ಲೋವ್ - ಕಟ್ - ಬ್ಲೇಜರ್ ಧರಿಸಿ ಟ್ರೋಲ್ಗೆ ಆಹಾರವಾಗಿದ್ದ ಫಿನ್ಲೆಂಡ್ ಪ್ರಧಾನಿ ಸನ್ನಾ ಮರಿನ್ ಗೆ ಈಗ ಸಾಮಾಜಿಕ ಮಾಧ್ಯಮದಲ್ಲಿ ಬೆಂಬಲದ ಸುರಿಮಳೆ ಸುರಿದಿದೆ.
ಹೌದು, ಫಿನ್ಲೆಂಡ್ ಇತಿಹಾಸದ ಅತಿ ಚಿಕ್ಕ ಪ್ರಧಾನಿ ಎಂಬ ಖ್ಯಾತಿಗೆ ಪಾತ್ರವಾಗಿರುವ ಸನ್ನಾ ಮರಿನ್ (34) ಈ ತಿಂಗಳ ಪ್ರಾರಂಭದಲ್ಲಿ ಟ್ರೆಂಡಿ ಎಂಬ ಫ್ಯಾಷನ್ ಮ್ಯಾಗಜಿನ್ ನ ಕವರ್ ಫೋಟೋ ಗೆ ಪೋಸ್ ನೀಡಿದ್ದರು. ಈ ವೇಳೆ, ಅವರು ಲೋವ್ - ಕಟ್ -ಬ್ಲೇಜರ್(ಕಪ್ಪು ಕೋಟು) ಧರಿಸಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಇವರ ಈ ಫೋಟೋಗಳಿಗೆ ಕಾಮೆಂಟ್ ಮಾಡಿದ್ದು, ಒಬ್ಬರು ಇದು 'ಸೂಕ್ತವಲ್ಲ' ಎಂದು ಮತ್ತೊಬ್ಬರು 'ಇವರು ಪ್ರಧಾನಿಯೋ ಅಥವಾ ಮಾಡೆಲ್?' ಎಂದು ಪೋಸ್ಟ್ ಮಾಡಿದ್ದರು.
ರೋಚಕದ ಸಂಗತಿ ಅಂದ್ರೆ, ಕಾಮೆಂಟ್ಗಳ ಬೆನ್ನಲ್ಲೇ ಹಲವಾರು ಮಹಿಳಾಮಣಿಯರು ಪ್ರಧಾನಿ ಧರಿಸಿದ್ದ ತರಹದ್ದೇ ಕೋಟು ಧರಿಸಿರುವ ಫೋಟೋವನ್ನು ಪೋಸ್ಟ್ ಮಾಡಿ #supportsanna ಎಂದು ಬರೆದುಕೊಳ್ಳುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಇನ್ನು ಕೆಲವರು ಪ್ರಧಾನಿಯ ಫೋಟೋವನ್ನು ಮೆಚ್ಚಿಕೊಂಡು ಸಾಥ್ ಕೊಟ್ಟಿದ್ದಾರೆ.