ETV Bharat / international

ಕಾಶ್ಮೀರ ಸಮಸ್ಯೆ ಶಾಂತಿಯುತವಾಗಿಯೇ ಬಗೆಹರಿಸಿಕೊಳ್ಳಬೇಕು.. ಕೀರ್ ಸ್ಟಾರ್ಮರ್

ಭಾರತದಲ್ಲಿನ ಯಾವುದೇ ಸಾಂವಿಧಾನಿಕ ಸಮಸ್ಯೆಗಳು ಭಾರತೀಯ ಸಂಸತ್ತಿನ ವಿಷಯವಾಗಿದೆ ಮತ್ತು ಕಾಶ್ಮೀರದ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲು ನವದೆಹಲಿ ಮತ್ತು ಇಸ್ಲಾಮಾಬಾದ್‌ಗೆ ಇದು ದ್ವಿಪಕ್ಷೀಯ ವಿಷಯವಾಗಿದೆ ಎಂದು ಸ್ಟಾರ್ಮರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

author img

By

Published : May 1, 2020, 3:27 PM IST

new Labour chief
ಕೀರ್ ಸ್ಟಾರ್ಮರ್

ಲಂಡನ್​​(ಇಂಗ್ಲೆಂಡ್​) : ಭಾರತ ಮತ್ತು ಪಾಕಿಸ್ತಾನ ನಡುವಿನ ಕಾಶ್ಮೀರ ವಿವಾದ ಒಂದು ದ್ವಿಪಕ್ಷೀಯ ಸಮಸ್ಯೆಯಾಗಿ ಪರಿಣಮಿಸಿದೆ. ಇದನ್ನು ಶಾಂತಿಯುತವಾಗಿಯೇ ಬಗೆಹರಿಸಿಕೊಳ್ಳಬೇಕಿದೆ ಎಂದು ಇಂಗ್ಲೆಂಡಿನ ಲೇಬರ್​ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ಇಂದು ಹೇಳಿದ್ದಾರೆ.

ಸ್ಟಾರ್ಮರ್ ನಾಯಕತ್ವದಲ್ಲಿ ಭಾರತೀಯ ವಲಸೆಗಾರರನ್ನು ತಲುಪುವ ಮತ್ತು ಪಕ್ಷವನ್ನು ನಿಗ್ರಹಿಸುವ ಪ್ರತಿಕೂಲ ನಿಲುವಿನಿಂದ ದೂರವಿರಿಸುವ ಪ್ರಯತ್ನದಲ್ಲಿ ಸ್ಟಾರ್ಮರ್ ಲಂಡನ್‌ನಲ್ಲಿ ನಡೆದ ಲೇಬರ್ ಫ್ರೆಂಡ್ಸ್ ಆಫ್ ಇಂಡಿಯಾ (ಎಲ್‌ಎಫ್‌ಐಎನ್) ಸಭೆಯ ತನ್ನ ಮೊದಲ ಸಂವಾದದ ಸಂದರ್ಭದಲ್ಲಿ ಭಾರತದೊಂದಿಗೆ ಬಲವಾದ ವ್ಯವಹಾರ ಸಂಪರ್ಕವನ್ನು ಬೆಳೆಸುವ ಪ್ರತಿಜ್ಞೆ ಮಾಡಲಾಗಿತ್ತು ಎಂದು ಇದೇ ವೇಳೆ ಹೇಳಿದರು.

ಭಾರತ ಪಾಕಿಸ್ತಾನದ ಸಮಸ್ಯೆಗೆ ಸಂಬಂಧಿಸಿದಂತೆ ಬ್ರಿಟನ್​​ ಸಮುದಾಯಗಳಲ್ಲಿ ವಿಭಜನೆ ಮಾಡಬಾರದು ಎಂದ ಸ್ಟಾರ್ಮರ್, ಉಪಖಂಡದ ಸಮಸ್ಯೆಗಳನ್ನು ಇಲ್ಲಿನ ಸಮುದಾಯಗಳ ವಿಭಜನೆಗೆ ನಾವು ಅನುಮತಿಸಬಾರದು. ಭಾರತದಲ್ಲಿನ ಯಾವುದೇ ಸಾಂವಿಧಾನಿಕ ಸಮಸ್ಯೆಗಳು ಭಾರತೀಯ ಸಂಸತ್ತಿನ ವಿಷಯವಾಗಿದೆ ಮತ್ತು ಕಾಶ್ಮೀರದ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲು ನವದೆಹಲಿ ಮತ್ತು ಇಸ್ಲಾಮಾಬಾದ್‌ಗೆ ಇದು ದ್ವಿಪಕ್ಷೀಯ ವಿಷಯವಾಗಿದೆ ಎಂದು ಸ್ಟಾರ್ಮರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನನ್ನ ನಾಯಕತ್ವದಲ್ಲಿ ಕಾರ್ಮಿಕ ಸರ್ಕಾರವು, ಭಾರತ ದೇಶದೊಂದಿಗೆ ಇನ್ನಷ್ಟು ಬಲವಾದ ವ್ಯವಹಾರ ಸಂಪರ್ಕಗಳನ್ನು ನಿರ್ಮಿಸಲು ಮತ್ತು ಹವಾಮಾನ ವಿಪರೀತದಂತಹ ವಿಷಯಗಳ ಬಗ್ಗೆ ಜಾಗತಿಕ ವೇದಿಕೆಯಲ್ಲಿ ಚರ್ಚೆ ನಡೆಸಿ ಸಹಕರಿಸಲು ನಿರ್ಧರಿಸುತ್ತದೆ ಎಂದು ಇದೇ ವೇಳೆ ಸ್ಟಾರ್ಮರ್​​ ಹೇಳಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್​​ನಲ್ಲಿ ನಡೆದ ಪಕ್ಷದ ವಾರ್ಷಿಕ ಸಮ್ಮೇಳನದಲ್ಲಿ ಕಾಶ್ಮೀರದಲ್ಲಿನ ಅಂತಾರಾಷ್ಟ್ರೀಯ ಹಸ್ತಕ್ಷೇಪವನ್ನು ಪಡೆಯುವ ಉದ್ದೇಶದಿಂದ ಅಂಗೀಕರಿಸಲ್ಪಟ್ಟ ನಿರ್ಣಯವು ಅತ್ಯಂತ ಪ್ರಕಾಶಮಾನವಾಗಿತ್ತು. ಈ ನಿರ್ಣಯವು ಡಿಸೆಂಬರ್ 2019ರ ಚುನಾವಣೆಯಲ್ಲಿ 1.5 ಮಿಲಿಯನ್ ವಲಸಿಗರ ಮತಗಳ ಮೇಲೆ ವ್ಯಾಪಕವಾಗಿ ಪ್ರಭಾವ ಬೀರಿದೆ ಎಂದು ಕಂಡು ಬಂದಿತ್ತು. ಇದು ಲೇಬರ್ ಪಕ್ಷದ ಭೀಕರ ಸೋಲಿಗೆ ಕಾರಣವಾಯಿತು.

ಭಾರತೀಯ ಮೂಲದ ಬ್ರಿಟನ್ನರು ಯುಕೆ ಮತ್ತು ಲೇಬರ್ ಪಾರ್ಟಿಗೆ ಹೆಚ್ಚಿನ ಒತ್ತು ನೀಡುತ್ತಾರೆ. ಭಾರತೀಯ ಮೂಲದ ಬ್ರಿಟನ್​ ಸಮುದಾಯದ ವಿಶ್ವಾಸವನ್ನು ಪುನಃ ನಿರ್ಮಿಸಲು ಲೇಬರ್ ಫ್ರೆಂಡ್ಸ್ ಆಫ್ ಪಕ್ಷ ಇಂಡಿಯಾದೊಂದಿಗೆ ನಿಕಟವಾಗಿ ಕೆಲಸ ಮಾಡಲು ಬದ್ಧವಾಗಿರುತ್ತದೆ. ವೆಸ್ಟ್ಮಿನಿಸ್ಟರ್ ಮತ್ತು ಸ್ಥಳೀಯ ಸರ್ಕಾರಿ ಮಟ್ಟದಲ್ಲಿನ ಚುನಾಯಿತ ಹುದ್ದೆಗಳಿಗೆ ಹೆಚ್ಚಿನ ಬ್ರಿಟಿಷ್ ಭಾರತೀಯರನ್ನು ಪ್ರೋತ್ಸಾಹಿಸುವುದಾಗಿ ಸ್ಟಾರ್ಮರ್ ಇದೇ ವೇಳೆ ಆಶ್ವಾಸನೆ ನೀಡಿದ್ದಾರೆ.

ಲೇಬರ್ ಪಾರ್ಟಿ ಮತ್ತು ಭಾರತದ ಜನರ ನಡುವೆ ಹೊಸ ಸಂವಾದವನ್ನು ಸೃಸ್ಠಿಸಲು ಯುಕೆಯಲ್ಲಿನ ಭಾರತೀಯ ಹೈಕಮಿಷನರ್ ರುಚಿ ಘಾನಾಸ್ಯಂ ಅವರೊಂದಿಗೆ ಮುಂದಿನ ದಿನಗಳಲ್ಲಿ ಚರ್ಚೆ ನಡೆಸುವ ಯೋಜನೆಯನ್ನು ಸ್ಟಾರ್ಮರ್​​ ಹೊಂದಿದ್ದಾರೆ.

ಲೇಬರ್ ಪಾರ್ಟಿ ಮತ್ತು ಭಾರತೀಯ ಸಮುದಾಯದ ನಡುವೆ ಬಲವಾದ ಸಂಪರ್ಕವನ್ನು ಪುನಃ ನಿರ್ಮಿಸುವ ಸ್ಟಾರ್ಮರ್​ ಬದ್ಧತೆಯನ್ನು ನಾನು ನಿಜವಾಗಿಯೂ ಸ್ವಾಗತಿಸುತ್ತೇನೆ ಎಂದು ಎಲ್‌ಎಫ್‌ಐಎನ್ ಉಪಾಧ್ಯಕ್ಷ ಮತ್ತು ಲಂಡನ್‌ನ ಉಪ ಮೇಯರ್ ರಾಜೇಶ್ ಅಗ್ರವಾಲ್ ಹೇಳಿದ್ದಾರೆ.

ಇದೊಂದು ಉತ್ತಮ ಆರಂಭ ಮತ್ತು ಕೀರ್ ಒಂದೆರಡು ವಾರಗಳ ಅಲ್ಪಾವಧಿಯಲ್ಲಿಯೇ ಸಾಕಷ್ಟು ಸಾಧನೆ ಮಾಡಿದ್ದಾರೆ. ಲೇಬರ್ ಫ್ರೆಂಡ್ಸ್ ಆಫ್ ಇಂಡಿಯಾ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲಿದೆ. ಯುಕೆ-ಇಂಡಿಯಾ ಸಂಬಂಧಗಳನ್ನು ಉತ್ತೇಜಿಸುವುದರ ಜೊತೆಗೆ ಈ ಸಮುದಾಯದಿಂದ ಸ್ಟಾರ್ಮರ್​​ ನಾಯಕತ್ವಕ್ಕೆ ಯಾವುದೇ ಸಮಸ್ಯೆಗಳು ಆಗದಂತೆ ನೋಡಿಕೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.