ETV Bharat / international

ಕೋವಿಡ್​ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಲು ಬ್ರಿಟನ್​ ಸಿದ್ಧತೆ - ಬೋರಿಸ್ ಜಾನ್ಸನ್

ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳನ್ನು ದೇಶದ ಔಷಧಿಗಳ ನಿಯಂತ್ರಕ ಸಂಸ್ಥೆ ಪೂರೈಸಿದರೆ ಕೋವಿಡ್​ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಲು ಮುಂದಾಗುವುದಾಗಿ ಬ್ರಿಟನ್ ಸರ್ಕಾರ ತಿಳಿಸಿದೆ.

vaccine
ಕೋವಿಡ್​ ಲಸಿಕೆ
author img

By

Published : Aug 29, 2020, 1:07 PM IST

ಲಂಡನ್​: ಕೋವಿಡ್​ ಲಸಿಕೆಯನ್ನು ಸಂಪೂರ್ಣ ಪರವಾನಗಿ ಪಡೆಯುವ ಮೊದಲೇ ತುರ್ತು ಬಳಕೆಗೆ ಅನುಮತಿಸಲು ಬ್ರಿಟನ್ ತನ್ನ ಕಾನೂನುಗಳನ್ನು ಪರಿಷ್ಕರಿಸಲು ಸಿದ್ಧತೆ ನಡೆಸುತ್ತಿದೆ.

ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳನ್ನು ದೇಶದ ಔಷಧಿಗಳ ನಿಯಂತ್ರಕ ಸಂಸ್ಥೆ ಪೂರೈಸಿದರೆ ಕೋವಿಡ್​ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಲಿದ್ದೇವೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್‌ ಸರ್ಕಾರ ಹೇಳಿಕೆ ನೀಡಿದೆ.

ನಾವು ಪರಿಣಾಮಕಾರಿ ಲಸಿಕೆಗಳನ್ನು ಅಭಿವೃದ್ಧಿಪಡಿಸಿದರೆ, ಅವುಗಳನ್ನು ಸಾಧ್ಯವಾದಷ್ಟು ಬೇಗ ರೋಗಿಗಳಿಗೆ ಲಭ್ಯವಾಗುವಂತೆ ಮಾಡಬೇಕು. ಆದರೆ ಈ ಪ್ರಕ್ರಿಯೆಯು ಹಲವಾರು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದೇವೆ ಎಂದು ಬ್ರಿಟನ್‌ನ ವೈದ್ಯಾಧಿಕಾರಿ ಜೊನಾಥನ್ ವಾನ್-ಟಾಮ್ ತಿಳಿಸಿದ್ದಾರೆ.

ಬ್ರಿಟನ್‌ನಲ್ಲಿ ಮಹಾಮಾರಿ ಕೊರೊನಾಗೆ ಈವರೆಗೆ 41,500ಕ್ಕೂ ಅಧಿಕ ಜನರು ಮೃತಪಟ್ಟಿದ್ದು, 3 ಲಕ್ಷಕ್ಕೂ ಹೆಚ್ಚು​ ಕೇಸ್​ಗಳು ಪತ್ತೆಯಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.