾಡಲು ಯುಎಸ್​ನ ಸಹಕಾರ ಸಿಗುವ ಭರವಸೆಯಿದೆ ಎಂದು ಘೆಬ್ರೆಯೆಸಸ್ ಹೇಳಿದ್ದಾರೆ.

ಕಾಂಗೋದ 9 ಲ್ಯಾಬ್​ಗಳಲ್ಲಿ ಎಬೋಲಾ ಪ್ರಕರಣಗಳು ದೃಢಪಟ್ಟಿವೆ ಮತ್ತು ಮೂರು ಸಂಭವನೀಯ ಪ್ರಕರಣಗಳು ಪತ್ತೆಯಾಗಿವೆ ಎಂದು ಡಬ್ಲ್ಯುಹೆಚ್​​ಒ ತುರ್ತು ಮುಖ್ಯಸ್ಥ ಡಾ.ಮೈಕೆಲ್ ರಯಾನ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.