ಕೀವ್: ರಷ್ಯಾಗೆ ನ್ಯಾಟೋ ಹೆದರಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಆರೋಪಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು 2022ರ ಫೆಬ್ರವರಿ 24 ರಿಂದ ಪುಟಿನ್ ಸೇನೆ ತನ್ನ ದೇಶದ ಮೇಲೆ ಆಕ್ರಮಣವನ್ನು ಮುಂದುವರೆಸಿದೆ. ಆದರೆ, ಇದು ಕಡಿಮೆಯಾಗುವ ಲಕ್ಷಣಗಳೇ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.
ನ್ಯಾಟೋಗೆ ನಮ್ಮನ್ನು ಸೇರಿಸಿಕೊಳ್ಳುತ್ತೀರಾ ಇಲ್ವಾ ಎಂದು ಈಗಲೇ ಹೇಳಬೇಕು. ಅಥವಾ ಅವರು ರಷ್ಯಾಗೆ ಭಯಪಟ್ಟು ನಮ್ಮನ್ನು ನ್ಯಾಟೋದೊಂದಿಗೆ ಸೇರ್ಪಡೆಗೆ ಹಿಂದೇಟು ಹಾಕುತ್ತಿದ್ದಾರೆ ಎಂಬುದರ ಬಗ್ಗೆ ಬಹಿರಂಗವಾಗಿ ಹೇಳಬೇಕು ಎಂದು ಒತ್ತಾಯಿಸಿದ್ದಾರೆ.
ನಾವು ಶಾಂತವಾಗಿರಬೇಕಾದ ಅವಶ್ಯಕತೆ ಇದೆ. ನ್ಯಾಟೋಗೆ ನಮ್ಮನ್ನು ಸೇರ್ಪಡೆ ಮಾಡಿಕೊಳ್ಳದಿದ್ದರೆ ಕನಿಷ್ಠ ಪಕ್ಷ ಭದ್ರತೆಯ ಖಾತರಿಯನ್ನಾದರೂ ನೀಡಬಹುದು. ಹೀಗಾದರೆ ರಾಜಿಯಾಗುತ್ತದೆ, ಯುದ್ಧವೂ ಅಂತ್ಯವಾಗಲಿದೆ ಎಂದು ಝೆಲೆನ್‌ಸ್ಕಿ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಮೇಲೆ ಯುದ್ಧ ಮಾಡ್ತಿರೋ ರಷ್ಯಾ ಸೇನೆಗೆ ಇನ್ನೂ ಸಿಕ್ಕಿಲ್ಲ 'ಏರ್ ಸುಪೀರಿಯಾರಿಟಿ': ಅಮೆರಿಕ