ETV Bharat / international

ಇಂಗ್ಲೆಂಡ್​ನಲ್ಲಿ ಒಂದೇ ದಿನ 57 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ : ಗುಣಮುಖರಾದವರ ಬಗ್ಗೆ ಇಲ್ಲ ನಿಖರ ಮಾಹಿತಿ - ಇಂಗ್ಲಂಡ್​ನಲ್ಲಿ ಕೋವಿಡ್ 19

ಇಂಗ್ಲೆಂಡ್ ಆರೋಗ್ಯ ಅಧಿಕಾರಿಗಳ ಬಳಿ ಚೇತರಿಕೆ ಕಂಡ ಸೋಂಕಿತರ ಸಂಖ್ಯೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯ ಬಗ್ಗೆ ನಿಖರ ಮಾಹಿತಿ ಇಲ್ಲ..

UK registers record increase of nearly 58,000 COVID-19
ಇಂಗ್ಲೆಂಡ್​ನಲ್ಲಿ ಒಂದೇ ದಿನ 58 ಸಾವಿರ ಸೋಂಕಿತರು ಪತ್ತೆ
author img

By

Published : Jan 3, 2021, 6:27 AM IST

ಲಂಡನ್(ಇಂಗ್ಲೆಂಡ್​) : ಬ್ರಿಟನ್​ನಲ್ಲಿ ಕೊರೊನಾ ಸೋಂಕಿನ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 57,725 ಹೊಸ ಪ್ರಕರಣ ಪತ್ತೆಯಾಗಿವೆ. ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು ನೋಂದಾಯಿತ ಪ್ರಕರಣಗಳ ಸಂಖ್ಯೆ ಕೇವಲ 2.6 ಮಿಲಿಯನ್​ಗಿಂತ ಕಡಿಮೆ. ಅಲ್ಲದೆ ಒಂದೇ ದಿನದಲ್ಲಿ 445 ಸೋಂಕಿತರು ಸಾವಿಗೀಡಾಗಿದ್ದು, ಒಟ್ಟಾರೆ ಸಾವಿನ ಸಂಖ್ಯೆ 74,570ಕ್ಕೆ ತಲುಪಿದೆ.

ಇಂಗ್ಲೆಂಡ್ ಆರೋಗ್ಯ ಅಧಿಕಾರಿಗಳ ಬಳಿ ಚೇತರಿಕೆ ಕಂಡ ಸೋಂಕಿತರ ಸಂಖ್ಯೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯ ಬಗ್ಗೆ ನಿಖರ ಮಾಹಿತಿ ಇಲ್ಲ.

ಇಂಗ್ಲೆಂಡ್ ರೂಪಾಂತರ ಕೊರೊನಾ ವೈರಸ್​ನ ಕೇಂದ್ರ ಸ್ಥಾನವಾಗಿದೆ. ಹೊಸ ರೀತಿಯ ವೈರಸ್ ಈ ಹಿಂದಿನ ವೈರಸ್​ಗಿಂತ 70 ಪ್ರತಿಶತ ಹೆಚ್ಚು ಸಾಂಕ್ರಾಮಿಕ ಎಂದು ನಂಬಲಾಗಿದೆ. ಈ ವರ್ಷ ರಜಾದಿನವನ್ನು ಪರಿಣಾಮಕಾರಿಯಾಗಿ ರದ್ದುಗೊಳಿಸುವುದರೊಂದಿಗೆ ಬಹುಪಾಲು ಇಂಗ್ಲೆಂಡ್​​ ಲಾಕ್‌ಡೌನ್‌ನ ಕಠಿಣ ಹಂತದಲ್ಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.