ETV Bharat / international

10 ದಿನಗಳ ಯುದ್ಧದಲ್ಲಿ ರಷ್ಯಾ ಪಡೆಗಳ 10 ಸಾವಿರ ಮಂದಿ ಸಾವು: ಉಕ್ರೇನ್ - ಉಕ್ರೇನ್​ ಯುದ್ಧದಲ್ಲಿ ಈವರೆಗೆ ಮೃತಪಟ್ಟವರು

Russia-Ukraine War update.. ಉಕ್ರೇನ್​ನಲ್ಲಿ ರಷ್ಯಾದ ಸೈನಿಕರು ಮತ್ತು ಅಧಿಕಾರಿಗಳು ಶರಣಾಗುತ್ತಿದ್ದಾರೆ. ಇನ್ನೂ ಕೆಲವರು ಉಕ್ರೇನ್ ನೆಲದಲ್ಲಿ ಶಸ್ತ್ರಾಸ್ತ್ರಗಳನ್ನು ಬಿಟ್ಟು ಪಲಾಯನ ಮಾಡುತ್ತಿದ್ದಾರೆ ಎಂದು ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ಸ್ಪಷ್ಟನೆ ನೀಡಿದ್ದಾರೆ.

Ukraine claims 10,000 Russians killed since beginning of war
10 ದಿನಗಳ ಯುದ್ಧದಲ್ಲಿ ರಷ್ಯಾ ಪಡೆಗಳ 10 ಸಾವಿರ ಮಂದಿ ಮೃತ: ಉಕ್ರೇನ್
author img

By

Published : Mar 5, 2022, 7:36 PM IST

ಕೀವ್(ಉಕ್ರೇನ್): ಹತ್ತು ದಿನಗಳ ಯುದ್ಧದಲ್ಲಿ ರಷ್ಯಾ ಪಡೆಗಳ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಉಕ್ರೇನ್ ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ಮಾಹಿತಿ ನೀಡಿದ್ದಾರೆ. ರಷ್ಯಾಗೆ ಸೇರಿದ ಸುಮಾರು 269 ​​ಟ್ಯಾಂಕ್‌ಗಳು, 945 ಶಸ್ತ್ರಸಜ್ಜಿತ ಯುದ್ಧ ವಾಹನಗಳು, 105 ಫಿರಂಗಿಗಳು, 50 ಎಂಎಲ್​ಆರ್​ಎಸ್​​ (Multiple Launch Rocket System), 39 ವಿಮಾನಗಳು, 40 ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು UNIAN ವರದಿ ಮಾಡಿದೆ.

ರಷ್ಯಾ ಪಡೆಗಳು ಈಗಾಗಲೇ ನಿರುತ್ಸಾಹಗೊಂಡಿವೆ. ರಷ್ಯಾದ ಸೈನಿಕರು ಮತ್ತು ಅಧಿಕಾರಿಗಳಲ್ಲಿ ಕೆಲವರು ಶರಣಾಗುತ್ತಿದ್ದಾರೆ. ಇನ್ನೂ ಕೆಲವರು ಉಕ್ರೇನ್ ನೆಲದಲ್ಲಿ ಶಸ್ತ್ರಾಸ್ತ್ರಗಳನ್ನು ಬಿಟ್ಟು ಪಲಾಯನ ಮಾಡುತ್ತಿದ್ದಾರೆ ಎಂದು ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ಸ್ಪಷ್ಟನೆ ನೀಡಿದ್ದಾರೆ. ಉಕ್ರೇನಿಯನ್ ಪಡೆಗಳು ಮಾತ್ರವಲ್ಲದೇ ಉಕ್ರೇನ್​ನ ಸಾಮಾನ್ಯ ಜನರೂ ನಿರಾಯುಧರಾಗಿದ್ದರೂ ರಷ್ಯಾ ಪಡೆಗಳ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ರಷ್ಯಾ ಸೈನಿಕರಿಗೆ ಈ ಮೂಲಕ ಮಾನಸಿಕವಾಗಿಯೂ ಪೆಟ್ಟು ನೀಡಲಾಗಿದೆ ಎಂದಿದ್ದಾರೆ.

ಉಕ್ರೇನ್​ನ ರಕ್ಷಣಾ ಸಚಿವ ಒಲೆಕ್ಸಿ ರೆಜ್ನಿಕೋವ್ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಉಕ್ರೇನ್‌ನಲ್ಲಿ ರಷ್ಯಾ ಪಡೆಗಳ ಮಿಲಿಟರಿ ಸಂಪನ್ಮೂಲಗಳು ಖಾಲಿಯಾಗುತ್ತಿದ್ದು, ಅವುಗಳ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ನಮಗೆ ಅಪಾಯವಾದರೆ ಸರ್ಕಾರವೇ ಹೊಣೆ: ಉಕ್ರೇನ್​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಅಳಲು

ರಷ್ಯಾದ ರಕ್ಷಣಾ ಸಚಿವಾಲಯದ ಅಧಿಕೃತ ಪ್ರತಿನಿಧಿಯಾದ ಇಗೊರ್ ಕೊನಾಶೆಂಕೋವ್ ಹೇಳಿಕೆಯಂತೆ ಉಕ್ರೇನ್‌ನಲ್ಲಿ 2,037 ಮಿಲಿಟರಿ ಸೌಲಭ್ಯಗಳನ್ನು ನಾಶಪಡಿಸಲಾಗಿದೆ ಎಂದು ಆರ್‌ಟಿ ವರದಿ ಮಾಡಿದೆ. ಇದರಲ್ಲಿ 71 ಕಮಾಂಡ್ ಪೋಸ್ಟ್​ಗಳು ಮತ್ತು ಸಂವಹನ ಕೇಂದ್ರಗಳು, 98 ಎಸ್​​-300 ಕ್ಷಿಪಣಿ ನಿರೋಧಕ ವ್ಯವಸ್ಥೆ, ಬಕ್ ಎಂ-1 ಮಿಸೈಲ್ ಸಿಸ್ಟಂ, ಒಸಾ ವಿಮಾನ ವಿರೋಧಿ ಕ್ಷಿಪಣಿ ವ್ಯವಸ್ಥೆ, 61 ರಾಡಾರ್ ಕೇಂದ್ರಗಳು ಸೇರಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.