ETV Bharat / international

ಆಸ್ಟ್ರಾಜೆನೆಕಾ ಲಸಿಕೆ ಸುರಕ್ಷಿತ; 100 ಮಿಲಿಯನ್​ ಡೋಸ್​​ಗೆ ಆರ್ಡರ್​​ - ಆಸ್ಟ್ರಾಜನಿಕಾ

ಆಕ್ಸ್‌ಫರ್ಡ್‌ ವಿವಿ ಸಂಶೋಧನೆಯ ಆಸ್ಟ್ರಾಜೆನೆಕಾ ಕೋವಿಡ್‌ ವ್ಯಾಕ್ಸಿನ್‌ ಬಳಕೆಗೆ ಮಾಡಲಾಗಿದ್ದ ಶಿಫಾರಸನ್ನು ಯುಕೆ ಸರ್ಕಾರ ಅನುಮೋದಿಸಿದೆ.

UK government approves AstraZeneca's Covid-19 vaccine
ಆಸ್ಟ್ರಾಜನಿಕಾ ಕೋವಿಡ್‌ ಲಸಿಕೆಗೆ ಬ್ರಿಟನ್‌ ಸರ್ಕಾರ ಗ್ರೀನ್‌ ಸಿಗ್ನಲ್‌!
author img

By

Published : Dec 30, 2020, 3:51 PM IST

Updated : Dec 30, 2020, 3:57 PM IST

ಲಂಡನ್‌: ಬ್ರಿಟನ್‌ನಲ್ಲಿ ಕೋವಿಡ್‌ ರೂಪಾಂತರ ವೈರಸ್‌ ಸದ್ದು ಮಾಡುತ್ತಿರುವ ಬೆನ್ನಲ್ಲೇ ಯುಕೆ ಸರ್ಕಾರ ಆಕ್ಸ್‌ಫರ್ಡ್‌ ವಿವಿ ಸಂಶೋಧನೆಯ ಆಸ್ಟ್ರಾಜೆನೆಕಾ ಕೋವಿಡ್‌ ವ್ಯಾಕ್ಸಿನ್‌ ಬಳಕೆಗೆ ಮಾಡಲಾಗಿದ್ದ ಶಿಫಾರಸು ಅಂಗೀಕರಿಸಿದೆ. ಇನ್ಮುಂದೆ ಕೋವಿಡ್‌ ಸೋಂಕಿತರಿಗೆ ಇಲ್ಲಿ ಆಸ್ಟ್ರಾಜೆನೆಕಾ ಲಸಿಕೆ ನೀಡುವ ಸಾಧ್ಯತೆ ಇದೆ. ಈ ಸಂಬಂಧ ಬ್ರಿಟನ್​ ಸರ್ಕಾರ 100 ಮಿಲಿಯನ್​ ಡೋಸ್​ ವ್ಯಾಕ್ಸಿನ್​ಗೆ ಆರ್ಡರ್​ ಮಾಡಿದೆ.

ವ್ಯಾಕ್ಸಿನ್‌ಗೆ ಸಂಬಂಧಿಸಿದ ಪ್ರಾಧಿಕಾರ 4 ರಿಂದ 12 ವಾರಗಳ ಅವಧಿಯಲ್ಲಿ 2 ಬಾರಿ ಲಸಿಕೆಯ ಪ್ರಯೋಗ ನಡೆಸಿದೆ. ವೈಜ್ಞಾನಿಕ ಪರೀಕ್ಷೆಯಲ್ಲಿ ಈ ಲಸಿಕೆ ಅತ್ಯಂತ ಸುರಕ್ಷಿತ ಎಂಬುದು ಖಾತ್ರಿಯಾಗಿದ್ದು, ಕೋವಿಡ್‌ ಸೋಂಕು ತಡೆಯಲು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಕೋವಿಡ್ ಸೋಂಕಿತರಿಗೆ ಎರಡನೇ ಬಾರಿ ಲಸಿಕೆ ನೀಡಿದಾಗ ಅಂಥವರು 14 ದಿನಗಳೊಳಗೆ ಗುಣಮುಖರಾಗಿದ್ದು ಕಂಡು ಬಂದಿದೆ. ಅಲ್ಲದೆ ಈ ಅವಧಿಯಲ್ಲಿ ಲಸಿಕೆಯಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳಾಗಿಲ್ಲ ಎಂದು ಆಕ್ಸ್‌ಫರ್ಡ್‌ ವಿವಿ ತಿಳಿಸಿದೆ.

ಈಗಾಗಲೇ ಕೊರೊನಾಕ್ಕೆ ವಿಶ್ವಾದ್ಯಂತ 17 ಲಕ್ಷ ಜನರು ಬಲಿಯಾಗಿದ್ದಾರೆ. ಈ ನಡುವೆ ಯುಕೆಯಲ್ಲಿ ಕೊರೊನಾ ರೂಪಾಂತರ ವೈರಸ್​ ಹಾವಳಿ ಜಾಸ್ತಿಯಾಗಿದೆ. ಇದು ಈಗ ಭಾರತಕ್ಕೂ ಕಾಲಿಟ್ಟಿದೆ. ಬೆಂಗಳೂರಲ್ಲೂ ಹಲವರಿಗೆ ಹೊಸ ಕೊರೊನಾ ವೈರಸ್​ ದೃಢಪಟ್ಟಿದೆ.

Last Updated : Dec 30, 2020, 3:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.