ETV Bharat / international

13 ಮಹಿಳೆಯರ ಸರಣಿ ಹಂತಕ ಪೀಟರ್‌ ಸುಕ್ಲಿಫ್ಫೆ ಕೊರೊನಾ ಸೋಂಕಿಗೆ ಬಲಿ - ಪೀಟರ್‌ ಸುಕ್ಲಿಫ್ಫೆ ಸರಣಿ ಹತ್ಯೆ ಕೇಸ್

ಹೆಚ್‌ಎಂಪಿ ಫ್ರಾಂಕ್‌ಲ್ಯಾಂಡ್ ಖೈದಿ ಪೀಟರ್ ಕೂನನ್ (ಮೂಲ ಹೆಸರು ಸುಕ್ಲಿಫ್ಫೆ) ನವೆಂಬರ್ 13ರಂದು ಆಸ್ಪತ್ರೆಯಲ್ಲಿ ನಿಧನರಾದರು. ಕಾರಾಗೃಹ ಮತ್ತು ಪರೀಕ್ಷೆಯ ಒಂಬುಡ್ಸ್​ಮನ್ ಅವರಿಗೆ ಮಾಹಿತಿ ನೀಡಲಾಗಿದೆ..

Peter Sutcliffe
ಪೀಟರ್‌ ಸುಕ್ಲಿಫ್ಫೆ
author img

By

Published : Nov 13, 2020, 3:51 PM IST

ಲಂಡನ್: ಯಾರ್ಕ್‌ಶೈರ್‌ ರಿಪ್ಪರ್​ ಎಂದು ಕರೆಯಲ್ಪಡುವ ಸರಣಿ ಕೊಲೆಗಾರ ಪೀಟರ್ ಸುಕ್ಲಿಫ್ಫೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಬ್ರಿಟನ್​ ಜೈಲಾಧಿಕಾರಿ ತಿಳಿಸಿದ್ದಾರೆ.

74 ವರ್ಷದ ಸುಕ್ಲಿಫ್ಫೆ ಕೋವಿಡ್​-19 ಸೋಂಕು ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಆರೋಗ್ಯ ಸಂಬಂಧಿತ ರೋಗದಿಂದ ಬಳಲುತ್ತಿದ್ದು, ಶುಕ್ರವಾರ ಮೃತಪಟ್ಟಿದ್ದಾರೆ. ಆತನ ಸಾವಿಗೆ ನಿಖರ ಕಾರಣದ ಬಗ್ಗೆ ಜೈಲ್​ ಪರಿಷತ್ತು ತನಿಖೆ ಮಾಡಲಿದೆ. ಮೇಲ್ನೋಟಕ್ಕೆ ಸೋಂಕಿನಿಂದ ಮೃತಪಟ್ಟಿದ್ದು ತಿಳಿದು ಬರುತ್ತಿದೆ.

1975 ಮತ್ತು 1980ರ ನಡುವೆ ಉತ್ತರ ಇಂಗ್ಲೆಂಡ್‌ನಲ್ಲಿ 13 ಮಹಿಳೆಯರನ್ನು ಕೊಲೆ ಮಾಡಿದ ಆರೋಪದಲ್ಲಿ ಸುಕ್ಲಿಫ್ಫೆ, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ.

ಸುಕ್ಲಿಫ್ಫೆ 1981ರಲ್ಲಿ ಶಿಕ್ಷೆಗೊಳಗಾದರು. ಜೈಲಿನಲ್ಲಿ ಸಮಯ ಪೂರೈಸುವಷ್ಟು ಸ್ಥಿರವಾಗಿದ್ದಾನೆ ಎಂಬುದು ಖಚಿತವಾದ ನಂತರ, 2016ರಲ್ಲಿ ಫ್ರಾಂಕ್‌ಲ್ಯಾಂಡ್ ಜೈಲಿಗೆ ವರ್ಗಾಯಿಸುವ ಮೊದಲು ಬರ್ಕ್‌ಷೈರ್‌ನ ಬ್ರಾಡ್‌ಮೂರ್ ಆಸ್ಪತ್ರೆಯಲ್ಲಿ ಕೆಲ ಸಮಯ ಕಳೆದರು.

ಎಚ್‌ಎಂಪಿ ಫ್ರಾಂಕ್‌ಲ್ಯಾಂಡ್ ಖೈದಿ ಪೀಟರ್ ಕೂನನ್ (ಮೂಲ ಹೆಸರು ಸುಕ್ಲಿಫ್ಫೆ) ನವೆಂಬರ್ 13ರಂದು ಆಸ್ಪತ್ರೆಯಲ್ಲಿ ನಿಧನರಾದರು. ಕಾರಾಗೃಹ ಮತ್ತು ಪರೀಕ್ಷೆಯ ಒಂಬುಡ್ಸ್​ಮನ್ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.