ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಇಂದಿಗೆ 25 ದಿನಗಳಾಗಿವೆ. ಶೆಲ್, ಬಾಂಬ್ ದಾಳಿಯನ್ನು ರಷ್ಯಾ ನಿರಂತರವಾಗಿ ಮುಂದುವರಿಸಿದೆ. ಇದರಿಂದ ಉಕ್ರೇನ್ ಭಾಗಶಃ ಧ್ವಂಸವಾಗಿದೆ.
ರಷ್ಯಾದ ರಕ್ಕಸ ದಾಳಿಗೆ ಈವರೆಗೆ ಕನಿಷ್ಠ 902 ನಾಗರಿಕರು ಸಾವನ್ನಪ್ಪಿ, 1459 ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿ ಅಂದಾಜಿಸಿದೆ.
-
Office of the United Nations High Commissioner for Human Rights says at least 902 civilians have been killed & 1,459 injured; believes actual figures are considerably higher. As per Mariupol authorities, over 2,400 people were killed in the city alone: The Kyiv Independent
— ANI (@ANI) March 20, 2022 " class="align-text-top noRightClick twitterSection" data="
">Office of the United Nations High Commissioner for Human Rights says at least 902 civilians have been killed & 1,459 injured; believes actual figures are considerably higher. As per Mariupol authorities, over 2,400 people were killed in the city alone: The Kyiv Independent
— ANI (@ANI) March 20, 2022Office of the United Nations High Commissioner for Human Rights says at least 902 civilians have been killed & 1,459 injured; believes actual figures are considerably higher. As per Mariupol authorities, over 2,400 people were killed in the city alone: The Kyiv Independent
— ANI (@ANI) March 20, 2022
ಆದರೆ, ನಿಜಕ್ಕೂ ಈ ಸಾವಿನ ಸಂಖ್ಯೆ ಇದಕ್ಕಿಂತಲೂ ದುಪ್ಪಟ್ಟಾಗಿರಲಿದೆ ಎಂದು ಹೇಳಲಾಗುತ್ತಿದೆ. ಉಕ್ರೇನ್ನ ಇಂಡಿಪೆಂಡೆಂಟ್ ಸಂಸ್ಥೆಯ ಪ್ರಕಾರ ರಷ್ಯಾದ ಭೀಕರ ದಾಳಿಗೆ ತುತ್ತಾಗಿ ಛಿದ್ರವಾಗಿರುವ ಮರಿಯುಪೋಲ್ ನಗರವೊಂದರಲ್ಲೇ 2400 ನಾಗರಿಕರು ಸಾವನ್ನಪ್ಪಿದ್ದಾರೆ.
ಇಡೀ ದೇಶದಲ್ಲಿ ಸಾವಿನ ಸಂಖ್ಯೆ ಇದಕ್ಕೂ ಹೆಚ್ಚಿದೆ ಎಂದು ಹೇಳಿದೆ. ಈ ಮಧ್ಯೆ ರಷ್ಯಾ ದಾಳಿಯಿಂದ ತಪ್ಪಿಸಿಕೊಳ್ಳಲು ಉಕ್ರೇನ್ನಿಂದ 1 ಕೋಟಿಗೂ ಅಧಿಕ ಜನರು ದೇಶ ತೊರೆದಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಓದಿ: ಭಾರತದ ವಿದೇಶಾಂಗ ನೀತಿಯನ್ನು ಹಾಡಿ ಹೊಗಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್!