ETV Bharat / international

Omicron variant ಅಷ್ಟೇನೂ ಅಪಾಯಕಾರಿಯಲ್ಲ: ಇಂಗ್ಲೆಂಡ್ ವಿಜ್ಞಾನಿ

author img

By

Published : Nov 27, 2021, 7:11 PM IST

ಜಗತ್ತಿನ ನಿದ್ದೆಗೆಡಿಸಿರುವ ಕೋವಿಡ್ ವೈರಸ್​ನ ಹೊಸ ತಳಿ ಓಮಿಕ್ರೋನ್ ಬಗ್ಗೆ ಇಂಗ್ಲೆಂಡ್​ನ ವಿಜ್ಞಾನಿ ಕ್ಯಾಲಮ್ ಸೆಂಪಲ್ ಪ್ರತಿಕ್ರಿಯೆ ನೀಡಿದ್ದು, ವೈರಸ್​ನ ತೀವ್ರತೆಯನ್ನು ಲಸಿಕೆ ಮೂಲಕ ಕಡಿಮೆ ಮಾಡಬಹುದು ಎಂದಿದ್ದಾರೆ.

Top UK scientist says new COVID-19 variant Omicron not a disaster- vaccination likely to protect
Omicron variant ಅಷ್ಟೇನೂ ಅಪಾಯಕಾರಿಯಲ್ಲ: ಇಂಗ್ಲೆಂಡ್ ವಿಜ್ಞಾನಿ

ಲಂಡನ್(ಬ್ರಿಟನ್): ಅತ್ಯಂತ ವೇಗವಾಗಿ ಹರಡಬಲ್ಲ ಕೋವಿಡ್ ವೈರಸ್​ನ ಹೊಸ ತಳಿಯಾದ ಓಮಿಕ್ರೋನ್ ಬಗ್ಗೆ ಇಂಗ್ಲೆಂಡ್​ನ ವಿಜ್ಞಾನಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ಇದು ಅಪಾಯಕಾರಿಯಲ್ಲ, ಲಸಿಕೆಗಳಿಂದ ಈ ವೈರಸ್​​ನ ತೀವ್ರತೆಯನ್ನು ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್​ ಸರ್ಕಾರದ ತುರ್ತುಸ್ಥಿತಿಗಳ ವೈಜ್ಞಾನಿಕ ಸಲಹಾ ಗುಂಪಿನ (SAGE-Scientific Advisory Group for Emergencies) ವಿಜ್ಞಾನಿ ಹಾಗೂ ಸೂಕ್ಷ್ಮ ಜೀವಶಾಸ್ತ್ರಜ್ಞ ಪ್ರೊಫೆಸರ್ ಕ್ಯಾಲಮ್ ಸೆಂಪಲ್ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಹೊಸ B.1.1.529 ರೂಪಾಂತರದ ಕುರಿತು ಸರ್ಕಾರಕ್ಕೆ ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.

ದಕ್ಷಿಣ ಆಫ್ರಿಕಾ, ಬೋಟ್ಸ್ವಾನಾ, ಲೆಸೊಥೊ, ಎಸ್ವಟಿನಿ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಓಮಿಕ್ರೋನ್ ತಳಿ ಪತ್ತೆಯಾಗಿದ್ದು, ಈ ಆರೂ ರಾಷ್ಟ್ರಗಳ ಮೇಲೆ ಇಂಗ್ಲೆಂಡ್ ಪ್ರಯಾಣ ನಿರ್ಬಂಧ ವಿಧಿಸಿದೆ. ಈ ಹೊಸ ತಳಿಯ ಬಗ್ಗೆ ಅಲ್ಲಿನ ಆರೋಗ್ಯಾಧಿಕಾರಿಗಳು ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದಾರೆ.

ಕೆಲವರು ಹೊಸ ಓಮಿಕ್ರೋನ್ ವೈರಸ್ ಅತ್ಯಂತ ಭಯಾನಕ ತಳಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಓಮಿಕ್ರೋನ್ ವೈರಸ್​ನ ತೀವ್ರತೆಯನ್ನು ಕೋವಿಡ್ ವ್ಯಾಕ್ಸಿನೇಷನ್​ನಿಂದ ಪರಿಣಾಮಕಾರಿಯಾಗಿ ತಗ್ಗಿಸಬಹುದು ಎಂದು ಪ್ರೊಫೆಸರ್ ಸೆಂಪಲ್ ಬಿಬಿಸಿಗೆ ಮಾಹಿತಿ ನೀಡಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಈ ವೈರಸ್ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಇದಾದ ನಂತರ ಬೋಟ್ಸ್ವಾನಾ, ಬೆಲ್ಜಿಯಂ, ಹಾಂಗ್ ಕಾಂಗ್ ಮತ್ತು ಇಸ್ರೇಲ್​ನಲ್ಲಿಯೂ ಪತ್ತೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಓಮಿಕ್ರೋನ್‌ ವೈರಸ್ ಹರಡುವಿಕೆಯನ್ನು ತಡೆಯಲು ದಕ್ಷಿಣ ಆಫ್ರಿಕಾದ ದೇಶಗಳ ಮೇಲೆ ಹಲವಾರು ರಾಷ್ಟ್ರಗಳು ಪ್ರಯಾಣ ನಿರ್ಬಂಧ ವಿಧಿಸಿವೆ.

ಒಂದು ವೇಳೆ ಓಮಿಕ್ರೋನ್ ವೈರಸ್ ಇಂಗ್ಲೆಂಡ್​ಗೆ ಬರುವುದನ್ನು ತಡೆಯಲು ಸಾಧ್ಯವಾಗದಿದ್ದರೂ, ಸ್ವಲ್ಪ ಮಟ್ಟಿಗೆ ತಡವಾಗಿ ಬಂದರೂ, ವ್ಯಾಕ್ಸಿನೇಷನ್ ಅಭಿಯಾನ ವೇಗಗೊಂಡು ಹೆಚ್ಚಿನ ಮಂದಿ ರೋಗ ನಿರೋಧಕ ಶಕ್ತಿ ಪಡೆಯುತ್ತಾರೆ. ಇದು ವೈರಸ್ ವಿರುದ್ಧ ಹೋರಾಡಲು ಸಹಾಯಕವಾಗುತ್ತದೆ. ವಿಜ್ಞಾನಿಗಳೂ ಈ ಅವಧಿಯಲ್ಲಿ ಹೆಚ್ಚಿನ ಸಂಶೋಧನೆ ಮಾಡಬಹುದು ಎಂದು ಸೆಂಪಲ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ 'ಓಮಿಕ್ರೋನ್​​' ಭಯ: ದೇಶಿ ಪ್ರಯಾಣಿಕರಿಗೆ RT-PCR ಪರೀಕ್ಷೆ, ಎರಡು ಡೋಸ್​ ಲಸಿಕೆ ಕಡ್ಡಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.