ETV Bharat / international

ರಷ್ಯಾ-ಉಕ್ರೇನ್​ ಯುದ್ಧ: ಮಡಿದ, ಸೆರೆಯಾದವರ ಮಾಹಿತಿಗಾಗಿ ವೆಬ್​ಸೈಟ್​ ಆರಂಭಿಸಿದೆ ಉಕ್ರೇನ್!​ - ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ಗೆ ರಷ್ಯಾ ಪಡೆ ದಾಳಿ

200rf.com ವೆಬ್‌ಸೈಟ್ ಅನ್ನು ಉಕ್ರೇನ್‌ನ ಆಂತರಿಕ ವ್ಯವಹಾರಗಳ ಸಚಿವಾಲಯವು ಉಕ್ರೇನ್‌ನ ಮೇಲೆ ನಡೆಯುತ್ತಿರುವ ದಾಳಿಯಲ್ಲಿ ಮಡಿದವರ ಮಾಹಿತಿ ನೀಡಲು ಆರಂಭಿಸಿದೆ..

ರಷ್ಯಾ-ಉಕ್ರೇನ್​ ಯುದ್ಧ: ಮಡಿದ, ಸೆರೆಯಾದರ ಮಾಹಿತಿಗಾಗಿ ವೆಬ್​ಸೈಟ್​ ಆರಂಭಿಸಿದೆ ಉಕ್ರೇನ್​

author img

By

Published : Feb 27, 2022, 7:33 PM IST

ಕೈವ್ (ಉಕ್ರೇನ್): ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ಗೆ ರಷ್ಯಾ ಪಡೆ ದಾಳಿ ಇಡುತ್ತಿದೆ. ಇದರ ಬೆನ್ನಲ್ಲೇ ಉಕ್ರೇನ್ ಅಧಿಕಾರಿಗಳು ಶತ್ರುಗಳಿಗೆ ಯುದ್ಧದಲ್ಲಿ ಆಗುತ್ತಿರುವ ನಷ್ಟಗಳ ಬಗ್ಗೆ ತಿಳಿಸುವ ವಿಶಿಷ್ಟ ಮಾರ್ಗವನ್ನು ಕಂಡುಕೊಂಡಿದ್ದಾರೆ.

ಈವರೆಗೆ 4,300 ರಷ್ಯಾದ ಸೈನಿಕರನ್ನು ಕೊಂದಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ. ಉಕ್ರೇನಿಯನ್ ಉಪ ರಕ್ಷಣಾ ಸಚಿವ ಹನ್ನಾ ಮಲ್ಯಾರ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಫೆಬ್ರವರಿ 24-26ರ ನಡುವೆ ರಷ್ಯಾದ 706 ಎಪಿಸಿಗಳು, 146 ಟ್ಯಾಂಕ್‌ಗಳು, 27 ವಿಮಾನಗಳು ಮತ್ತು 26 ಹೆಲಿಕಾಪ್ಟರ್‌ಗಳನ್ನು ನಾಶಪಡಿಸಲಾಗಿದೆ ಉಕ್ರೇನ್​ ಸಚಿವಾಲಯ ತಿಳಿಸಿದೆ.

ವರದಿಗಳ ಪ್ರಕಾರ, ಉಕ್ರೇನ್ ಒಂದು ವೆಬ್‌ಸೈಟ್‌ನ ಆರಂಭಿಸಿದೆ. ಅದರಲ್ಲಿ ಯುದ್ಧದಲ್ಲಿ ಮಡಿದ ಮತ್ತು ವಶಪಡಿಸಿಕೊಂಡ ರಷ್ಯಾದ ಸೈನಿಕರ ಚಿತ್ರಗಳು ಮತ್ತು ವಿಡಿಯೋಗಳನ್ನು ಅಪ್​ಲೋಡ್​ ಮಾಡಲಾಗಿದೆ.

200rf.com ಎಂಬ ಹೆಸರಿನ ವೆಬ್‌ಸೈಟ್ ಇದಾಗಿದೆ. ಉಕ್ರೇನ್‌ನ ಆಂತರಿಕ ವ್ಯವಹಾರಗಳ ಸಚಿವಾಲಯವು ಉಕ್ರೇನ್‌ನ ಮೇಲೆ ನಡೆಯುತ್ತಿರುವ ದಾಳಿಯಲ್ಲಿ ಮಡಿಯುತ್ತಿರುವ ಸೈನಿಕರನ್ನು ಕಂಡುಹಿಡಿಯಲು ಇದನ್ನು ಪ್ರಾರಂಭಿಸಿದೆ.

ಉಕ್ರೇನ್‌ನ ಆಂತರಿಕ ವ್ಯವಹಾರಗಳ ಸಚಿವರ ಸಲಹೆಗಾರ ಆಂಟನ್ ಹೆರಾಶ್ಚೆಂಕೊ ಇದರ ಬಗ್ಗೆ ತಿಳಿಸಿದ್ದಾರೆ. ಉಕ್ರೇನ್ ರಕ್ಷಣಾ ಸಚಿವಾಲಯವು ಇತ್ತೀಚೆಗೆ ಉಕ್ರೇನಿಯನ್ ಮಿಲಿಟರಿ ವಶಪಡಿಸಿಕೊಂಡಿರುವ ರಷ್ಯಾದ ಸೈನಿಕರ ಕುಟುಂಬಗಳು, ಸಂಬಂಧಿಕರು ಮತ್ತು ಸ್ನೇಹಿತರಿಗಾಗಿ ಹಾಟ್‌ಲೈನ್ ಅನ್ನು ಪ್ರಾರಂಭಿಸಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಭಾರತದಲ್ಲಿ ಹಿಜಾಬ್ ಧರಿಸುವುದಕ್ಕೆ ಯಾವುದೇ ನಿಷೇಧವಿಲ್ಲ : ಮುಖ್ತಾರ್ ಅಬ್ಬಾಸ್ ನಖ್ವಿ

ಫೆಬ್ರವರಿ 24 ರಂದು ಉಕ್ರೇನ್ ವಿರುದ್ಧ ರಷ್ಯಾದ ಪೂರ್ಣ ಪ್ರಮಾಣದ ಯುದ್ಧದ ಪ್ರಾರಂಭ ಮಾಡಿದೆ. 150,000 ರಷ್ಯಾದ ಸೈನಿಕರು ನಮ್ಮ ರಾಜ್ಯದ ಗಡಿಯನ್ನು ದಾಟಿದ್ದಾರೆ. ಅವರಲ್ಲಿ ಅನೇಕರು ಈಗ ಜೀವಂತವಾಗಿಲ್ಲ. ಹಲವಾರು ಸಾವಿರ ಸೈನಿಕರನ್ನು ಸೆರೆಹಿಡಿಯಲಾಗಿದೆ ಎಂದು ಹೆರಾಶ್ಚೆಂಕೊ ಹೇಳಿದರು.

ಯುದ್ಧವು ಈಗ ಖಾರ್ಕಿವ್‌ಗೆ ಪ್ರವೇಶಿಸಿರುವುದರಿಂದ ರಷ್ಯಾದ ಆಕ್ರಮಣಕಾರಿ ಪಡೆಗಳನ್ನು ಹೊಡೆಯಲು ಉಕ್ರೇನ್ ಟರ್ಕಿಯ ಡ್ರೋನ್‌ಗಳನ್ನು ಬಳಸುತ್ತಿದೆ. ಇನ್ನು ಉಕ್ರೇನ್‌ನೊಂದಿಗೆ ಮಾತುಕತೆಗಾಗಿ ರಷ್ಯಾ ಬೆಲಾರಸ್‌ಗೆ ನಿಯೋಗವನ್ನು ಕಳುಹಿಸಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಮಾತುಕತೆಗೆ ಸಿದ್ಧರಿದ್ದು, ಬೆಲಾರಸ್‌ ಬಿಟ್ಟು ಬೇರೆ ಸ್ಥಳದಲ್ಲಿ ಮಾತುಕತೆ ಆಡಲು ಬರುತ್ತೇವೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.