ETV Bharat / international

ಉಕ್ರೇನ್​ ರಾಜಧಾನಿ ಕೀವ್ ಮೇಲೆ ರಷ್ಯಾ ಪಡೆಗಳಿಂದ ಬಾಂಬ್ ದಾಳಿ

ಉಕ್ರೇನ್​ ರಾಜಧಾನಿ ಕೀವ್ ಮೇಲೆ ರಷ್ಯಾ ಪಡೆಗಳು ದಾಳಿ ನಡೆಸಿವೆ. ರಾಜಧಾನಿಯ ಮಧ್ಯಭಾಗದ ಹಲವು ಪ್ರದೇಶಗಳ ಮೇಲೆ ಆಕ್ರಮಣ ನಡೆಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Ukraine: Explosions heard in central Kiev
ಉಕ್ರೇನ್​ ರಾಜಧಾನಿ ಕೀವ್ ಮೇಲೆ ಬಾಂಬ್ ದಾಳಿ ಮಾಡಿದ ರಷ್ಯಾ ಪಡೆಗಳು
author img

By

Published : Feb 25, 2022, 10:58 AM IST

Updated : Feb 25, 2022, 11:26 AM IST

ಕೀವ್(ಉಕ್ರೇನ್): ಉಕ್ರೇನ್​ನಲ್ಲಿ ರಷ್ಯಾ ಎರಡನೇ ದಿನದ ಮಿಲಿಟರಿ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಉಕ್ರೇನ್​ ನಗರದ ಕೀವ್ ಮೇಲೆ ದಾಳಿ ಆರಂಭಿಸಿದೆ. ಕೀವ್ ನಗರದ ಮಧ್ಯಭಾಗದಿಂದಲೇ ಹಲವಾರು ಬಾಂಬ್​ಗಳನ್ನು ಎಸೆಯಲಾಗಿದ್ದು, ಅವುಗಳ ಸ್ಫೋಟದ ಸದ್ದು ಕೇಳಿಬಂದಿದೆ ಎಂದು ಸ್ಥಳೀಯ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.

ಉಕ್ರೇನ್‌ನ ಸಚಿವ ಯೆವ್ಹೆನ್ ಯೆನಿನ್ ಈ ಕುರಿತು ಪ್ರತಿಕ್ರಿಯಿಸಿದ್ದು, ಆ್ಯಂಟಿ- ಮಿಸೈಲ್ ಸಿಸ್ಟಮ್​ನಿಂದಾಗಿ ಈ ಸ್ಫೋಟಗಳು ಉಂಟಾಗಿವೆ. ಈ ವಿಚಾರದಲ್ಲಿ ಸ್ವತಂತ್ರವಾಗಿ ಪರಿಶೀಲನೆ ಮಾಡಿಲ್ಲ ಎಂದು ತಿಳಿಸಿದ್ದಾರೆ.

ರಷ್ಯಾ ಪಡೆಗಳಿಂದ ಬಾಂಬ್ ದಾಳಿ

ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಪ್ರತಿಕ್ರಿಯಿಸಿ, ರಷ್ಯಾದ ಭಯಾನಕ ರಾಕೆಟ್​ಗಳಿಂದ ಕೀವ್ ನಗರ ದಾಳಿಗೊಳಗಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಭೀಕರ ಘರ್ಷಣೆಯ ನಂತರ ಚೆರ್ನೋಬಿಲ್ ವಶಕ್ಕೆ ಪಡೆದ ರಷ್ಯಾ ಪಡೆಗಳು

ಈ ಕುರಿತು ಟ್ವೀಟ್ ಮಾಡಿರುವ ಡಿಮಿಟ್ರೋ ಕುಲೆಬಾ, '1941ರಲ್ಲಿ ನಾಜಿಗಳಿದ್ದ ಜರ್ಮನಿ ದಾಳಿ ಮಾಡಿದಾಗ, ಉಕ್ರೇನ್​ ಅವರನ್ನು ಸೋಲಿಸಿತ್ತು. ಈಗ ರಷ್ಯಾವನ್ನೂ ಕೂಡಾ ಸೋಲಿಸುತ್ತದೆ. ಪುಟಿನ್ ಅವರನ್ನು ತಡೆಯಿರಿ, ರಷ್ಯಾವನ್ನು ನಿರ್ಬಂಧಿಸಿ, ರಷ್ಯಾವನ್ನು ಎಲ್ಲೆಡೆಯಿಂದ ಹೊರಹಾಕಿ' ಎಂದ ಮನವಿ ಮಾಡಿದ್ದಾರೆ.

  • Horrific Russian rocket strikes on Kyiv. Last time our capital experienced anything like this was in 1941 when it was attacked by Nazi Germany. Ukraine defeated that evil and will defeat this one. Stop Putin. Isolate Russia. Severe all ties. Kick Russia out of everywhete.

    — Dmytro Kuleba (@DmytroKuleba) February 25, 2022 " class="align-text-top noRightClick twitterSection" data=" ">

ಅಮೆರಿಕದ ಮಾಧ್ಯಮ ವರದಿಗಳ ಪ್ರಕಾರ, ಬೆಲಾರಸ್ ಮೂಲಕ ಉಕ್ರೇನ್ ಪ್ರವೇಶಿಸಿದ ರಷ್ಯಾದ ಪಡೆಗಳು ಕೀವ್‌ನಿಂದ ಸುಮಾರು 32 ಕಿಲೋಮೀಟರ್ ದೂರದಲ್ಲಿವೆ.

Last Updated : Feb 25, 2022, 11:26 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.