ಕೀವ್(ಉಕ್ರೇನ್): ಉಕ್ರೇನ್ ಮೇಲೆ ದಂಡೆತ್ತಿ ಹೋಗಿರುವ ರಷ್ಯಾ ಸೇನೆ ಬಹುತೇಕ ಎಲ್ಲ ನಗರಗಳ ಮೇಲೆ ದಾಳಿ ನಡೆಸುತ್ತಿದ್ದು, ಪ್ರಮುಖ ಕಟ್ಟಡಗಳನ್ನು ಧ್ವಂಸಗೊಳಿಸಿದೆ. ಇದರ ಮಧ್ಯೆ ರಷ್ಯಾದ ನೂರಾರು ಯುದ್ಧ ಟ್ಯಾಂಕರ್ಗಳನ್ನು ಉಕ್ರೇನ್ ನಾಗರಿಕರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಉಕ್ರೇನಿಯನ್ ವ್ಯಕ್ತಿಯೋರ್ವ ರಷ್ಯಾ ಯುದ್ಧ ಟ್ಯಾಂಕ್ ವಶಕ್ಕೆ ಪಡೆದುಕೊಂಡು, ಅದರ ಮೇಲೆ ನಿಂತು ತನ್ನ ದೇಶದ ಧ್ವಜ ಹಾರಿಸಿದ್ದಾನೆ. ಈ ವೇಳೆ ಅಲ್ಲಿ ನೆರೆದಿದ್ದ ಜನರು ಹರ್ಷೋದ್ಗಾರ ವ್ಯಕ್ತಪಡಿಸಿದ್ದಾರೆ.
-
A Ukrainian climbed onto a Russian tank and hoisted the Ukrainian flag.#UkraineRussianWar #Ukraine #UkraineUnderAttack #UcraniaRussia #RussianUkrainianWar pic.twitter.com/BFrQKZvLlE
— David Muñoz López 🇪🇦🇪🇺🇺🇦 (@dmunlop) March 7, 2022 " class="align-text-top noRightClick twitterSection" data="
">A Ukrainian climbed onto a Russian tank and hoisted the Ukrainian flag.#UkraineRussianWar #Ukraine #UkraineUnderAttack #UcraniaRussia #RussianUkrainianWar pic.twitter.com/BFrQKZvLlE
— David Muñoz López 🇪🇦🇪🇺🇺🇦 (@dmunlop) March 7, 2022A Ukrainian climbed onto a Russian tank and hoisted the Ukrainian flag.#UkraineRussianWar #Ukraine #UkraineUnderAttack #UcraniaRussia #RussianUkrainianWar pic.twitter.com/BFrQKZvLlE
— David Muñoz López 🇪🇦🇪🇺🇺🇦 (@dmunlop) March 7, 2022
ಇದನ್ನೂ ಓದಿ: ₹50 ಸಾವಿರಕ್ಕಿಂತ ಕಡಿಮೆ ಇರುವ ರೈತರ ಸಾಲ ಮನ್ನಾ: ಕೆಸಿಆರ್ ಸರ್ಕಾರದ ಘೋಷಣೆ
ಫೆಬ್ರವರಿ 24ರಿಂದ ರಷ್ಯಾ-ಉಕ್ರೇನ್ ಮಧ್ಯೆ ಯುದ್ಧ ಆರಂಭಗೊಂಡಿದ್ದು, ಶಸ್ತ್ರಸಜ್ಜಿತ ರಷ್ಯಾ ಮಿಲಿಟರಿ ಪಡೆ ಉಕ್ರೇನ್ ಮೇಲೆ ದಾಳಿ ನಡೆಸುತ್ತಿದೆ. ಪ್ರಮುಖವಾಗಿ ಕೀವ್, ಖಾರ್ಕಿವ್, ಸುಮಿ ಮತ್ತು ಮರಿಯುಪೋಲ್ ಮೇಲೆ ದಾಳಿ ನಡೆಯುತ್ತಿದೆ.