ETV Bharat / international

ಆಪರೇಷನ್ ಗಂಗಾ: 31 ವಿಮಾನಗಳಲ್ಲಿ ಭಾರತದ 6,300 ಪ್ರಜೆಗಳ ಏರ್‌ಲಿಫ್ಟ್‌ - ukraine crisis 31 evacuation flights to bring back over 6300 indians in coming days

ಮುಂದಿನ ದಿನಗಳಲ್ಲಿ ಒಟ್ಟು 31 ವಿಮಾನಗಳ ಮೂಲಕ 6,300ಕ್ಕೂ ಹೆಚ್ಚು ಭಾರತೀಯರನ್ನು ತಾಯ್ನಾಡಿಗೆ ಕರೆ ತರಲಾಗುತ್ತದೆ ಎಂದು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಾಯುಸೇನೆಯ ವಿಮಾನಗಳು 'ಅಪರೇಷನ್‌ ಗಂಗಾ' ಮಿಷನ್‌ನಡಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿವೆ.

ukraine crisis 31 evacuation flights to bring back over 6300 indians in coming days
ಉಕ್ರೇನ್‌ ಬಿಕ್ಕಟ್ಟು: ಮುಂದಿನ ದಿನಗಳಲ್ಲಿ 31 ವಿಮಾನಗಳಿಂದ 6,300 ಮಂದಿ ಭಾರತಕ್ಕೆ ಏರ್‌ಲಿಫ್ಟ್‌
author img

By

Published : Mar 2, 2022, 5:38 PM IST

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಏರ್‌ಲಿಫ್ಟ್‌ ಮಾಡುವ 'ಆಪರೇಷನ್ ಗಂಗಾ' ಯೋಜನೆಯನ್ನು ಕೇಂದ್ರ ಸರ್ಕಾರ ಚುರುಕುಗೊಳಿಸಿದೆ. ಈಗಾಗಲೇ ಹಲವು ವಿಮಾನಗಳ ಮೂಲಕ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ವಾಪಸ್ ಕರೆ ತರಲಾಗಿದೆ.

ಇದೀಗ ವಾಯುಸೇನೆಯೂ ಅಖಾಡಕ್ಕೆ ಇಳಿದಿದೆ. ಮುಂದಿನ ದಿನಗಳಲ್ಲಿ ಒಟ್ಟು 31 ವಿಮಾನಗಳ ಮೂಲಕ 6,300ಕ್ಕೂ ಹೆಚ್ಚು ಭಾರತೀಯರನ್ನು ತಾಯ್ನಾಡಿಗೆ ಕಳುಹಿಸಲಾಗುತ್ತದೆ ಎಂದು ಉಕ್ರೇನ್‌ನಲ್ಲಿರುವ ರಾಯಭಾರಿ ಅಧಿಕಾರಿಗಳು ತಿಳಿಸಿದ್ದಾರೆ.

ukraine crisis 31 evacuation flights to bring back over 6300 indians in coming days

ಬುಕಾರೆಸ್ಟ್‌ನಲ್ಲಿ ಭಾರತಕ್ಕೆ ವಾಪಸ್‌ ಬರಲು ವಿದ್ಯಾರ್ಥಿಗಳು ಸಿದ್ಧರಾಗಿದ್ದಾರೆ. ಆಪರೇಷನ್ ಗಂಗಾ ಯೋಜನೆಯಲ್ಲಿ ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಇಂಡಿಗೋ, ಸ್ಪೈಸ್‌ಜೆಟ್ ಹಾಗೂ ಭಾರತೀಯ ವಾಯುಪಡೆಯ ವಿಮಾನಗಳು ಸೇರಿವೆ. ಇಂದಿನಿಂದ ರೊಮೇನಿಯಾದ ಬುಕಾರೆಸ್ಟ್‌ನಿಂದ 21, ಹಂಗೇರಿಯಾದ ಬುಡಾಪೆಸ್ಟ್‌, ಪೋಲೆಂಡ್‌ನಿಂದ ತಲಾ 4 ಹಾಗೂ ಸ್ಲೋವಾಕಿಯಾದ ಕೊಸಿಸ್‌ನಿಂದ 1 ವಿಮಾನದ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯರನ್ನು ಏರ್‌ಲಿಫ್ಟ್‌ ಮಾಡಲು ನಿರ್ಧರಿಸಲಾಗಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಸ್ಪೈಸ್ ಜೆಟ್ ಸುಮಾರು 180 ಜನರ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿದ್ದು, ಏರ್ ಇಂಡಿಯಾ ಮತ್ತು ಇಂಡಿಗೋ ಕ್ರಮವಾಗಿ 250 ಮತ್ತು 216 ಪ್ರಯಾಣಿಕರ ಸಾಮರ್ಥ್ಯದೊಂದಿಗೆ ಏರ್‌ಲಿಫ್ಟ್‌ ಕಾರ್ಯ ನಿರ್ವಹಿಸಲಿವೆ.

ಫೆಬ್ರವರಿ 26 ರಿಂದ ಈವರೆಗೆ 9 ವಿಮಾನಗಳಲ್ಲಿ ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ. ದೇಶಕ್ಕೆ ಬರಲು ಇನ್ನೂ 5-6 ವಿಮಾನಗಳು ಸಿದ್ಧವಾಗಿವೆ ಎಂದು ಹೇಳಲಾಗಿದೆ. ಈ ವಿಶೇಷ ಕಾರ್ಯಾಚರಣೆಯ ಭಾಗವಾಗಿ ಒಂದೇ ದಿನದಲ್ಲಿ ಆರು ವಿಮಾನಗಳ ಮೂಲಕ ಒಟ್ಟು 1,377 ಭಾರತೀಯರನ್ನು ಸ್ವದೇಶಕ್ಕೆ ಕರೆ ತರಲಾಗಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಭಾರತೀಯ ಧ್ವಜ ಹಿಡಿದು ಉಕ್ರೇನ್​ನಿಂದ ಸುರಕ್ಷಿತವಾಗಿ ಹೊರಬಂದ ಪಾಕ್‌, ಟರ್ಕಿ ವಿದ್ಯಾರ್ಥಿಗಳು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.