ETV Bharat / international

ವಿಶ್ವದ 100 ಪ್ರಭಾವಿಗಳ ಪಟ್ಟಿಯಲ್ಲಿ ಮುಖೇಶ್​ ಅಂಬಾನಿ... ವ್ಯಕ್ತಿಚಿತ್ರ ಬರೆದ ಆನಂದ್​ ಮಹೀಂದ್ರ

author img

By

Published : Apr 19, 2019, 9:46 PM IST

ವಿಶ್ವದ ನಾನಾ ವಲಯದ ಜನರನ್ನು ವಿವಿಧ ಕ್ಷೇತ್ರಗಳಲ್ಲಿ ತಮ್ಮದೆಯಾದ ಸಾಧನೆಯ ಮೂಲಕ ಜಗತ್ತಿನ ಗಮನಸೆಳೆಯುವ 100 ಸಾಧಕರನ್ನು ನ್ಯೂಯಾರ್ಕ್​ನ ಟೈಮ್​ ಮ್ಯಾಗಜಿನ್​ ಪ್ರತಿ ವರ್ಷ ಪಟ್ಟಿ ಮಾಡುತ್ತದೆ. 2019ರ ಸಾಲಿನಲ್ಲಿ ಭಾರತದ ಉದ್ಯಮಿ ಮುಖೇಶ್​ ಅಂಬಾನಿ, ವಕೀಲರಾದ ಅರುಂಧತಿ ಕಟ್ಜು, ಮೇನಕಾ ಗುರುಸ್ವಾಮಿ ಸೇರಿದಂತೆ ಹಲವರು ಈ ಪಟ್ಟಿಯಲ್ಲಿದ್ದಾರೆ.

ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್​: ಅಮೆರಿಕದ ಪ್ರತಿಷ್ಠಿತ 'ದಿ ಟೈಮ್ ಮ್ಯಾಗಜಿನ್​​- 2019'ರ ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಭಾರತದ ಉದ್ಯಮಿ ಮುಖೇಶ್ ಅಂಬಾನಿ, ವಕೀಲರಾದ ಅರುಂಧತಿ ಕಾಟ್ಜು, ಮೇನಕಾ ಗುರುಸ್ವಾಮಿ ಸೇರಿದಂತೆ ಹಲವರು ಸ್ಥಾನ ಪಡೆದಿದ್ದಾರೆ.

ಜಗತ್ತಿನ ಅತ್ಯಂತ ಪ್ರಭಾವಿ ಉದ್ಯಮಿಗಳು, ರಾಜಕೀಯು ನಾಯಕರು, ಖ್ಯಾತ ಪ್ರವರ್ತಕರು, ಕಲಾವಿದರು, ಸಿನಿಮಾ ನಟರು, ತಂತ್ರಜ್ಞರು, ವಿಜ್ಞಾನಿಗಳು ಹೆಸರು ಈ ಪಟ್ಟಿಯಲ್ಲಿದೆ. ಜಗದ್ವಿಖ್ಯಾತ 100 ಪ್ರಭಾವಿಗಳ ಸಾಲಿನಲ್ಲಿ ಭಾರತದವರು ಸ್ಥಾನಪಡೆದಿರುವುದು ಹೆಮ್ಮೆಯ ಸಂಗತಿ.

ಇಂಡಿಯನ್- ಅಮೆರಿಕನ್ ಹಾಸ್ಯಗಾರ ಹಸನ್ ಮಿನ್ಹಾಜ್, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ಪೋಪ್​ ಫ್ರಾನ್ಸಿಸ್, ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್, ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್, ಫೇಸ್​ಬುಕ್ ಸಂಸ್ಥಾಪಕ ಮಾರ್ಕ್​ ಜುಕರ್​ಬರ್ಗ್​ ಕೂಡ ಈ ಪಟ್ಟಿಯಲ್ಲಿದ್ದಾರೆ.

ಮಹೀಂದ್ರ ಗ್ರೂಪ್​ ಮುಖ್ಯಸ್ಥ ಆನಂದ್ ಮಹೀಂದ್ರ ಟೈಮ್ ಮ್ಯಾಗಜಿನ್​ನಲ್ಲಿ ಮುಖೇಶ್​ ಅಂಬಾನಿ ಅವರ ಕುರಿತು ವ್ಯಕ್ತಿಚಿತ್ರ ಬರೆದಿದ್ದಾರೆ. 'ಮುಖೇಶ್ ಅಂಬಾನಿ ಅವರು ಅವರ ತಂದೆ ಧೀರೂಬಾಯಿ ಅಂಬಾನಿಯಂತೆ ಬಹಳ ದೂರದೃಷ್ಟಿಯುಳ್ಳ ಉದ್ಯಮಿ. ಅವರ ಶ್ರಮದ ಫಲವಾಗಿ ರಿಲಯನ್ಸ್​ ಇಂಡಸ್ಟ್ರೀಸ್​ ಇಂದು ಜಾಗತಿಕಮಟ್ಟದಲ್ಲಿ ಗುರುತಿಸಿಕೊಂಡಿದೆ' ಎಂದಿದ್ದಾರೆ.

'ಮುಖೇಶ್ ಅಂಬಾನಿ ಅವರ ದೃಷ್ಟಿ ಹಾಗೂ ಚಿಂತನೆ ವಿಭಿನ್ನ ರೀತಿಯದ್ದು. ತಂದೆಗಿಂತಲೂ ಅತ್ಯಂತ ಮಹತ್ವಾಕಾಂಕ್ಷೆಯ ಒಳನೋಟ ಹೊಂದಿದ್ದಾರೆ. ಹೊಸ- ಹೊಸ ಪ್ರಯೋಗಗಳ ಮುಖೇನ ತಮ್ಮ ಸಂಸ್ಥೆಯನ್ನು ಮತ್ತೊಂದು ಎತ್ತರಕ್ಕೆ ಕೊಂಡ್ಯೊಯುತ್ತಿದ್ದಾರೆ. ಅವರ ದೃಷ್ಟಿಕೋನದ ಪ್ರತೀಕವಾಗಿ ರಿಲಯನ್ಸ್​ ಜಿಯೋ, ದೇಶದಲ್ಲಿ ಕಡಿಮೆ ದರದ ಮೊಬೈಲ್ ಡಾಟಾ ಹಾಗೂ ಅಗ್ಗದ ಕರೆ ದರದ 4ಜಿ ಸೇವೆಯು ಈಗಾಗಲೇ 280 ಮಿಲಿಯನ್​ ಗ್ರಾಹಕರನ್ನು ಹೊಂದಿದೆ' ಎಂದು ಪ್ರಶಂಸಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.