ಕೈವ್(ಉಕ್ರೇನ್): ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು "ಯುದ್ಧದ ಅನುಭವ" ಹೊಂದಿರುವ ಯುರೋಪಿಯನ್ನರಿಗೆ ಶಸ್ತ್ರಾಸ್ತ್ರಗಳನ್ನು ಹಿಡಿಯಲು ಮನವಿ ಮಾಡಿರುವ ಅವರು, ರಷ್ಯಾದ ಪಡೆಗಳ ಆಕ್ರಮಣದ ವಿರುದ್ಧ ಉಕ್ರೇನ್ ಅನ್ನು ರಕ್ಷಿಸಲು ಕರೆ ನೀಡಿದ್ದಾರೆ.
ನೀವು ಯುರೋಪಿನಲ್ಲಿ ಯುದ್ಧದ ಅನುಭವವನ್ನು ಹೊಂದಿದ್ದರೆ ಮತ್ತು ರಾಜಕಾರಣಿಗಳ ನಿರ್ಣಯವನ್ನು ನೋಡಲು ಬಯಸದಿದ್ದರೆ, ನೀವು ನಮ್ಮ ದೇಶಕ್ಕೆ ಬಂದು ಯುರೋಪ್ ಅನ್ನು ರಕ್ಷಿಸಿ. ನೀವು ನಮ್ಮೊಂದಿಗೆ ಸೇರಿಕೊಳ್ಳಬಹುದು, ಇದು ಈಗ ಬಹಳ ಅವಶ್ಯಕವಾಗಿದೆ ಎಂದು ದಣಿದಂತೆ ಕಂಡ ಝೆಲೆನ್ಸ್ಕಿ ಹೇಳಿದ್ದಾರೆ.
ಉಕ್ರೇನ್ಗೆ ಹೆಚ್ಚು ಆರ್ಥಿಕ, ಮಿಲಿಟರಿ ನೆರವು ನೀಡುವಂತೆ ಝೆಲೆನ್ಸ್ಕಿ ಯುರೋಪಿಯನ್ನರನ್ನು ಕೇಳಿಕೊಂಡಿದ್ದಾರೆ. ನಿಮ್ಮ ಸಹಕಾರ ನಿಧಾನವಾಗುತ್ತಿದ್ದು, ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳುತ್ತೀರಿ?" ಎಂದು ಇನ್ನೂ ಯಾವ ರಾಷ್ಟ್ರವೂ ಉಕ್ರೇನ್ಗೆ ಸಹಾಯ ಮಾಡಲು ಮುಂದೆ ಬಾರದೇ ಇದ್ದ ಬೇಸರವನ್ನು ಹೊರಹಾಕಿದ್ದಾರೆ.
ಇದನ್ನೂ ಓದಿ: ರಷ್ಯಾ ದಾಳಿ ವಿರೋಧಿಸಿದ ಯುರೋಪಿಯನ್ ಒಕ್ಕೂಟ
ರಷ್ಯಾದ ಪಡೆಗಳು ಶುಕ್ರವಾರ ಉತ್ತರದಿಂದ ಮತ್ತು ಪೂರ್ವದಿಂದ ಕೈವ್ ಅನ್ನು ಸಮೀಪಿಸುತ್ತಿವೆ ಎಂದು ಉಕ್ರೇನ್ ಹೇಳಿದೆ.